ಆನ್ಲೈನ್ ಶಿಕ್ಷಣ ಪಡೆಯಕ್ಕಾಗದ ಮಕ್ಕಳಿಗೆ ಫ್ಲೈಓವರ್ ಕೆಳಗೆ ಪಾಠ ಮಾಡುತ್ತಿರುವ ಇವರು ನಿಜವಾದ ಹೀರೋ!!

0
495

ಸರ್ಕಾರದ ನೆರವಿಲ್ಲದೆ, ಆನ್’ಲೈನ್ ಕ್ಲಾಸ್ ಅಂಟೆಂಡ್ ಮಾಡಲು ಆಗದ ಬಡ ಮಕ್ಕಳಿಗಾಗಿ ಉಚಿತ ಶಾಲೆ ನಡೆಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ 25 ವರ್ಷದ ಸತ್ಯೇಂದ್ರ ಪಾಲ್.

@theprint.in

ಹೌದು, ಗಣಿತ ಪದವೀಧರ ಉತ್ತರಪ್ರದೇಶ ಮೂಲದ ಸತ್ಯೇಂದ್ರ ಪಾಲ್ ಅವರು ದೆಹಲಿಯ ಮೆಟ್ರೋ ಫ್ಲೈ ಓವರ್ ಕೆಳಗೆ 2015ರಿಂದ ಸ್ಲಂ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಪಂಚಶೀಲ ಶಿಕ್ಷಣ ಸಂಸ್ಥಾನದ ಅಡಿಯಲ್ಲಿ ದೆಹಲಿಯ ಮೆಟ್ರೋ ಸೇತುವೆ ಕೆಳಗೆ ಚಿಕ್ಕದಾಗಿ ಶಾಲೆ ಶುರು ಮಾಡಿದರು.

ಕಳೆದ ಮಾರ್ಚ್ ತಿಂಗಳಿನಲ್ಲಿ ಕೊರೊನಾ ಹಿನ್ನೆಲೆ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್’ಡೌನ್ ಮಾಡಿ ಘೋಷಿಸಿದ್ದರು. ಆಗಿನಿಂದ ಪಾಲ್ ಅವರ ಶಾಲೆಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಆನ್’ಲೈನ್ ಕ್ಲಾಸ್ ಗೆ ಅಂಟೆಂಡ್ ಆಗಲು ಆಗದ ಅಂದರೆ, ಲ್ಯಾಪ್’ಟಾಪ್, ಮೊಬೈಲ್ ವ್ಯವಸ್ಥೆ ಇಲ್ಲದ ಬಡ ಮಕ್ಕಳು ಇವರ ಶಾಲೆಗೆ ಬರುತ್ತಿದ್ದಾರೆ.

ಇವರು ವಾರದ ಏಳು ದಿನವೂ ಪಾಠ ಮಾಡುತ್ತಾರೆ. ಪಾಲ್ ಅವರ ಶಾಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದು, ಸ್ಯಾನಿಟೈಸರ್ ಇಟ್ಟಿದ್ದಾರೆ. ಅಲ್ಲದೇ, ಪಾಲ್ ಅವರು ತಮ್ಮ ಮಕ್ಕಳಿಗೆ ಮಾಸ್ಕ್ ನೀಡಿದ್ದಾರೆ. ಪಾಲ್ ಅವರ ಶಾಲೆಗೆ ಬರುವ ಮಕ್ಕಳೆಲ್ಲರೂ ಹತ್ತಿರದವರೇ ಆಗಿದ್ದಾರೆ. ಇನ್ನು ಮಕ್ಕಳಿಗೆ ಪಾಲ್ ಅವರು ಗಣಿತ, ಇಂಗ್ಲೀಷ್ ಮತ್ತು ಸೈನ್ಸ್ ವಿಷಯಗಳನ್ನು ಪಾಠ ಮಾಡುತ್ತಾರೆ. ಇನ್ನು ಮಕ್ಕಳಿಗೆ ಪ್ರತಿ ವಾರ ಪರೀಕ್ಷಗಳನ್ನು ಪಾಲ್ ಅವರು ನೀಡುತ್ತಾರೆ. ಇದರೊಂದಿಗೆ ಶಾಲೆಗೆ ಬರಲಾಗದ ಮಕ್ಕಳಿಗೂ ಪಾಲ್ ಅವರು ಸಹಾಯ ಮಾಡುತ್ತಿದ್ದಾರೆ.

@theprint.in

ಯಮುನಾ ತಟದಲ್ಲಿ ಜೋಪಡಿಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿರುವ ಬಡ ಕುಟುಂಬಗಳು ಹೊತ್ತು ಊಟಕ್ಕಾಗಿ ಕೂಲಿ ಮಾಡಿಕೊಂಡು ಕಷ್ಟ ಪಡುತ್ತಾರೆ. ಹೀಗಿರುವಾಗ ಇಲ್ಲಿನ ಮಕ್ಕಳಿಗೆ ಶಿಕ್ಷಣ ನೀಡೋದು ಬಡ ಪೋಷಕರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಡ ಮಕ್ಕಳಿಗೂ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಪಾಲ್ ಅವರ ಈ ಶಾಲೆ ನಡೆಸುತ್ತಿದ್ದಾರೆ.

ಇದೊಂದು ಓಪನ್ ಹೌಸ್ ಸ್ಕೂಲ್ ಆಗಿದ್ದು, ಮೆಟ್ರೋ ಸೇತುವೆಯೇ ಇದಕ್ಕೆ ಸೂರಾಗಿದೆ. ನೆಲದ ಮೇಲೆ ಕಾರ್ಪೆಟ್ ಹಾಕಿ ಅದರ ಮೇಲೆ ಮಕ್ಕಳನ್ನು ಕೂರಿಸಿ ಇಲ್ಲಿ ಪಾಠ ಮಾಡಲಾಗುತ್ತದೆ. ಅಲ್ಲದೆ ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹೆಚ್ಚಿಗೆ ಓದುವ ಆಸೆ ಇದ್ದರೆ, ಅವರನ್ನು ಪಾಲ್ ಅವರು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಅವರು ಹೆಚ್ಚಿನ ಶಿಕ್ಷಣ ಪಡೆಯಲು ಸಹಾಯ ಮಾಡುತ್ತಾರೆ.

Also read: ತ್ಯಾಜ್ಯದಿಂದ ಪೇಪರ್ ತಯಾರಿಸುತ್ತಿರುವ ಈ ಕಂಪನಿ ಸಾವಿರಾರು ಲೀಟರ್ ನೀರು ಮತ್ತು ಮರಗಳನ್ನು ಉಳಿಸೋದನ್ನು ಕಂಡರೆ ಭಾರತೀಯರ ಅವಿಷ್ಕಾರವನ್ನು ಮೆಚ್ಚುತ್ತೀರಾ!!