ನಾಳೆ ಮಹಾಲಯ ಅಮಾವಾಸ್ಯೆ ಅಪ್ಪಿ ತಪ್ಪಿಯೂ ಈ ಕೆಲಸಗಳು ಮಾಡಬೇಡಿ ಮಾಡಿದರೆ ಕಷ್ಟಗಳು ನಿಮ್ಮ ಕೈಯಲ್ಲಿ ನೀವೇ ಆಹ್ವಾನಿಸಿದಂತೆ !!

0
738

ಭಾದ್ರಪದ ಕೃಷ್ಣ ಅಮಾವಾಸ್ಯೆ-ಭಾದ್ರಪದ ಬಹುಳ ಅಮಾವಾಸ್ಯೆಗೆ ಮಹಾಲಯ ಅಮಾವಾಸ್ಯೆ ಎಂದು ಹೆಸರು. ಇದು ಪಿತೃ ಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ.

ಹಿಂದೂ ಪುರಾಣದ ಪ್ರಕಾರ, ಮಹಾಲಯ ಅಮಾವಾಸ್ಯೆಯಂದು ಪೂರ್ವಜರನ್ನು ಸ್ಮರಿಸಿ ತಿಲ ತರ್ಪಣವನ್ನು, ಜಲ ತರ್ಪಣವನ್ನು ಹಾಗೂ ಬಲಿಯನ್ನೋ, ಪಿಂಡದಾನವನ್ನೋ, ನೀಡಿ ಸ್ಮರಿಸಬೇಕು. ಇದು ಈ ಮಹಾಲಯ ಅಮಾವಾಸ್ಯೆಯ ವಿಶೇಷವಾಗಿದೆ. ಈ ಆಚರಣೆಯನ್ನು ಸಾಮನ್ಯವಾಗಿ ಗಂಡು ಮಕ್ಕಳು ನೆರೆವೇರಿಸಿಕೊಂಡು ಬರುತ್ತಾರೆ.. ಪಿತೃ ಪಕ್ಷ ಮಾಡದಿದ್ದರೆ ಆತ್ಮಗಳಿಗೆ ಮೋಕ್ಷ ವಿಲ್ಲವೆಂಬುದು ನಂಬಿಕೆ.

ಈ ಮಹಾಲಯ ಅಮಾವಾಸ್ಯೆ ತುಂಬಾ ಮಹತ್ವವಾದ ದಿನ. ಈ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು, ಮಾಡಿದರೆ ಅನಿಷ್ಟ ಉಂಟಾಗುವುದು ಎಂದು ಹಿರಿಯರು ಹೇಳುತ್ತಾರೆ. ಹಾಗಾದರೆ ಈ ದಿನದಂದು ಯಾವ ಯಾವ ಕಾರ್ಯಗಳನ್ನು ಮಾಡಬಾರದು ಎಂದು ತಿಳಿಯೋಣ ಬನ್ನಿ.

ಹಿರಿಯರನ್ನು ಗೌರವಿಸಿ

ಮಹಾಲಯ ಅಮಾವಾಸ್ಯೆಯಂದು ಪೂರ್ವಜರನ್ನು ಸ್ಮರಿಸಿ ತಿಲ ತರ್ಪಣವನ್ನು, ಜಲ ತರ್ಪಣವನ್ನು ಹಾಗೂ ಬಲಿಯನ್ನೋ, ಪಿಂಡದಾನವನ್ನೋ, ನೀಡಿ ಸ್ಮರಿಸಬೇಕು. ಹಾಗಾಗಿ ಈ ದಿನ ಗತಿಸಿದ ಹಿರಿಯರಿಗೆ ಪೂಜೆ ಕಾರ್ಯಗಳನ್ನು ಮಾಡುವಾಗ ಶ್ರದ್ಧೆ ಭಕ್ತಿಯಿಂದ ಮಾಡಬೇಕು. ಇದರ ಜೊತೆಗೆ ಮನೆಯಲ್ಲಿ ಹಿರಿಯರನ್ನು ಗೌರವಿಸಬೇಕು ಹಾಗೂ ಅವರ ಮನಸ್ಸಿಗೆ ಯಾವುದೇ ಕಾರಣಕ್ಕೆ ನೋವುಂಟು ಮಾಡಬಾರದು.

ಕೋಪ, ದ್ವೇಷ, ಅಸೂಯೆ ಮಾಡಬಾರದು

ಮಹಾಲಯ ಅಮಾವಾಸ್ಯೆಯಂದು ವಿನಾ ಕಾರಣಕ್ಕೆ ಕೋಪ ಮಾಡಿಕೊಳ್ಳಬಾರದು. ಈ ದಿನ ಯಾರೊಂದಿಗೂ ಜಗಳವಾದಬಾರದು. ಹೀಗೆ ಜಗಳ ಅಥವಾ ಕೋಪಿಸಿಕೊಳ್ಳುವುದರಿಂದ ಕೆಡಕು ದೃಷ್ಟಿಯ ಪ್ರಭಾವ ನಿಮ್ಮ ಮೇಲೆ ಬಿರುವ ಸಾಧ್ಯತೆಗಳು ಇರುತ್ತವೆ. ಇದರಿಂದೆ ಮನಸ್ಸು ಮತ್ತೆ ಮನೆಯ ನೆಮ್ಮದಿ ಹಾಳಾಗುವುದು.

ಆ ದಿನ ಆಹಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸೇವಿಸಬಾರದು

ಇಂದು ಪೂಜೆ-ಹವನ ಮುಂತಾದ ದೇವಕಾರ್ಯಗಳ ಅಡಿಗೆಯಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳನ್ನು ಬಳಸುವಂತಿಲ್ಲ. ಅಮಾವಾಸ್ಯೆಯ ದಿನ ಒಂದು ಬಾರಿ ಮಾತ್ರ ಊಟ ಮಾಡಬೇಕು. ಮದ್ಯಾಹ್ನ ದ ಸಮಯದಲ್ಲಿ ಊಟ ಮಾಡಬೇಕು. ಒಂದು ರಾತ್ರಿ ಅಲ್ಪಾಹಾರ ಅಥವಾ ಉಪಹಾರ ಸೇವಿಸಿದರೆ ಉತ್ತಮ. ಅಷ್ಟೇ ಅಲ್ಲ ಈ ದಿನ ಮಾಂಸಾಹಾರ ಸೇವನೆ ಮಾಡಬಾರದು ಅಲ್ಲದೆ ತರ್ಪಣ ನೀಡುವ ಆಹಾರದಲ್ಲಿ ಮಾಂಸಾಹಾರವನ್ನು ಇಡಬಾರದು.

ಬಡವರಿಗೆ ಅಪಮಾನ ಮಾಡಬೇಡಿ

ಈ ದಿನ ಬಡವರನ್ನು ನೋಡಿ ಅವರಿಗೆ ಅಪಮಾನ ಮಾಡಬೇಡಿ. ಯಾವುದೇ ಬಡ ವ್ಯಕ್ತಿ ಮನೆ ಮುಂದೆ ಬಂದರೆ ಬರಿ ಗೈಯಲ್ಲಿ ಕಳುಹಿಸಬೇಡಿ. ಸಾದ್ಯವಾದಷ್ಟು ದಾನ ಮಾಡಿ .

ಸ್ಮಶಾನಕ್ಕೆ ಹೋಗಬಾರದು:

ಈ ದಿನ ರಾತ್ರಿ ಬಿಡಿ ಹಗಲಿನ ವೇಳೆಯಲ್ಲೂ ಕೂಡ ಸ್ಮಶಾನಕ್ಕೆಹೋಗಬಾರದು. ಹೌದು ಅಮಾವಾಸ್ಯೆ ಯಂದು ಇಲ್ಲಿರುವ ನಕಾರಾತ್ಮಕ ಶಕ್ತಿಗಳು ನಮ್ಮ ಮೇಲೆ ಹೆಚ್ಚು ಪಭಾವ ಬೀಳುತ್ತವೆ ಇದರ ವಿರುದ್ಧ ಹೊರಡುವ ಶಕ್ತಿ ನಮ್ಮಲ್ಲಿ ಇರುವುದಿಲ್ಲ.

ಶ್ರಾದ್ಧ ಕಾರ್ಯದಲ್ಲಿ ಗಾಜಿನ ಪಾತ್ರೆ ವರ್ಜಿತ

ಶ್ರಾದ್ಧ ಕಾರ್ಯದಲ್ಲಿ ತರ್ಪಣ ನೀಡುವಾಗ ಸ್ಟೀಲ್, ಕಬ್ಬಿಣ, ಪ್ಲಾಸ್ಟಿಕ್ ಅಥವಾ ಗಾಜಿನ ಪಾತ್ರೆಗಳನ್ನು ಬಳಸಬಾರದು. ಅಲ್ಲದೆ ಪೂಜೆಯಲ್ಲಿ ಘಂಟೆಯನ್ನು ಬಳಸಬಾರದು. ಅಷ್ಟೇ ಅಲ್ಲ ಪೂರ್ವಜರಿಗೆ ಅರ್ಪಿಸುವ ಆಹಾರವನ್ನು ಸಹ ಬೆಳ್ಳಿಯ ಅಥವಾ ತಾಮ್ರದ ಪಾತ್ರೆಗಳಲ್ಲಿ ಬೇಯಿಸಿ, ಒಂದು ಬಾಳೆ ಎಲೆ ಮೇಲೆ ಇಟ್ಟು ದರ್ಪಣವನ್ನು ಬಿಡಲಾಗುತ್ತದೆ.

ಈ ದಿನ ಯಾವ ಯಾವ ವಸ್ತುಗಳನ್ನು ಮನೆಗೆ ತರಬಾರದು

ಮಹಾಲಯ ಅಮಾವಾಸ್ಯೆ ದಿನ ಕಬ್ಬಿಣದ ವಸ್ತುಗಳು, ಕಪ್ಪು ವಸ್ತ್ರ, ಉಪ್ಪು, ಚಪ್ಪಲಿ, ಶೂ ಇಂಥ ವಸ್ತುಗಳನ್ನು ಮನೆಗೆ ತರಬಾರದು. ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವ ವಸ್ತುಗಳನ್ನು ಕೂಡ ತರಬೇಡಿ ಉದಾಹರೆಣೆಗೆ ಪೆನ್ನು, ಪುಸ್ತಕ ಹೀಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ವಸ್ತುಗಳನ್ನು ತರುವುದು ಒಳ್ಳೆಯದಲ್ಲ. ಅಲ್ಲದೆ ಕತ್ತರಿ, ಚಾಕು, ಕಪ್ಪು ಎಳ್ಳು ಇಂಥ ವಸ್ತುಗಳನ್ನು ತರಬಾರದು.

ಹಗಲು ಹಾಗೂ ಸಂಜೆ ವೇಳೆಯಲ್ಲಿ ನಿದ್ದೆ ಮಾಡಬಾರದು. ಇದ್ದಲ್ಲದೆ ಈ ದಿನ ಕ್ಷೌರ ಕರ್ಮ, ಅಭ್ಯಂಜನ ಸ್ನಾನ, ಪರಾನ್ನ ಭೋಜನ, ತಾಂಬೂಲ ಸೇವನೆ ಮಾಡುವಂತಿಲ್ಲ.