ನೀವು ನಾಯಿ ಸಾಕಿದ್ದೀರಾ / ನಾಯಿ ಪ್ರಿಯರ ಹಾಗಾದ್ರೆ ಈ ವಿಷಯಗಳು ನಿಮಗೆ ಗೊತ್ತಿರ್ಲೆ ಬೇಕು !!

0
3277

ನಿಮ್ಮ ಸಾಕು ನಾಯಿಯ ಬಗ್ಗೆ ನಿಮಗೆ ತಿಳಿದಿರಬೇಕಾದ ವಿಷಯಗಳು

1 . ನಿಮ್ಮ ಪುಟ್ಟ ನಾಯಿ ಎರಡು ವರ್ಷದ ಹಸು ಕಂದಮ್ಮನಂತೆ  250 ಪದಗಳು , ಸನ್ನೆಗಳನ್ನು ನೆನಪಿಟ್ಟುಕೊಳ್ಳುತ್ತೆ .

2.  ನಾಯಿಗಳು ದೇಹದ ಎಲ್ಲಾ ಭಾಗದಲ್ಲೂ ಬೆವರು ಗ್ರಂಥಿ ಹೊಂದಿರುವುದಿಲ್ಲ ಕೇವಲ ಪಾದದ ಪಂಜಗಳಲ್ಲಿ ಮಾತ್ರ ಬೆವರುತ್ತವೆ.

3. ನಿಮ್ಮ ಒಂದು ವರ್ಷದ ನಾಯಿ ಮರಿಯು 15 ವರ್ಷದ ಮನುಷ್ಯನ ಗುಣವನ್ನು ಹೊಂದಿರುತ್ತದೆ ಅಂದ್ರೆ ನಂಬಲೇ ಬೇಕು.

4. ನಾಯಿಯು ಮನುಷ್ಯನಿಗೆ ಹೋಲಿಸಿದರೆ 1000 ದಿಂದ 100000 ಪಟ್ಟು ವಾಸನೆಯನ್ನು ಗ್ರಹಿಸುತ್ತವೆ. 125 ರಿಂದ 250 ಮಿಲಿಯನ್ ವಾಸನೆ ಗ್ರಂಥಿಗಳನ್ನು ನಾಯಿಗಳು ಹೊಂದಿರುತ್ತವೆ , ಮನುಷ್ಯರಲ್ಲಿ ಕೇವಲ 5 ಮಿಲಿಯನ್ ವಾಸನೆ ಗ್ರಂಥಿಗಳು ಇವೆ.

5. ನಾಯಿಗಳು ಮನುಷ್ಯನಿಗೆ ಹೋಲಿಸಿದರೆ 4 ರಷ್ಟು ಹೆಚ್ಚಿನ ದೂರದ ಶಬ್ದಗಳನ್ನು ಗ್ರಹಿಸಬಲ್ಲದು. 67 ರಿಂದ 45,000 hrtz ಶಬ್ಧ ಗ್ರಹಣ ಸಾಮರ್ಥ್ಯ ನಾಯಿಯದಾದರೆ 64 ರಿಂದ 23,000 hrtz ಮನುಷ್ಯನದು.

6. ನಿಮ್ಮ ಮುದ್ದಿನ ನಾಯಿ ಮರಿ ಜೊತೆ ಆಟ ಆಡಿಕೊಂಡು ನಿಮ್ಮ ರಕ್ತ ದೊತ್ತಡ ಕಡಿಮೆ ಮಾಡಿಕೊಳ್ಳಬಹುದು .

7. ನಾಯಿಗಳು ಯಾವಾಗಲೂ ಒದ್ದೆ ಮೂಗನ್ನು ಹೊಂದಿರುತ್ತವೆ ಯಾಕೆಂದರೆ ವಾಸನೆಯನ್ನು ಗ್ರಹಿಸಲು ಸುಲಭವಾಗುತ್ತೆ .

8.ನಿಮ್ಮ ಪ್ರೀತಿಯ ನಾಯಿಗೆ ನೀವು ತೊಟ್ಟ ಬಟ್ಟೆಯನ್ನು ಆದಷ್ಟು ಬಳಿಯಲ್ಲಿ ಇರಿಸಿ, ನೀವು ಇಲ್ಲದಿರುವ ಸಮಯ ನಿಮ್ಮ ನಾಯಿಯು ನಿಮ್ಮನ್ನು miss ಮಾಡಿಕೊಳ್ಳದೆ ಇರುವುದಕ್ಕೆ ಸಹಾಯವಾಗುತ್ತೆ.

9.ನಾಯಿಯು ಮಲಮೂತ್ರವನ್ನು ಭೂಮಿಯ ಆಯಸ್ಕಾಂತಿಯ ರೇಖೆಗೆ ಸಮವಾದ ದಿಕ್ಕಿನಲ್ಲಿ ಮಾಡುತ್ತವೆ.

10.ನಾಯಿಯು ಕಪ್ಪು ಬಿಳುಪು ಬಣ್ಣದ ಜೊತೆ ನೀಲಿ ಹಾಗೂ ಹಳದಿ ಬಣ್ಣವನ್ನು ಗುರುತಿಸುತ್ತವೆ.

11.ನಾಯಿಯ ಕಿವಿಯಲ್ಲಿ 18 ಸ್ನಾಯುಗಳಿವೆ.

12.ನಾಯಿಗಳು ಮನುಷ್ಯನಿಗೆ ಹೋಲಿಸಿದರೆ ರಾತ್ರಿ ಹೊತ್ತು ಚೆನ್ನಾಗಿ ಕಣ್ಣು ಕಾಣುತ್ತದೆ.