ದುಡ್ಡು ಇದ್ರೆ ದಂಡಪಿಂಡ ಕೂಡ ಡಾಕ್ಟರ್ ಆಗಬಹುದು…!!

0
1670

ದುಡ್ಡು ಇದ್ರೆ ದಂಡಪಿಂಡ ಕೂಡ ಡಾಕ್ಟರ್ ಆಗಬಹುದು…!!

ವೈದ್ಯರನ್ನು ನಾರಾಯಣನಿಗೆ ಹೋಲಿಸುತ್ತೇವೆ, ಪ್ರಾಣ ಉಳಿಸುವ ಪುಣ್ಯಾತ್ಮ ಎನ್ನುತೇವೆ, ದೇವರ ಪ್ರತಿರೂಪ ಎಂದೂ ಬಾವಿಸುವುದುಂಟು. ಇದೇನಿದು ಯಾವುದರ ಬಗ್ಗೆ ಮಾತಾಡ್ತಾ ಇದ್ದೇನೆ ಎಂದು confuse ಆದ್ರ…!! ಒಂದು shocking ನ್ಯೂಸ್ ಹೊರಬಿದ್ದಿದ್ದೆ ಓದುಗರೇ…

ಅಲ್ಲ ನಂಗ್ ಒಂದ್ ಅರ್ಥ ಆಗ್ತಾ ಇಲ್ಲ, ಡಾಕ್ಟರ್ ಆಗೋದಕ್ಕೆ ಹೆಚ್ಚು ಅಂದ್ರೆ ಏನ್ ಬೇಕಾಗಬಹುದು, ಒಳ್ಳೆಯ ರಾಂಕಿಂಗ್ ಅಂತ ನೀವು ಹೇಳಬಹುದು ಆದ್ರೆ ಈ ಘಟನೆ ನೋಡುದ್ರೆ ಅದು ತಪ್ಪು ಎನ್ನಿಸದೆ ಇರಲಾರದು. ಕೋಟಿ ಕೋಟಿ ದುಡ್ಡು ಸಹ ಡಾಕ್ಟರ್ ಮಾಡುತ್ತೆ ಅಂದ್ರೆ ನಂಬಲೇ ಬೇಕು. ಅದಕ್ಕೆ ಪುಷ್ಟಿಕರಿಸುವ ಘಟನೆಯೊಂದು ಬೆಂಗಳೂರಿನ ವ್ಯದೇಹಿ INSTITUTE ನಲ್ಲಿ ನೆಡೆದಿದೆ.

ಬೆಳ್ಳಂಬೆಳಗ್ಗೆ ಐಟಿ ತಂಡ ವ್ಯದೇಹಿ ಟ್ರಸ್ಟ್ ನ ಸದಸ್ಯರ ಕದ ತಟ್ಟಿದ್ದಾರೆ, ಎರಡು ಅಥವ ಮೂರು ಕೋಟಿ ಸಿಗಬಹುದೆಂದು ಅಂದಾಜಿಸಿದ್ದ ಅಧಿಕಾರಿಗಳಿಗೆ ಸಿಕ್ಕಿದ್ದು ಬರೋಬ್ಬರಿ 43 ಕೋಟಿ ರೂ, ಅದು ಒಂದೇ ಮನೆಯಲ್ಲಿ.
ಇದು ಭಾರತ ದೇಶದಲ್ಲೇ ನೆಡೆದ ಎರಡನೇ ಅತಿ ದೊಡ್ಡ ಐಟಿ ದಾಳಿಯಾಗಿದೆ, ಮೊದಲನೆಯದ್ದು 82 ಕೋಟಿಯ ದಾಳಿ ಕೂಡ ಪುದುಚರಿಯ ವ್ಯದ್ಯಕೀಯ ಕಾಲೇಜಿನಲ್ಲಿ ನೆಡೆದದ್ದು ಎನ್ನುವುದೇ ವಿಶೇಷ.

ಸುಮಾರು ಒಂದು ವರ್ಷದ ಕೆಳಗೆ ಅಂದರೆ ಡಿಸೆಂಬರ್ 2015 ನಲ್ಲೂ ಕೂಡ ರಾಯಚೂರಿನ ಮೆಡಿಕಲ್ ಕಾಲೇಜಿನಲ್ಲಿ ಕೂಡ 19.5 ಕೋಟಿ ರೂ ನಷ್ಟು ಸಿಕ್ಕಿತ್ತು, ಅದೂ ಅಲ್ಲದೆ ಶ್ರೀನಿವಾಸ ಟ್ರಸ್ಟ್ ಗೆ ಸೇರಿದ ವೈಟ್ ಫೀಲ್ಡ್ ನಲ್ಲಿ ಇರುವ ವಿಶ್ವವಿದ್ಯಾಲಯದಲ್ಲಿ ಸುಮಾರು 265 ಕೋಟಿ unaccounted ದುಡ್ಡು ಕಾಣಿಸಿಕೊಂಡಿತ್ತು.

ಅದೆಲ್ಲವೂ ಸರಿ, ದುಡ್ಡು ಕೊಟ್ಟು ಡಾಕ್ಟರ್ ಆಗೋನು ಅದೆಷ್ಟರ ಮಟ್ಟಿಗೆ ಚಿಕಿತ್ಸೆ ಕೊಡ್ತಾನೋ ದೇವ್ರೇ ಬಲ್ಲ…!! ಒಂದು ಸೀಟ್ ಗೆ 4 ಕೋಟಿ ಕೊಟ್ಟು ಪರೀಕ್ಷೆ ಬರೆಯುವ ವಿದ್ಯಾರ್ಥಿ ಚಿತ್ತ 4 ಕೋಟಿ ಹೇಗೆ ಮತ್ತೆ ಸಂಪಾದಿಸಬೇಕು ಎನ್ನುವುದರ ಕಡೆ ಇರುತ್ತದೆಯೇ ವಿನಃ ರೋಗಿಗಳ ಶುಶ್ರುಷೆಯ ಕಡೆ ಅಲ್ಲ…!!

ಕಡೆಯ ಮಾತು ಇನ್ಮೇಲೆ ಚಿಕಿತ್ಸೆ ಪಡೆಯುವ ಮುಂಚೆ ಗೊತ್ತಿರುವವರಲ್ಲಿ ಸಂಬಂಧ ಪಟ್ಟ ಡಾಕ್ಟರ್ ಬಗ್ಗೆ ವಿಚಾರಿಸಿ… ಯಾರಿಗೆ ಗೊತ್ತು ತಲೆ ನೋವು ಎಂದರೆ ಹೊಟ್ಟೆ ನೋವಿಗೆ ಮಾತ್ರೆ ಕೊಟ್ಟರೆ ಏನು ಗತಿ…!!