ಹಣ ಮೊದಲು ನಂತರ ಚಿಕಿತ್ಸೆ ಎನ್ನುವ ಕಾಲದಲ್ಲಿ 40 ವರ್ಷಗಳಿಂದ 2 ರೂ. ಚಿಕಿತ್ಸೆ ನೀಡಿ ಬಡವರ ಪ್ರಾಣ ಉಳಿಸುತ್ತಿರುವ ಈ ವ್ಯೆದ್ಯರಿಗೆ ಯಾವ ಪ್ರಶಸ್ತಿ ಕೊಡಬೇಕು??

0
8577

ಇತ್ತೀಚಿನ ದಿನಗಳಲ್ಲಿ ಜನರು ಆಸ್ಪತ್ರೆ ಹೋಗಲು ಹೆದರುತ್ತಿದ್ದಾರೆ ಏಕೆಂದರೆ ಕೆಲವು ವ್ಯೆದ್ಯರುಗಳು ಹಣದ ಆಸೆಗಾಗಿ ಸತ್ತವರನ್ನು ಬದುಕಿಸುತ್ತಿದ್ದಾರೆ, ಬದುಕಿದವರನ್ನು ಸಾಯಿಸುತ್ತಿದ್ದಾರೆ. ಬರಿ ಹಣದ ಆಸೆಗಾಗಿ ತಮ್ಮ ಅಮೂಲ್ಯ ವ್ಯೆದ್ಯ ವೃತ್ತಿಯನ್ನು ಮರೆತು ಹಣಕ್ಕಾಗಿ ನಿಂತಿದ್ದಾರೆ. ಪ್ರಾಣ ಹೋಗುವ ಸ್ಥಿತಿಯಲ್ಲಿದ್ದರೂ ಮೊದಲು ಹಣಕ್ಕೆ ಮರ್ಯಾದೆ ಕೊಡುತ್ತಿದ್ದಾರೆ. ಇಂತಹ ಕಾಲದಲ್ಲಿ ರೋಗಿಗಳನ್ನು ಬರೋಬರಿ 40 ವರ್ಷದಿಂದ ಬರಿ 2 ರೂ. ಚಿಕಿತ್ಸೆ ನೀಡುತ್ತಿದ್ದು ಬಡ ರೋಗಿಗಳಿಗೆ ದೇವರಾಗಿದ್ದಾರೆ.

Also read: ಕಷ್ಟದಲ್ಲಿರುವವರಿಗೆ ನಮ್ಮ ಕೈಯಲ್ಲಿ ಏನೂ ಆಗೋಲ್ಲ ಅನ್ನೋರು ಲಕ್ಷಾಂತರ ರೂಪಾಯಿ ಸಂಗ್ರಹ ಮಾಡಿ ಸಹಾಯ ಮಾಡಿದ ಈ 14 ವರ್ಷದ ಬಾಲಕನನ್ನು ನೋಡಿ ಕಲಿಯಬೇಕು!!

ಹೌದು ಬ್ಯುಸಿನೆಸ್, ನಾಟಕದ ಚಿಕಿತ್ಸೆ ಮಾಡುತ್ತಿರುವ ವೈದ್ಯರು ಈ ಕಾಲದಲ್ಲಿ ಹೆಚ್ಚಾಗಿದ್ದಾರೆ. ವೈದ್ಯರು ಅಂದರೆ ಸಾಕು ಅವರಿಗೆ ಒಂದು ಕಾರು, ಐಷಾರಾಮಿ ಆಸ್ಪತ್ರೆ ಇರಬೇಕು ಎಂಬ ಮನಸ್ಥಿತಿ ಇರುವ ವೈದ್ಯರುಗಳ ಮಧ್ಯೆ ಬಡ ರೋಗಿಗಳಿಗಾಗಿ ಉಚಿತ ಚಿಕಿತ್ಸೆ ನೀಡುವ ವೈದ್ಯರಿಗೆ ಜಿಲ್ಲೆಯ ಜನರೆ ಸಲಾಂ ಹಾಕುತ್ತಿದ್ದಾರೆ. ಏಕೆಂದರೆ ಇಂತಹ ಕಾಲದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಪುಣ್ಯದ ವೈದ್ಯರುಗಳು ಇದ್ದು ಬಡವರ ಪ್ರಾಣ ಉಳಿಸುತ್ತಿದ್ದಾರೆ. ಇಂತಹವರ ಸಾಲಿನಲ್ಲಿ ಬರುವ ಬೀದರ್-ನಲ್ಲಿ ಮಕ್ಸೂದ್ ಚಂದಾ ಅವರು 40 ವರ್ಷಗಳಿಂದ ಕೇವಲ 2 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಬಡವರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಬಡತನದಿಂದ ನೊಂದು ಬೆಂದು ಹೋಗಿರುವ ರೋಗಿಗಳು ಈ ವೈದ್ಯರ ಬಳಿ ಬಂದ್ರೆ ಸಾಕು ನಿಮ್ಮ ರೋಗಕ್ಕೆ ಚಿಕಿತ್ಸೆ ನೀಡುತ್ತಾರೆ. ಬೀದರ್ ನಗರದ ರಾಮ ಮಂದಿರ ಕಾಲೋನಿಯಲ್ಲಿರುವ ಡಾ.ಮಕ್ಸೂದ್ ಒಂದು ಪುಟ್ಟ ಕ್ಲಿನಿಕ್ ಕಟ್ಟಿಕೊಂಡು ಗಡಿ ಜಿಲ್ಲೆಯ ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.

Also read: ಸಮಾಜಿಕ ಕಾರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಈ ವ್ಯಕ್ತಿ, 6000 ಅನಾಥ ಹೆಣಗಳ ಅಂತ್ಯಕ್ರಿಯೆ ನಡೆಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಮಾದರಿಯಾಗಿದ್ದಾರೆ.!

ಪ್ರತಿ ದಿನ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಡಾ.ಎ.ಮಕ್ಸೂದ್ ಚಂದಾ, 40 ವರ್ಷಗಳಿಂದ 2 ರೂಪಾಯಿ ತೆಗೆದುಕೊಳ್ಳುತ್ತಿದ್ದರು. ಆದರೆ ಇದೀಗ ಉಚಿತವಾಗಿ ಸೇವೆ ನೀಡುತ್ತಿದ್ದಾರೆ. ಈ ಕುರಿತು ಡಾ.ಎ.ಮಕ್ಸೂದ್ ಚಂದಾ ಅವರು ಅಭಿಪ್ರಾಯ ತಿಳಿಸಿದ್ದು, ಬಡ ಜನರನ್ನು ಕಂಡು ನನ್ನ ವೈಯಕ್ತಿಕ ಸಂಪಾದನೆ ಮಾಡೋದನ್ನು ಬಿಟ್ಟು ಸಮಾಜಕ್ಕೆ ನನ್ನ ಸೇವೆ ನೀಡಬೇಕು ಎಂದು ಉಚಿತ ಚಿಕಿತ್ಸೆ ನೀಡುತ್ತಿದ್ದೇನೆ. ರೋಗಿಗಳಿಗೆ ಯಾವುದಾದರು ಮಾರಣಾಂತಿಕ ಕಾಯಿಲೆ ಇದ್ದರೆ ನಮ್ಮದೇ ಟ್ರಸ್ಟ್ ಕಡೆಯಿಂದ ಹೈದ್ರಾಬಾದ್‍ನಿಂದ ನುರಿತ ವೈದ್ಯರನ್ನು ಕರೆ ತಂದು ಚಿಕಿತ್ಸೆ ಕೊಡಿಸುತ್ತಿದ್ದೇವೆ ಪತ್ನಿ, ಪುತ್ರ, ಪುತ್ರಿ, ಅಳಿಯ ಸೇರಿದಂತೆ ಇಡೀ ಕುಟುಂಬವೇ ವೈದ್ಯ ವೃತ್ತಿಯನ್ನು ಮಾಡಿಕೊಂಡು ಹೋಗುತ್ತಿದ್ದೇವೆ. ಇಂತಹ ಕುಗ್ರಾಮದಲ್ಲಿ ಹುಟ್ಟಿದ ನಾನು, ಬಡವರ ಬದುಕನ್ನು ಬಹಳ ಹತ್ತಿರದಿಂದ ನೋಡಿದ್ದು ಅದಕ್ಕೆ ಈ ರೀತಿಯ ಉಚಿತ ಸೇವೆ ನೀಡುತ್ತಿದ್ದೇನೆ ಎಂದು ಮಕ್ಸೂದ್ ಹೇಳುತ್ತಾರೆ.

ರೋಗಿಗಳಿಗ ಬಸ್ ಚಾರ್ಜ್ ಕೂಡ ಫ್ರೀ?

Also read: ಸಂಬಳದ ಹಣವನ್ನೆಲ್ಲಾ ಅನಾಥರಿಗೆ ದಾನ ಮಾಡಿದ ಪ್ರಪಂಚದ ಪ್ರಪ್ರಥಮ ಸಹಸ್ರಮಾನದ ವ್ಯಕ್ತಿ ಶ್ರೀ ಕಲ್ಯಾಣಸುಂದರಂ ಇಡಿ ಜಗ್ಗತಿಗೆ ಮಾದರಿ..

ಬಡವರ ಕಷ್ಟಗಳನ್ನು ಕಣ್ಣಾರೆ ಕಂಡಿರುವ ಡಾ.ಎ.ಮಕ್ಸೂದ್ ಚಂದಾ ಬಡವರಿಗಾಗಿ ಯಾಕೆ ಉಚಿತ ಸೇವೆ ನೀಡಬಾರದು ಎಂದು ಈ ಸೇವೆ ನಿಡುತ್ತಿದ್ದಾರೆ. ಸ್ವತಃ ಗೋಲ್ಡ್ ಮೇಡಲಿಸ್ಟ್ ಆಗಿರುವ ವೈದ್ಯರು ತಮ್ಮ ಸೇವೆ ಗಡಿ ಜಿಲ್ಲೆಗೆ ಬೇಕು ಎಂದು ಒಂದು ಸಣ್ಣ ಕ್ಲಿನಿಕ್ ತೆಗೆದುಕೊಂಡು ಪ್ರತಿದಿನ ಬರುವ ನೂರಾರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲೆಯ ರೋಗಿಗಳು ಅಲ್ಲದೆ ಪಕ್ಕದ ತೆಲಂಗಾಣದಿಂದಲು ಕೂಡ ರೋಗಿಗಳು ಬಂದು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳಿಗೆ ಔಷಧಿಗಳ ಜೊತೆಗೆ ವಾಪಸ್ ಹೋಗಲು ಬಸ್ಸಿಗೆ ಹಣವಿಲ್ಲದಿದ್ದರೂ ಅದನ್ನು ನೀಡಿದ ಉದಾಹರಣೆಗಳು ಕೂಡ ಇವೆ. ಒಟ್ಟಾರೆಯಾಗಿ ಬೀದರ್ ಜನರಿಗೆ ದೇವರ ಸ್ವರೋಪಿ ಆಗಿರುವ ಮಕ್ಸೂದ್ ಅವರ ಇಡಿ ಕುಟುಂಬವೇ ಬಡವರಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದು ಮೆಚ್ಚುವುದೆ.

ಮಾಹಿತಿ ಕೃಪೆ: Public tv