ಉಗ್ರರನ್ನು ಸುಟ್ಟು ಹಾಕಲು ಮೀರಜ್​-2000 ಫೈಟರ್​​ ಯುದ್ದ ವಿಮಾನ ಬಳಸಿದ್ದು ಯಾಕೆ ಗೊತ್ತಾ?

0
1176

ಪಾಕ್ ಉಗ್ರರಿಗೆ ನೆಲೆ ನೀಡಿರುವ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯರ ಮೇಲೆ ಹಲವು ರೀತಿಯ ದಾಳಿ ನಡೆಯುತ್ತಿದವು ಇದಕೆಲ್ಲ ಸಂಚು ನಡೆಸಿದ್ದು ಪಾಕಿಸ್ತಾನ ಎನ್ನುವುದು ಪ್ರಪಂಚಕ್ಕೆ ತಿಳಿದಿರುವ ವಿಷಯವಾಗಿದೆ. ಏಕೆಂದರೆ ಕೆಲವು ದಿನಗಳ ಹಿಂದೆ ನಡೆದ ಪುಲ್ವಾಮ ದಾಳಿವು ಭಾರತೀಯರ ರಕ್ತ ಕುದಿಯಲು ಕಾರಣವಾಯಿತ್ತು. ಇದಕ್ಕೆ ಪ್ರತಿಕಾರವಾಗಿ ಸೇಡು ತಿರಿಸಿಕೊಳ್ಳಲು ಭಾರತವು ತಯಾರಾಗಿತ್ತು. ಈ ದಾಳಿಯಲ್ಲಿ ಸೂಕ್ತ ರೀತಿಯ ವ್ಯವಸ್ಥೆ ಕಲ್ಪಿಸಿಕೊಂಡು ದಾಳಿ ಮಾಡಿ 300 ಕ್ಕೂ ಹೆಚ್ಚು ಉರರನ್ನು ನಾಶ ಮಾಡುವಲ್ಲಿ ಮೀರಜ್​-2000 ಯುದ್ದ ವಿಮಾನವನ್ನು ಬಳಕೆ ಮಾಡಿದ್ದು ಈ ವಿಷಯವಾಗಿ ಅಂತೆ.

Also read: ಮೋದಿ ಹೇಳಿದ ರೀತಿಯಲ್ಲಿ ಪುಲ್ವಾಮಾ ದಾಳಿಗೆ ಪ್ರತೀಕಾರ; ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ನಡೆಸಿದ ಭಾರತೀಯ ಯುದ್ಧ ವಿಮಾನಗಳು..

ಹೌದು ಭಾರತೀಯ ವಾಯು ಪಡೆ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಅಡಗಿರುವ ಉಗ್ರ ತಾಣಗಳ ಮೇಲೆ ದಾಳಿ ನಡೆಸಿತ್ತು. 12 ಮೀರಜ್​-2000 ಯುದ್ಧ ವಿಮಾನಗಳು ಜೈಶ್​-ಇ-ಮೊಹ್ಮದ್​ ಉಗ್ರರ ಅಡಗು ತಾಣಗಳ ಮೇಲೆ ಬಾಂಬ್​ ಹಾಕಿತ್ತು. ಈ ದಾಳಿಯಲ್ಲಿ 200ಕ್ಕೂ ಹೆಚ್ಚು ಉಗ್ರರು ಅಸುನೀಗಿದ್ದಾರೆ. ಈ ಯುದ್ದದಲ್ಲಿ ಭಾರತೀಯ ವಾಯುಪಡೆಯಲ್ಲಿ ಸುಖೋಯ್​ ಸು-30ಎಂಕೆಐ ಮತ್ತು ಮಿಗ್​ 29ನಂಥ ಬಲಶಾಲಿ ಯುದ್ಧ ವಿಮಾನಗಳಿವೆ. ಸರ್ಜಿಕಲ್​ ಸ್ಟ್ರೈಕ್​ 2.0ಗೆ ಮೀರಜ್​-2000 ಬಳಕೆ ಮಾಡಿಕೊಳ್ಳಲಾಗಿದ್ದು ಈ ಕಾರಣಕ್ಕಂತೆ.

ಹಿಂದುಸ್ತಾನ್​ ಏರೋನಾಟಿಕ್​ ಲಿಮಿಟೆಡ್​ (ಎಚ್​ಎಎಲ್​) ಅಡಿಯಲ್ಲಿ ಮೀರಜ್​-2000 ಸಿದ್ಧಗೊಂಡಿದ್ದು, ಡಸೌಲ್ಟ್​​ ಏವಿಯೇಷನ್​ ಇದರ ತಯಾರಿಕಾ ಪರವಾನಗಿ ಪಡೆದುಕೊಂಡಿದೆ. ಇದು ಭಾರತ ಹೊಂದಿರುವ ಅತ್ಯಂತ ಬಲಶಾಲಿ ಯುದ್ಧವಿಮಾನಗಳಲ್ಲೊಂದು. ಮೀರಜ್​-2000 ತನ್ನ ಕಾರ್ಯ ಆರಂಭಿಸಿದ್ದು 1985ರಲ್ಲಿ. ಇದಕ್ಕೆ ಭಾರತೀಯ ಸೇನೆ ವಜ್ರ ಎನ್ನುವ ಹೆಸರನ್ನು ನೀಡಿದೆ. 1982ರಲ್ಲಿ ಅಮೆರಿಕದಿಂದ ಪಾಕಿಸ್ತಾನ ಎಎಫ್​​-16 ವಿಮಾನಗಳನ್ನು ಖರೀದಿಸಿದ್ದಕ್ಕೆ ಪ್ರತಿಯಾಗಿ ಭಾರತ ಏಕ ಆಸನ ಹೊಂದಿರುವ 36 ಮೀರಜ್​-2000 ಹಾಗೂ ಎರಡು ಆಸನ ವ್ಯವಸ್ಥೆ ಇರುವ 4 ಮೀರಜ್​-2000 ವಿಮಾನಗಳನ್ನು ಖರೀದಿ ಮಾಡುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಈಗ ಅವುಗಳನ್ನು ಬಳಕೆ ಮಾಡಿಕೊಂಡಿದೆ.

ಮಿರಾಜ್-2000 ವಿಶೇಷತೆ ಏನು?

Also read: ಮತ್ತೆ ದೇಶದ್ರೋಹಿಗಳ ಅಟ್ಟಹಾಸ; ಪಾಕಿಸ್ತಾನಕ್ಕೆ ಜಿಂದಾಬಾದ್ ಅನ್ನದಿದ್ರೆ, ಹುಬ್ಬಳ್ಳಿಯಲ್ಲಿ ಬಾಂಬ್ ಸ್ಫೋಟಿಸ್ತೇವೆ ಎನ್ನುವ ವಿಡಿಯೋ ವೈರಲ್..

ಮೊದಲ ಬಾರಿಗೆ ಏರ್ ಫೋರ್ಸ್ ಬಳಕೆ ಮಾಡಿದ್ದು ಒಂದು ಸಾರಿ ಟಾರ್ಗೆಟ್ ಫಿಕ್ಸ್ ಮಾಡಿದ್ರೆ ಮಿರಾಜ್ ತನ್ನ ಗುರಿಯನ್ನು ತಪ್ಪಲ್ಲ. ಮಿರಾಜ್ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಯುದ್ಧ ವಿಮಾನವಾಗಿದೆ ಎಂದು ನಿವೃತ್ತ ಏರ್ ಮಾರ್ಷಲ್ ಎನ್.ವಿ.ತ್ಯಾಗಿ ಹೇಳಿದ್ದಾರೆ. ಅದರಂತೆ ಭಾರತದ ಏರ್ ಸರ್ಜಿಕಲ್ ಸ್ಟ್ರೈಕ್ ನಿಂದ ಸುಮಾರು 200-300 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಧಿಕೃತ ಅಂಕಿ ಅಂಶಗಳು ಹೊರಬರಬೇಕಿದೆ. ಬಾಲಕೋಟ, ಮುಜಾಫರ್ ಬಾದ್, ಚಾಕೋಟಿಯಲ್ಲಿರುವ ಮೂರು ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ. ಅಷ್ಟೇ ಅಲ್ಲದೆ, 1999ರ ಕಾರ್ಗಿಲ್​ ಯುದ್ಧದಲ್ಲಿ ಮೀರಜ್​-2000 ಪಾತ್ರ ಬಲು ದೊಡ್ಡದಿದೆ. ಹಾಗಾಗಿ 2004ರಲ್ಲಿ ಹೆಚ್ಚುವರಿಯಾಗಿ 10 ಮೀರಜ್​-2000 ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. 30 ವರ್ಷಗಳ ಅವಧಿಯಲ್ಲಿ ಡಸಾಲ್ಟ್​ ಏವಿಯೇಷನ್​ 580 ಮೀರಜ್​-2000 ವಿಮಾನಗಳನ್ನು ನಿರ್ಮಾಣ ಮಾಡಿದೆ.

ಈ ಯುದ್ಧ ವಿಮಾನ 14.6 ಮೀಟರ್​ ಉದ್ದ ಹಾಗೂ ರೆಕ್ಕೆಯೂ ಸೇರಿದಂತೆ ಇದರ ಒಟ್ಟೂ ಉದ್ದ 91.3 ಮೀಟರ್​. 7,500 ಕೆ.ಜಿ ತೂಕ ಹೊಂದಿರುವ ಈ ವಿಮಾನ 17,000 ಕೆಜಿ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಗರಿಷ್ಠ 2,336 ಕಿ.ಮೀ ವೇಗದಲ್ಲಿ ಸಾಗುವ ಶಕ್ತಿ ಇದಕ್ಕಿದೆ. ಪ್ಲೈ-ಬೈ-ವೈರ್​ ಫ್ಲೈಟ್ ಕಂಟ್ರೋಲ್​ ವ್ಯವಸ್ಥೆ ಈ ವಿಮಾನದಲ್ಲಿದೆ. ಈಜಿಪ್ಟ್​​, ಯುರೋಪ್​, ಪೆರು, ತೈವಾನ್​, ಗ್ರೀಸ್​ ಮತ್ತು ಬ್ರೇಜಿಲ್​ ರಾಷ್ಟ್ರಗಳಲ್ಲಿ ಮೀರಜ್​-2000 ಬಳಕೆಯಲ್ಲಿದೆ.