ರಾಜ್ಯದಲ್ಲಿ ಡೆಂಗ್ಯೂ ಹಾಗೂ ಫೀವರ್ ಗಳಿಂದ ಹೆಚ್ಚು ಜನ ಬಳಲುತ್ತಿದ್ದಾರೆ. ಇಂತಹ ರೋಗಿಗಳಿಗೆ ರಕ್ತದ ಅವಶ್ಯಕತೆ ತುಂಬಾನೇ ಇರುತ್ತದೆ. ತಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಫೋನ್ ಮಾಡಿ ಎಲ್ಲಿಯೂ ರಕ್ತ ಸಿಗದೆ ಇದ್ದಾಗ ಕೈ ಮುರಿಯುವುದ ಕಾಮನ್ ಆದ್ರೆ, ಇನ್ನು ಕೈ ಮುರಿಯುವ ಪ್ರಶ್ನೆಯೇ ಇಲ್ಲ. ನೀವು ನಿಮ್ಮ ಜೇಬಿನಿಂದ ಫೋನ್ ತೆಗೆದು ನಿಮ್ಮ ಬೆರಳಿನಿಂದ ಆ್ಯಪ್ ನಲ್ಲಿ ನಿಮಗೆ ಬೇಕಿರುವ ರಕ್ತದ ಬಗ್ಗೆ ಸೂಚಿಸಿದ್ರೆ ಕ್ಷಣಮಾತ್ರದಲ್ಲಿ ಇದಕ್ಕೆ ಕುಳಿತು ಕೊಂಡಲ್ಲೇ ಪರಿಹಾರ ಫಿಕ್ಸ್..
ರಕ್ತದಾನ ಮಹಾದಾನ ಎಂದು ಹಿರಿಯುರು ಹೇಳ್ತಾರೆ. ಅದರಂತೆ ರೋಗಿಗಳಿಗೆ ಅವಶ್ಯಕತ ಇದ್ದಾಗ ರಕ್ತವನ್ನು ನೀಡಿದ್ರೆ, ಒಂದು ಜೀವ ಉಳಿಸಿದ ಹೆಮ್ಮೆ ನಿಮ್ಮದಾಗುತ್ತದೆ. ಅಂದಹಾಗೆ ಡೆಂಗ್ಯೂ ಹಾಗೂ ವೈರಲ್ ಗಳಿಂದ ಬಳಲುತ್ತಿರುವ ಜನರಿಗೆ ಇಂತಹದ್ದೇ ರಕ್ತ ಬೇಕು ಎಂದು ಇರುತ್ತದೆ. ಉದಾಹರಣಗೆ ಹಿಮೋಗ್ಲೋಬಿನ್, ಪೇಟ್ಲೆಟ್ಸ್, ಎಂದು ವಿಂಗಡಿಸಿ ಅಳೆದು ತೂಗಿ ರಕ್ತ ನೀಡಬೇಕಾಗುತ್ತದೆ.
ಡೆಂಗ್ಯೂ ಹೇಗೆ ಹರಡುತ್ತದೆ..?
ಸಾಮಾನ್ಯವಾಗಿ ಸೋಂಕು ಆದ ನಂತರ ಮೂರು ಅಥವಾ ಹದಿನಾಲ್ಕು ದಿನಗಳಲ್ಲಿ ಲಕ್ಷಣ ತೋರುವುದು. ಇದರ ಲಕ್ಷಣ , ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿ ನೋವು, ಮತ್ತು ವಿಶಿಷ್ಟ ಚರ್ಮದ ಗುಳ್ಳೆಗಳ ಒಳಗೊಂಡಿರಬಹುದು. ಗುಣಮುಖವಾಗಲು ಸಾಮಾನ್ಯವಾಗಿ ಕಡಿಮೆ ಎಂದರೆ ಎರಡು ರಿಂದ ಏಳು ದಿನಗಳ ಕಾಲ ತೆಗೆದುಕೊಳ್ಳುತ್ತದೆ.
ಡೆಂಗಿ ಜ್ವರದ ಲಕ್ಷಣಗಳು
- ತೀವ್ರ ತಲೆನೋವು
- ಕಣ್ಣು ನೋವು
- ಜಂಟಿ ಮತ್ತು ಸ್ನಾಯು ನೋವು
- ಹಸಿವಾಗದಿರುವುದು
- ಉದರದ ಅಸ್ವಸ್ಥತೆ
- ತುರಿಕೆ
- 103 ಡಿಗ್ರಿಗಿಂತಲೂ ಹೆಚ್ಚಿನ ಜ್ವರ
- ಚಿಕ್ಕ ಮಕ್ಕಳಿಗೆ ಶೀತ , ಭೇದಿ, ತುರಿಕೆ ಮತ್ತು ತೀವ್ರ ಸಂದರ್ಭಗಳಲ್ಲಿ ರೋಗಗ್ರಸ್ತವಾಗುವಿಕೆ
- ಪ್ಲೇಟ್ಲೆಟ್ ಕೌಂಟ್ ಇಳಿಕೆಯಾಗುವುದು
- ಅತಿಯಾದ ಸುಸ್ತು.
ಡೆಂಗಿ ಈಡಿಸ್ ಎಂಬ ಸೊಳ್ಳೆಗಳಿಂದ ಹರಡುವ ಸೋಂಕು. ಹೂವಿನ ಕುಂಡ, ಬೀಸಾಕಿದ ಟೈರ್, ಹಳೆಯ ಎಣ್ಣೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿ ಇವುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದಲೇ ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತವೆ.
ಇನ್ನು ಕೆಲವರು ರಕ್ತದಾನ ಮಾಡಿದ್ರೆ ದೇಹದ ತೂಕ ಕಡಿಮೆ ಯಾಗುತ್ತದೆ. ಅಶಕ್ತತೆ ಬರುತ್ತದೆ ಎಂಬ ಮಾತಿದೆ. ಅದೆಲ್ಲಾ ಸುಳ್ಳು.