ಅ.1ರಿಂದ ಚಾಲನಾ ಪರವಾನಗಿ ಹಾಗೂ ಎಸ್ ಬಿ ಐ ಹೊಸ ನಿಯಮಗಳು ಜಾರಿ..!

0
1676

ಬೆಂಗಳೂರು: ಇದೇ ಅಕ್ಟೋಬರ್ ಆರಂಭದಿಂದ ಚಾಲನಾ ಪರವಾನಗಿಯ ಹೊಸ ನಿಯಮಗಳು ಜಾರಿಯಾಗಲಿದ್ದು, ದಿನನಿತ್ಯ ಉಪಯೋಗವಾಗುವ ಈ ನಿಯಮಗಳು ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿವೆ. ಕೇಂದ್ರ ಸರ್ಕಾರವು ಇತ್ತೀಚೆಗೆ ವಾಹನ ನೋಂದಣಿ ಕಾರ್ಡ್ ವಿತರಣೆ ಹಾಗೂ ವಾಹನ ಪರವಾನಗಿ(ಡ್ರೈವಿಂಗ್ ಲೈಸೆನ್ಸ್)ಗಳಿಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ಜಾರಿ ಮಾಡಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಬದಲಾವಣೆಗಳಿಂದ ಸರ್ಕಾರಕ್ಕೆ ಡಿಎಲ್ ಕಾರ್ಡ್ದಾರರ ದಾಖಲೆ ಹಾಗೂ ದಂಡದ ಮಾಹಿತಿಗಳನ್ನು 10 ವರ್ಷಗಳವರೆಗೆ ಕೇಂದ್ರೀಕೃತ ಆನ್ಲೈನ್ ಡಾಟಾ ಬೇಸ್ ನಿರ್ವಹಿಸಲು ಸಾಧ್ಯವಾಗಿಸಲಿದೆ. ಇಷ್ಟು ಮಾತ್ರವಲ್ಲದೇ, ವಿಶೇಷ ಚೇತನ ಚಾಲಕರ ವಿವರಗಳನ್ನು ಒಂದೆಡೆ ಸಂಗ್ರಹಿಸಲು ವಾಹನಗಳಿಗೆ ಮಾಡಿರುವ ಬದಲಾವಣೆ, ಯಾವುದೇ ವ್ಯಕ್ತಿ ಅಂಗದಾನ ಮಾಡಿದ್ದರೆ ಅವುಗಳ ವಿವರಗಳನ್ನು ಪಡೆಯಲು ಸಹಕಾರಿಯಾಗಲಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಬದಲಾವಣೆಗಳಿಂದ ಸರ್ಕಾರಕ್ಕೆ ಡಿಎಲ್ ಕಾರ್ಡ್ದಾರರ ದಾಖಲೆ ಹಾಗೂ ದಂಡದ ಮಾಹಿತಿಗಳನ್ನು 10 ವರ್ಷಗಳವರೆಗೆ ಕೇಂದ್ರೀಕೃತ ಆನ್ಲೈನ್ ಡಾಟಾ ಬೇಸ್ ನಿರ್ವಹಿಸಲು ಸಾಧ್ಯವಾಗಿಸಲಿದೆ. ಇಷ್ಟು ಮಾತ್ರವಲ್ಲದೇ, ವಿಶೇಷ ಚೇತನ ಚಾಲಕರ ವಿವರಗಳನ್ನು ಒಂದೆಡೆ ಸಂಗ್ರಹಿಸಲು ವಾಹನಗಳಿಗೆ ಮಾಡಿರುವ ಬದಲಾವಣೆ, ಯಾವುದೇ ವ್ಯಕ್ತಿ ಅಂಗದಾನ ಮಾಡಿದ್ದರೆ ಅವುಗಳ ವಿವರಗಳನ್ನು ಪಡೆಯಲು ಸಹಕಾರಿಯಾಗಲಿದೆ.

ದೇಶಾದ್ಯಂತ ಪೆಟ್ರೋಲ್ ಬಂಕ್ ಗಳಲ್ಲಿ ವಾಹನಗಳಿಗೆ ಇಂಧನ ಹಾಕಿಸಿಕೊಂಡ ಬಳಿಕ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಿದರೂ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ. ಡಿಜಿಟಲ್ ಪಾವತಿ ಉತ್ತೇಜಿಸಲು ತೈಲ ಕಂಪನಿಗಳು ಕ್ರೆಡಿಟ್ / ಡೆಬಿಟ್ ಕಾರ್ಡ್ಗಳು ಮತ್ತು ಇ-ವ್ಯಾಲೆಟ್ ಗಳನ್ನು ಬಳಸಿಕೊಂಡು ಈ ರಿಯಾಯಿತಿ ಪರಿಚಯಿಸಿದ್ದವು. ಸಿಹಿ ಸುದ್ದಿ ಎಂದರೆ ಡೆಬಿಟ್ ಕಾರ್ಡ್ಗಳ ಮೇಲಿನ ರಿಯಾಯಿತಿ ಮತ್ತು ಡಿಜಿಟಲ್ ಪಾವತಿಗಳ ಇತರ ವಿಧಾನಗಳು ಸದ್ಯಕ್ಕೆ ಮುಂದುವರಿಯುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ಚಿಲ್ಲರೆ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡುವ ಸಾಲಗಳಿಗೆ ನೀಡುವ ಬಾಹ್ಯ ಬಡ್ಡಿದರದ ನಿಗದಿಗೊಳಿಸುವ ಮಾನದಂಡವನ್ನು ಕಡ್ಡಾಯಗೊಳಿಸಲಾಗಿದೆ. ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲಗಳ ಮೇಲಿನ ದರವನ್ನು ಕಡಿಮೆಗೊಳಿಸಲಾಗಿದೆ. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದಂತೆ ಕಾರ್ಪೊರೇಟ್ ತೆರಿಗೆಯನ್ನು ಅಕ್ಟೋಬರ್. 01 ರಿಂದ ಜಾರಿಗೆ ಬರುವಂತೆ ಕಡಿತಗೊಳಿಸಲಾಗುತ್ತದೆ.

ಎಸ್ ಬಿಐ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಖಾತೆದಾರರು ಮಾಸಿಕ ಹೊಂದಿರಬೇಕಾದ ಕನಿಷ್ಠ ಬಾಕಿ ಮೊತ್ತದ ಪ್ರಮಾಣವನ್ನು ಮೊದಲಿಗಿಂತಲೂ ಇಳಿಕೆ ಮಾಡಿದೆ. ಮೆಟ್ರೋ ಮತ್ತು ನಗರ ಕೇಂದ್ರದಲ್ಲಿ ಖಾತೆ ಹೊಂದಿರುವವರು ಕನಿಷ್ಠ ಮಾಸಿಕ 3,000 ಮತ್ತು ಗ್ರಾಮೀಣ ಶಾಖೆಗಳಲ್ಲಿ ಖಾತೆ ಹೊಂದಿರುವವರು 1,000 ಬಾಕಿ ಹೊಂದಿರಬೇಕು. ಖಾತೆದಾರರು ಈ ಮೊತ್ತ ನಿರ್ವಹಿಸಲು ವಿಫಲವಾದಲ್ಲಿ ಶುಲ್ಕವನ್ನು ಸಹ ಕಡಿಮೆಗೊಳಿಸಲಾಗುತ್ತದೆ. ಅಲ್ಲದೇ ಶೇಕಡಾ 50 ರಷ್ಟು ಕಡಿಮೆಯಾದರೆ, ವ್ಯಕ್ತಿಗೆ 10 ರೂ ಮತ್ತು ಜಿಎಸ್ಟಿ ವಿಧಿಸಲಾಗುತ್ತದೆ. ಖಾತೆದಾರನು ಶೇಕಡಾ 50-75 ಕ್ಕಿಂತ ಕಡಿಮೆಯಾದರೆ, ಅಂಥವರು 12 ರೂ.ಗಳ ದಂಡ ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಖಾತೆದಾರನು ಶೇಕಡಾ 75 ಕ್ಕಿಂತ ಹೆಚ್ಚು ಕಡಿಮೆಯಾದರೆ, ಅದು 15 ರೂ.ಗಳ ದಂಡ ಮತ್ತು ಜಿಎಸ್ ಟಿ ವಿಧಿಸಲಾಗುತ್ತದೆ.