ಬಾಬಾ ಅಮ್ಟೆಯವರ ಪುತ್ರ ವನ್ಯಜೀವಿಗಳಿಗೆ ಆಸರೆ ನೀಡಿರುವುದನ್ನು ನೋಡಿದರೆ, ನಿಮಗೂ ವನ್ಯ ಜೀವಿಗಳ ಕಾಳಜಿ ವಹಿಸಬೇಕು ಎಂದು ಆಸೆ ಹುಟ್ಟುತ್ತೆ!!

0
1227

ಮಹಾರಾಷ್ಟ್ರದ ನಾಗ್ಪುರ್ ನಗರದಿಂದ ೩೫೦ ಕಿಲೊಮೀಟರ್ ದೂರ ಹೇಮಲ್-ಕಾಸ ಎಂಬ ಊರಿದೆ, ಇಲ್ಲಿ ಒಂದು ದೊಡ್ಡ ಜಂಟಿ ಕುಟುಂಬ ವಾಸವಿದೆ, ಎಷ್ಟು ದೊಡ್ಡ ಕುಟುಂಬವೆಂದರೆ ಅದರಲ್ಲಿ ಸುಮಾರು ೯೦ ಮಕ್ಕಳಿದ್ದಾರೆ ಹಾಗು ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ, ಇದೆಲ್ಲ ಕೇಳಿದ ಮೇಲೆ ಅಷ್ಟಕ್ಕೂ ಇವರ ತಂದೆ-ತಾಯಿ ಯಾರು ಎಂಬ ಪ್ರಶ್ನೆ ಮೂಡೋದು ಸಹಜ.

ಡಾ.ಪ್ರಕಾಶ್ ಮತ್ತು ಮಂದಾಕಿನಿ ಆಮ್ಟೆ ಇವರ ತಂದೆ ತಾಯಿ, ಇವರ ಈ ಮಕ್ಕಳು ಬೇರ್ಯಾರು ಅಲ್ಲ ಅವುಗಳೆ ಕಾಡು ಪ್ರಾಣಿಗಳು, ನೋಡಲಿಕ್ಕೆ ಹಳ್ಳಿಯ ಜನರ ರೀತಿ ಕಂಡರೂ, ಪ್ರಕಾಶ್ ಒಬ್ಬ ವೈದ್ಯರು. ಹೇಮಲ್-ಕಾಸದ ೫೦ ಎಕರೆ ಜಮೀನಿನಲ್ಲಿ ಇದೆ ಈ ಆಮ್ಟೆ ಪ್ರಾಣಿ ಆರ್ಕ್ ಎಂಬುವ ಕಾಡು ಪ್ರಾಣಿಗಳಿಗೆ ೪೫ ವರ್ಷಗಳಿಂದ ನಿವಾಸವಾಗಿರುವ ಈ ಸ್ಥಳ. ಕಾಡು ಪ್ರಾಣಿಗಳಿಗೆ ತಿನ್ನಲು ಊಟ ಇರುವ ಸ್ಥಳದ ಜೊತೆಗೆ ಅವುಗಳ ಪಾಲನೆ ಪೋಷಣೆ ಎಲ್ಲವನ್ನು ಆಮ್ಟೆ ಪರಿವಾರವೇ ನೋಡಿಕೊಳ್ಳುತ್ತದೆ. ಈಗ ನೀವು, ಸಾಕುವ ಕಾಡು ಪ್ರಾಣಿಗಳೆಂದರೆ ಸಾಮಾನ್ಯವಾಗಿ ಜಿಂಕೆ, ಕೋತಿ, ಎಮ್ಮೆ, ನವಿಲು ಅಥವಾ ಹಸುಗಳಂತಹ ಸಾಧು ಪ್ರಾಣಿಗಳೆಂದು ಅಂದುಕೊಂಡಿರುತ್ತೀರ ಹಾಗಾದ್ರೆ ನಿಮ್ಮ ಊಹೆ ತಪ್ಪು, ಇಲ್ಲಿ ಇರುವ ಕಾಡು ಪ್ರಾಣಿಗಳನ್ನು ನೋಡಿದರೆ ನಿಮಗೆ ಒಂದು ಕ್ಷಣ ಅಚ್ಚರಿ ಆಗೋದಂತು ಖಚಿತ.

ಇವರು ಕೇವಲ ಸಾಧು ಪ್ರಾಣಿಗಳಾದ ಜಿಂಕೆ, ಸಾರಂಗ, ನವಿಲುಗಳನ್ನು ಮಾತ್ರ ಸಾಕಿಲ್ಲ, ಕರಡಿ, ಕತ್ತೆ ಕಿರುಬ(ಹೈನಾ), ಮೊಸುಳೆ, ಚಿರತೆ, ಮುಳ್ಳಿನ ಹಂದಿ, ಉಡುಮ ಮತ್ತು ಎಲ್ಲಾ ರೀತಿಯ ಹಾವುಗಳನ್ನು ಸಾಕಿದ್ದಾರೆ. ಕೆಲವು ಅಧ್ಯಯನದ ಪ್ರಕಾರ ಕತ್ತೆಕಿರುಬ ಅಥವಾ ಹೈನಾ ಮಕ್ಕಳನ್ನು ಎತ್ತಿಕೊಂಡು ಹೋಗುತ್ತವೆ, ಆದರೆ ಈ ಆಮ್ಟೆ ಪ್ರಾಣಿ ಆರ್ಕ್-ನಲ್ಲಿ ಡಾ.ಪ್ರಕಾಶ್ ರವರ ಮೊಮ್ಮಗ ಆರವ್ ಮತ್ತು ೬ ತಿಂಗಳ ಮೊಮ್ಮಗಳು ಅದರ ಜೊತೆ ಆಟವಾಡುತ್ತಾರೆ, ಅಷ್ಟೇ ಅಲ್ಲ ಪ್ರಕಾಶ್ ಅವರು ಸಹ ಚಿರತೆ, ಹೈನಾ, ಕರಡಿಗಳ ಜೊತೆ ಆಟವಾಡುತ್ತಿರುತ್ತಾರೆ ಪ್ರಾಣಿಗಳು ಸಹ ಇವರನ್ನು ತಮ್ಮ ಕುಟುಂಬ ಸದಸ್ಯರ ಹಾಗೆ ಪ್ರೀತಿಸುತ್ತವೆ. ಡಾ.ಪ್ರಕಾಶ್ ರವರ ಈ ಆಮ್ಟೆ ಪ್ರಾಣಿ ಆರ್ಕ್-ನ ಇನ್ನೊಂದು ವಿಶೇಷವೇನೆಂದರೆ ಇವರಾಗಲಿ ಇವರ ಪತ್ನಿಯಾಗಲಿ ಯಾವುದೇ ಪ್ರಾಣಿಗಳಿಗೆ ತರಬೇತಿ ನೀಡಿಲ್ಲ, ಪ್ರಾಣಿಗಳು ಸ್ವತಃ ಇವರನ್ನು ತಮ್ಮವರೆಂದು ಭಾವಿಸುತ್ತವೆ.

ಡಾ.ಪ್ರಕಾಶ್ ಆಮ್ಟೆ, ಭಾರತ ಕಂಡ ದೊಡ್ಡ ಸಾಮಾಜಿಕ ಕಾರ್ಯಕರ್ತ ಪದ್ಮ ವಿಭೂಷಣ, ಗಾಂಧಿ ಶಾಂತಿ ಪ್ರಶಸ್ತಿ, ರಾಮೋನ್ ಮ್ಯಾಗ್ಸಯ್ಸಯ್ ಅವಾರ್ಡ್, ಟೆಂಪ್ಲೇಟೋನ್ ಪ್ರಶಸ್ತಿ ಮತ್ತು ಜಮ್ನಾಲಾಲ್ ಬಜಾಜ್ ಅವಾರ್ಡ್ ವಿಜೇತ ಬಾಬಾ ಆಮ್ಟೆ ಎಂದೇ ಹೆಸರುವಾಸಿಯಾದ ಮುರಳೀಧರ್ ದೇವಿದಾಸ್ ಆಮ್ಟೆಯವರ ಪುತ್ರ. ಬಾಬಾ ಆಮ್ಟೆ ಮತ್ತು ಅವರ ಪತ್ನಿ ಸೇರಿ ಮೊದಲಿಗೆ ಒಂದು ಮರದ ಕೆಳಗೆ ಕುಷ್ಠ ರೋಗಿಗಳ ಸೇವೆ ಶುರು ಮಾಡಿ ನಂತರ ಇದೆ ರೀತಿ ಒಂದು ಆನಂದವನ ಎಂಬ ಸೇವಾ ಸ್ಥಳವನ್ನು ಸ್ಥಾಪಿಸಿ ಆಗಿನ ಕಾಲದಲ್ಲಿಯೇ ಕುಷ್ಠ ರೋಗಿಗಳಿಗೆ ಔಷಧ ಕೊಟ್ಟು ಪ್ರೀತಿಯಿಂದ ನೋಡಿಕೊಂಡು ಅವರಲ್ಲಿ ಬದುಕುವ ಆಸೆ ಮೂಡಿಸಿದವರು, ಬಾಬಾ ಆಮ್ಟೆಯವರು ೨೦೦೮ ರ ಫೆಬ್ರವರಿಯಲ್ಲಿ ನಿಧನ ಹೊಂದಿದರು ಆದರೆ ಅವರ ಸಮಾಜ ಸೇವೆ ಮಾತ್ರ ಅವರ ಮಗನ ರೂಪದಲ್ಲಿ ಮುಂದುವರೆದಿದೆ.

೧೯೭೩ ರ ಒಂದು ದಿನ ಹಳ್ಳಿಯವರು ಕೋತಿಗಳನ್ನು ಕಟ್ಟಿ ಓಯುತ್ತಿದರು ಇದನ್ನು ಕಂಡ ಪ್ರಕಾಶ್ ದಂಪತಿ ಅವರ ಮನ ಬದಲಾಯಿಸಿ, ಪ್ರಾಣಿಗಳನ್ನು ಉಳಿಸಿದರೆ ನಾವು ಹಳ್ಳಿಯ ಜನರಿಗೆ ಸಹಾಯ ಮಾಡುತ್ತೇವೆಂದು ಭಾಷೆ ನೀಡಿದರು ಆ ಘಟನೆಯೇ ಇವರಿಗೆ ಸ್ಫೂರ್ತಿಯಾಯಿತು. ಪ್ರಕಾಶ್ ರವರು ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪೂರ್ಣಗೊಂಡ ನಂತರ, ಬೇಟೆಯಾಡುವವರಿಂದ ರಕ್ಷಿಸಿದ ಅನಾಥ ಕಾಡು ಪ್ರಾಣಿಗಳಿಗಾಗಿ ಈ ಸೇವಾ ಕೇಂದ್ರ ಸ್ಥಾಪಿಸಿದರು.

ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸರ್ಕಾರ ೨೦೦೨ ರಲ್ಲಿ ಇವರಿಗೆ ಪದ್ಮ ವಿಭೂಷಣ ಹಾಗು ರಾಮೋನ್ ಮ್ಯಾಗ್ಸಯ್ಸಯ್ ಅವಾರ್ಡ್ ನೀಡಿ ಗೌರವಿಸಿದೆ. ಪ್ರಕಾಶವಾತ (Pathways to Light) ಇವರು ಬರೆದಿರುವ ತಮ್ಮ ಜೀವನಚರಿತ್ರೆ ಆಧಾರಿತ ಪುಸ್ತಕ. ಆಮ್ಟೆಯವರ ಈ ಪುಸ್ತಕ ಮೊದಲು ಮರಾಠಿ ಭಾಷೆಯಲ್ಲಿ ಬರಿಯಲಾಗಿತ್ತು ನಂತರ ಇದನ್ನು ಕನ್ನಡ, ಗುಜರಾತಿ, ಮತ್ತು ಆಂಗ್ಲ ಭಾಷೆಗೆ ಅನುವಾದಿಸಲಾಗಿದೆ. ಆಮ್ಟೆಯವರು ತಮ್ಮ ಕಾಡು ಸ್ನೇಹಿತರ ಜೊತೆಗಾದ ಸ್ವಂತ ಅನುಭವಗಳನ್ನು “ರಾಣಮಿತ್ರ” ಎಂಬ ಪುಸ್ತಕದಲ್ಲಿ ಬರೆದ್ದಿದ್ದಾರೆ.

ಸ್ವಂತ ತಂದೆ ತಾಯಿಗಳನ್ನೇ ಮನೆಯಿಂದ ಹೊರಗಟ್ಟುವ ಈ ಕಾಲದಲ್ಲಿ ಆಮ್ಟೆ ಕುಟುಂಬದ, ಅನಾಥ ಕಾಡು ಪ್ರಾಣಿಗಳ ಈ ಸೇವೆ ನಿಜಕ್ಕೂ ತುಂಬಾ ಹೆಮ್ಮೆಯ ವಿಷಯ ಅಲ್ಲವೇ…!