ನೀವು ಪೇಟಿಎಂ ಗ್ರಾಹಕರೇ? ಹಾಗಾದ್ರೆ ನಿಮಗೆ ಕಂಪೆನಿಯಿಂದ ಗಂಭೀರ ಎಚ್ಚರಿಕೆ; ಸ್ವಲ್ಪ ಯಾಮಾರಿದರೆ ನಿಮ್ಮ ಹಣ ಗುಳುಂ.!

0
402

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವ್ಯವಹಾರಕ್ಕೆ ಹೆಚ್ಚು ವಾಲಿಕೊಂಡಿರುವ ಜನರು ಮೋಸಕ್ಕೆ ಬಲಿ ಆಗುತ್ತಿರುವುದು ಹೆಚ್ಚುತ್ತಿದೆ. ಅದಕ್ಕಾಗಿ ಹಲವು ಆನ್ಲೈನ್ ಸಂಸ್ಥೆಗಳು ಮೇಲಿಂದ ಮೇಲೆ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿವೆ. ಅದರಂತೆ ಈಗ ಮತ್ತೆ pytem ಪೇಟಿಎಂ ಗ್ರಾಹಕರಿಗೆ ಕಂಪೆನಿಯಿಂದ ಗಂಭೀರ ಎಚ್ಚರಿಕೆ! ನೀಡಿದೆ. ಏಕೆಂದರೆ ಹ್ಯಾಕರ್ಸ್​ಗಳ ಉಪಟಲ ಜೋರಾಗುತ್ತಿದ್ದು, ಕೆವೈಸಿ(ನೋ ಯುವರ್​ ಕಸ್ಟಮರ್​) ಪೂರ್ಣಗೊಳಿಸುವ ಸಲುವಾಗಿ ಆ್ಯಪ್ ಡೌನ್​ಲೋಡ್​ ಮಾಡುವಂತೆ ಯಾವುದಾರರು ಎಸ್​ಎಮ್​ಎಸ್​, ಕರೆ ಬಂದರೆ ಅವುಗಳನ್ನು ಬಳಸದಿರಿ ಎಂದು ತಿಳಿಸಿದೆ.

ಪೇಟಿಎಂ ಗ್ರಾಹಕರಿಗೆ ಎಚ್ಚರಿಕೆ:

ಹೌದು ಜನಪ್ರಿಯ ಆನ್‌ಲೈನ್ ವಾಲಟ್ ಅಪ್ಲಿಕೇಷನ್ ಪೇಟಿಎಂ ತನ್ನ ಗ್ರಾಹಕರಿಗೆ ಎಚ್ಚರಿಕೆಯೊಂದನ್ನು ನೀಡಿದೆ. ನಕಲಿ ಕರೆಯ ಮೂಲಕ ಬಳಕೆದಾರರ ಮಾಹಿತಿಯನ್ನು ಮತ್ತು ಹಣವನ್ನು ಎಗರಿಸುವ ಹ್ಯಾಕರ್ಸ್​ ಗುಂಪೊಂದು ಬಗ್ಗೆ ಪೇಟಿಎಂ ಸಂಸ್ಥೆಯ ಗೋಚರಕ್ಕೆ ಬಂದಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ‘ನಾವು ಪೇಟಿಎಂ ಸಂಸ್ಥೆಯಿಂದ ಕರೆ ಮಾಡುತ್ತಿದ್ದೇವೆ ನಿಮ್ಮ ಖಾತೆಯನ್ನು ರಿ-ಆ್ಯಕ್ಟೀವೇಟ್​ ಮಾಡಿ ಕೆವೈಸಿಯನ್ನು ನಮೂದಿಸಿ ಎಂಬ ಕರೆಗಳು ಬಂದರೆ ತಕ್ಷಣ ಎಚ್ಚರ ವಹಿಸಿ ಎಂದು ತಿಳಿಸಿದೆ. ಮಾತ್ರವಲ್ಲದೆ, ರಿ- ಇನ್​​ಸ್ಟಾಲ್​ ಮಾಡುವಾಗ ಎನಿಡೆಸ್ಕ್​, ಟೀಮ್​ವ್ಯೂವರ್​ಮ ಕ್ವಿಕ್​ ಸಪೋರ್ಟ್​ ಮೂಲಕ ಪರ್ಮಿಷನ್​ ಕೇಳುತ್ತದೆ ಎಂದು ಹೇಳಿದೆ.

ಪೇಟಿಎಂ ಮತ್ತು ಕೆವೈಸಿ ಹೇಗೆ ಲಿಂಕ್?

ಗ್ರಾಹಕರು ಪೇಟಿಎಂನ ಪೂರ್ಣ ಪ್ರಮಾಣದ ಸೇವೆ ಬಳಸಬೇಕಾದರೆ ಅವರು ಕೆವೈಸಿ ಪೂರ್ಣಗೊಳಿಸುವುದು ಅನಿವಾರ್ಯ. ಆದರೆ, ಕೆವೈಸಿ ಪೂರ್ಣಗೊಳಿಸದ ಗ್ರಾಹಕರಿಗೆ ಕಸ್ಟಮರ್ ಕೇರ್ ಎಂದು ಹೇಳಿಕೊಂಡು ಬರುವ ಕರೆಗಳು ಎನಿಡೆಸ್ಕ್ , ಕ್ವಿಕ್‌ಸಪೋರ್ಟ್ ಅಥವಾ ಟೀಮ್ ವ್ಯೂವರ್‌ನಂತಹ ಆಪ್‌ಗಳನ್ನು ಅಳವಡಿಸಿ ಎಂದು ಹೇಳುತ್ತವೆ. ಆ ಕರೆಯನ್ನು ನಂಬಿ ಇಂತಹ ಪ್‌ಗಳನ್ನು ಅಳವಡಿಸಿ, ಅಲ್ಲಿ ವಿವರಗಳನ್ನು ನೀಡುತ್ತಾ ಹೋದರೆ, ಗ್ರಾಹಕರ ಖಾತೆ ಕನ್ನ ಹಾಕಬಹುದು ಎಂದು ಹೇಳಿದೆ.

ವಂಚನೆ ಕರೆ ಮಾಡುವವರಿಗೆ ರಿಮೋಟ್ ಆಕ್ಸೆಸ್ ಡೆಸ್ಕ್ ಕೋಡ್ ಅಗತ್ಯವಿರುತ್ತದೆ ಮತ್ತು ಈ ಆಪ್‌ಗಳು ಅದನ್ನು ಕೇಳುತ್ತದೆ. ಒಮ್ಮೆ ನೀವು 9-ಅಂಕಿಯ ಅಥವಾ 10-ಅಂಕಿಯ ಕೋಡ್ ಅನ್ನು ವಂಚನೆ ವ್ಯಕ್ತಿಗೆ ನೀಡಿದರೆ, ವಂಚನೆ ಕರೆ ಮಾಡುವವರು ನಿಮ್ಮ ಮೊಬೈಲ್ ಪರದೆಯನ್ನು ತನ್ನ PC ಯಲ್ಲಿ ನೋಡುತ್ತಾರೆ ಮತ್ತು ಅವನು ಅದನ್ನು ರೆಕಾರ್ಡ್ ಮಾಡಬಹುದು. ಮತ್ತು ನೀವು ಏನು ಮಾಡಿದರೂ ನಿಮ್ಮ ಮೊಬೈಲ್ ಪರದೆಯು ಸ್ವಯಂಚಾಲಿತವಾಗಿ ವಂಚನೆ ಕರೆ ಮಾಡುವವರ PC ಯಲ್ಲಿ ದಾಖಲಿಸಲ್ಪಡುತ್ತದೆ.

ಅಷ್ಟೇ ಅಲ್ಲದೆ ಇನ್ನು ಇನ್​ಸ್ಟಾಲ್​ ಮಾಡಿದಂತೆ 9 ಸಂಖ್ಯೆಯ ಕೋಡ್​ ಅನ್ನು ಕೇಳುತ್ತದೆ. ಕೋಡ್​ ನಮೂದಿಸಿದಂತೆ ನಿಮ್ಮ ಪೇಟಿಎಂ ಖಾತೆ ಬೇರೆಯವರು ಹಿಡಿತದಲ್ಲಿರುತ್ತದೆ ಎಂದು ಹೇಳಿದೆ. ಮಾತ್ರವಲ್ಲದೆ, ಕೆವೈಸಿ ನಮೂದಿಸಿದಂತೆ ಎಸ್​ಎಮ್​ಎಸ್​ ರೂಪದಲ್ಲಿ ಕ್ಯಾಶ್​ಬ್ಯಾಕ್​ ಅಥವಾ ಆಫರ್​ಗಳು ಬರುತ್ತವೆ. ಅದರ ಜೊತೆಗೆ ಲಿಂಕ್​ವೊಂದನ್ನು ಕಳುಹಿಸಲಾಗಿರುತ್ತದೆ. ಆದರೆ ಈ ಲಿಂಕ್​ ಅಥವಾ ಸಂದೇಶ ಬಂದರೆ ಕ್ಲಿಕ್​​ ಮಾಡದಂತೆ/ಡಿಲೀಟ್​ ಮಾಡುವಂತೆ ಹೇಳಿದೆ. ಪೇಟಿಎಂ ಇಲ್ಲಿಯವರೆಗೆ ಆಫರ್​ ಅಥವಾ ಸಂದೇಶದ ಮೂಲಕ ಯಾವುದೇ ಲಿಂಕ್​ ಅನ್ನು ಕಳುಹಿಸಿಲ್ಲ ಎಂದು ಸಂಸ್ಥೆ ತಿಳಿಸಿದೆ ಅದಕ್ಕಾಗಿ ಯಾವುದೇ app ಬಳಕೆ ಮಾಡಿದರು ಅದಕ್ಕೆ ಸಂಬಂಧಪಟ್ಟಂತೆ ಸಂದೇಶ ಅಥವಾ ಕರೆ ಬಂದರೆ ಅವರು ಸ್ವಿಕರಿಸಬೇಡಿ.