ದೆವ್ವ ಭೂತಗಳು ನಿಮ್ಮನ್ನ ಅಥವಾ ಮನೆ ಬಿಟ್ಟು ಹೋಗಬೇಕಂದ್ರೆ ಈ ಏಳು ಕೆಲಸಗಳನ್ನು ಮಾಡಿ…!

0
3274

1. ತುಳಸಿ ಎಲೆಗಳ ರಸ ತೆಗೆದು. ಶುದ್ಧವಾದ ನೀರಿನಲ್ಲಿ ಕಲಸಿ. ನಂತರ ದೇವರನ್ನು ಪ್ರಾರ್ಥಿಸಿ ಆ ದ್ರವವನ್ನು ಮನೆಯಲ್ಲಿ ಸಿಂಪಡಿಸಬೇಕು. ಇದರಿಂದ ದುಷ್ಟ ಶಕ್ತಿಗಳು ಹಾಗು ನೆಗಟೀವ್ ಎನರ್ಜಿ ಹೊರಗೆ ಹೋಗುತ್ತದೆ.

2. ವರ್ಷಕ್ಕೊಮ್ಮೆ ಮನೆಯಲ್ಲಿ ಯಜ್ಞ-ಯಾಗಾದಿ ಮಾಡಿಸಬೇಕು. ಯಜ್ಞದಿಂದ ಬರುವ ಹೊಗೆಗೆ ದುಷ್ಟಶಕ್ತಿಗಳು ಹೊರಹೋಗುತ್ತವೆ ಪಾಸಿಟೀವ್ ಎನರ್ಜಿ ಯಾವಾಗಲೂ ಮನೆಯಲ್ಲಿರುತ್ತೆ.

3. ಚೆನ್ನಾಗಿ ಉರಿಯುತ್ತಿರುವ ಕೆಂಡವನ್ನು ಲೋಹದ ಪ್ಲೇಟ್ ಮೇಲೆ ತೆಗೆದುಕೊಂಡು ಮೇಲೆ ಸ್ವಲ್ಪ ಇಂಗು ಹಾಕಬೇಕು. ಇದರಿಂದ ಉಂಟಾಗುವ ಹೊಗೆ ಮನೆಯಲ್ಲೆಲ್ಲಾ ಆವರಿಸಿ ನೆಗಟೀವ್ ಎನರ್ಜಿಯನ್ನು ಹೋಗಲಾಡಿಸುತ್ತದೆ.

4. ಸ್ವಲ್ಪ ಜೀರಿಗೆ, ಉಪ್ಪನ್ನು ಚೆನ್ನಾಗಿ ಮಿಕ್ಸ್ ಮಾಡಿ. ಆ ಮಿಶ್ರಣವನ್ನು ಮನೆಯ ಮುಖ್ಯ ಬಾಗಿಲಲ್ಲಿ ಚೆಲ್ಲಬೇಕು. ನಂತರ ಉಳಿದ ಬಾಗಿಲು, ಕಿಟಕಿ ಹತ್ರ ಸಹ ಆ ಮಿಶ್ರಣವನ್ನು ಚೆಲ್ಲಿದರೆ ದುಷ್ಟಶಕ್ತಿಗಳು ಬರದಂತೆ ಇರುತ್ತವೆ.

5. ಸಂಗೀತವನ್ನು ಕೇಳುವುದು, ಮನೆಯಲ್ಲಿ ಗಾಳಿ, ಸೂರ್ಯನ ಬೆಳಕು ಬೀಳುವಂತೆ ಮಾಡಿ. ಯಾವಾಗಲೂ ಸಂತೋಷವಾಗಿರಿ, ಮನರಂಜನಾ ಕಾರ್ಯಕ್ರಮಗಳನ್ನು ಮನೆಯಲ್ಲಿ ಮಾಡಿದರೆ ಬರುವ ಪಾಸಿಟೀವ್ ವೈಬ್ರೇಷನ್ನಿಂದ ದುಷ್ಟಶಕ್ತಿಗಳು ಓಡಿಹೋಗುತ್ತವೆ.

6. ಸಿಲಿಕಾ ಸ್ಫಟಿಕ, ಟೈಗರ್ ಐರನ್ ಸ್ಪಟಿಕ, ಪುಷ್ಯರಾಗ, ಗೋಮೇಧಿಕ ತದಿತರೆ ಸ್ಫಟಿಕಗಳನ್ನು, ಕಲ್ಲಿನಲ್ಲಿ ಯಾವುದಾದರೂ ಸ್ವಲ್ಪ ತೆಗೆದುಕೊಂಡು ಮನೆಯಲ್ಲಿನ ಪ್ರತಿ ಮೂಲೆ, ಪ್ರತಿ ಕೊಠಡಿಯಲ್ಲಿಡಬೇಕು. ನೆಗಟೀವ್ ಎನರ್ಜಿ ಓಡಿಹೋಗುತ್ತವೆ.

7. ಇತರರಿಗೆ ಸಹಾಯ, ದಾನ, ಧರ್ಮಗಳನ್ನು ಮಾಡುವುದು, ದೈವ ಪ್ರಾರ್ಥನೆಗಳನ್ನು ಮಾಡುವಂತಹ ಕೆಲಸಗಳನ್ನು ಮಾಡುವವರಿಗೆ ದುಷ್ಟ ಶಕ್ತಿಗಳು ಬಾಧಿಸಲ್ಲವಂತೆ ಅಷ್ಟೇ ಅಲ್ಲ, ನೆಗಟೀವ್ ಎನರ್ಜಿ ಸಹ ಅವರ ಸನಿಹ ಸುಳಿಯಲ್ಲವಂತೆ.