ಚಾಕೊಲೆಟ್.. ಮಧ್ಯ.. ಇಲಿ ತಿಂದು ಬಿಟ್ಟ ಆಹಾರವನ್ನು ಪ್ರಸಾದವನ್ನಾಗಿ ನೀಡುವ ದೇವಸ್ಥಾನಗಳು ಇಲ್ಲಿದೆ ನೋಡಿ..

0
1894

ಸಾಮಾನ್ಯವಾಗಿ ಲಾಡು ಕಲ್ಲು ಸಕ್ಕರೆ ಇತ್ಯಾದಿಗಳನ್ನು ದೇವಸ್ಥಾನಗಳಲ್ಲಿ ಪ್ರಸಾದವನ್ನಾಗಿ ಸ್ವೀಕರಿಸಿರುತ್ತೇವೆ.. ಆದರೆ ಕೆಲವು ದೇವಸ್ಥಾನಗಳಲ್ಲಿ ಕೊಡುವ ಪ್ರಸಾದಗಳನ್ನು ನೋಡಿದರೆ ಆಶ್ಚರ್ಯವಾಗುವುದಂತೂ ಸತ್ಯ.. ಬನ್ನಿ ಯಾವ ಯಾವ ದೇವಸ್ಥಾನಗಳಲ್ಲಿ ಯಾವ ರೀತಿಯ ಪ್ರಸಾದವನ್ನು ನೀಡುತ್ತಾರೆ ಎಂದು ತಿಳಿದುಕೊಳ್ಳೋಣ.

ಇಲಿಗಳು ಎಂಜಲು ಮಾಡಿದ ಪ್ರಸಾದ

ಹೌದು ಇಲಿಗಳು ಎಂಜಲು ಮಾಡಿದ ಪ್ರಸಾದವನ್ನು ರಾಜಸ್ಥಾನದಲ್ಲಿರುವ ಕರ್ಣಿಮಾತ ದೇವಾಲಯದಲ್ಲಿ ಕೊಡುತ್ತಾರೆ.. ಈ ದೇವಸ್ಥಾನದಲ್ಲಿ ಇಲಿಗಲು ಓಡಾಡುತ್ತವೆ.. ಇವುಗಳು ತಿಂದು ಮಿಕ್ಕಿದ ಪದಾರ್ಥಗಳನ್ನು ಪ್ರಸಾದವನ್ನಾಗಿ ಭಕ್ತರಿಗೆ ಕೊಡಲಾಗುತ್ತದೆ.

ಒದ್ದೆ ಬಟ್ಟೆ

ಗುವಾಹತಿಯಲ್ಲಿರುವ ಕಾಮಾಖ್ಯ ದೇವಾಲಯದಲ್ಲಿ ಅಮ್ಮನವರಿಗೆ ಉಡಿಸಿದ ಒದ್ದೆ ಬಟ್ಟೆಯನ್ನು ಪ್ರಸಾದವನ್ನಾಗಿ ನೀಡುತ್ತಾರೆ.

ಚಾಕೊಲೇಟ್

ಕೇರಳದ ಬಾಲ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಾಕೊಲೇಟ್ ಅನ್ನು ಪ್ರಸಾದ ರೂಪವಾಗಿ ನೀಡುತ್ತಾರೆ.

ನೂಡಲ್ಸ್, ಫ್ರೈಡ್ ರೈಸ್

ಕೊಲ್ಕತ್ತಾದಲ್ಲಿರುವ ಕಾಳಿ ದೇವಾಲಯದಲ್ಲಿ ಪ್ರಸಾದವಾಗಿ ನೂಡಲ್ಸ್ ಫ್ರೈಡ್ ರೈಸ್ ಅನ್ನು ನೀಡಲಾಗುತ್ತದೆ.. ಈ ದೇವಸ್ಥಾನವನ್ನು ಚೀನಿಯರು ಕಟ್ಟಿದ್ದು ಎಂಬುದು ವಿಶೇಷವಾಗಿದೆ.

ಮದ್ಯ ವನ್ನು ಪ್ರಸಾದವನ್ನಾಗಿ ನೀಡುವ ದೇವಸ್ಥಾನ

ಮದ್ಯ ಪ್ರದೇಶದ ಕಾಲ ಭೈರವೇಶ್ವರ ದೇವಾಲಯದಲ್ಲಿ ಭೈರವನಿಗೆ ಮದ್ಯದಲ್ಲೇ ಪೂಜೆ ಮಾಡಿ ಅದನ್ನೇ ಪ್ರಸಾದವನ್ನಾಗಿ ನೀಡುತ್ತಾರೆ.

ದೋಸೆಯನ್ನು ಪ್ರಸಾದವನ್ನಾಗಿ ನೀಡುವ ದೇವಸ್ಥಾನ

ತಮಿಳುನಾಡಿನ ಅಳಗಾರ್ ಮಹಾವಿಷ್ಣುವಿನ ದೇವಾಲಯದಲ್ಲಿ ದೇವರ ದರ್ಶನದ ನಂತರ ದೋಸೆಗಳನ್ನು ಪ್ರಸಾದವನ್ನಾಗಿ ನೀಡುತ್ತಾರೆ.

ಶುಭವಾಗಲಿ ಶೇರ್ ಮಾಡಿ..