ದಸರಾ ಹಬ್ಬದಂದು ರಾಶಿಗನುಗುಣವಾಗಿ ಪೂಜೆಯ ಅನುಸಾರವನ್ನು ತಿಳಿದುಕೊಳ್ಳಿ, ನವರಾತ್ರಿಯ ಸಂಪೂರ್ಣ ಫಲ ಪಡೆದುಕೊಳ್ಳಿ!!

0
214

Astrology in kannada | kannada news 

ಪ್ರತಿಯೊಂದು ರಾಶಿಯವರಿಗೂ ಅವರದೇ ಆದ ದೇವರು ಇದ್ದು, ಸುಖ, ಶಾಂತಿ, ಸಂತೃಪ್ತಿ ಪಡೆಯಲು ವಿವಿಧ ದೇವರನ್ನು ಪೂಜಿಸುತ್ತಾರೆ. ಆದರೆ ಒಂದೇ ದೇವರನ್ನು ಪೂಜಿಸಬೇಕು ಎಂಬ ಕಾನೂನು, ಕಡ್ಡಾಯವೇನು ಇಲ್ಲ. ಮನೆತನದ ದೇವರುಗಳನ್ನು ಮನೆ ದೇವರೆಂದು, ತಮಗೆ ಇಷ್ಟವಾದ ದೇವರನ್ನು ಇಷ್ಟದೇವರೆಂದು ಕರೆಯುವ ವಾಡಿಕೆ. ಆಗ್ನಿ ಪುರಾಣದ ಪ್ರಕಾರ ಮತ್ತು ನಿಮ್ಮ ರಾಶಿ ಚಕ್ರದ ಪ್ರಕಾರ ಈ ನವರಾತ್ರಿ ದುರ್ಗಾ ದೇವಿಯ ಯಾವ ಅವತಾರವನ್ನು ಪೂಜಿಸುವುದರಿಂದ ಹೆಚ್ಚಿನ ಫಲ ದೊರೆಯುತ್ತದೆ ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಹಾಗಾದರೆ ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು ಹಾಗೂ ಇಷ್ಟವಾರ ಯಾವುದು ಎನ್ನುವುದು ಎಲ್ಲಿದೆ ನೋಡಿ.

1. ಮೇಷ ರಾಶಿ:

ಮೇಷ ರಾಶಿಯನ್ನು ಮಂಗಳನು ಅಧಿಪತ್ಯವನ್ನು ವಹಿಸಿತ್ತಿರುತ್ತಾನೆ. ಆದ್ದರಿಂದ ಭಗವತಿ ದೇವಿಯನ್ನು ಪೂಜಿಸಿ ಆರಾಧಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು. ಈ ರಾಶಿಯ ಅಧಿಪತಿ ಕುಜ ಗ್ರಹ. ಇದು ಅಗ್ನಿ ತತ್ವರಾಶಿ. ಇದರ ಬಣ್ಣ ಕೆಂಪು. ದೇವಿಗೆ ಕೆಂಪು ಬಣ್ಣ ಬಲುಪ್ರಿಯ. ಆದ್ದರಿಂದ ಈ ಇಷ್ಟದೇವರಾಗಿ ಪೂಜಿಸಿದರೆ ಫಲ ಹೆಚ್ಚು ಸಿಗುವುದು. ಮತ್ತು ಮೇಷ ರಾಶಿಯವರಿಗೆ ಕಂಕಣ ಬಲ ಕೂಡಿ ಬಂದು ವಿವಾಹವಾಗುವ ಯೋಗವಿದೆ.

ದಿನ ಭವಿಷ್ಯ

2. ವೃಷಭ ರಾಶಿ:

ಈ ರಾಶಿಯವರು ಶತ್ರುಗಳ ವಿರುದ್ಧ ಜಯ ಹೊಂದಿ. ರೋಗಗಳಿಂದ ಮುಕ್ತಿ ಸಿಗಲು ವೃಷಭ ರಾಶಿಯವರು ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಬೇಕು.

ದಿನ ಭವಿಷ್ಯ

3. ಮಿಥುನ ರಾಶಿ:

ಈ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯವರು ತಾಯಿ ಭುವನೇಶ್ವರಿ ಹಾಗೂ ದೇವಿ ಚಂದ್ರಘಂಟಾಳನ್ನು ಪೂಜೆ ಮಾಡಬೇಕು. ಇದರ ಬಣ್ಣ ಹಸಿರು. ದೇವಿಗೆ ಹಸಿರು ಬಣ್ಣ ಬಲುಪ್ರಿಯ. ಇದರಿಂದ ಸಂತಾನ ಫಲ ಪ್ರಾಪ್ತಿಯಾಗಿ. ಧನ-ಧಾನ್ಯ ವೃದ್ಧಿಯಾಗಲಿದೆ ಮತ್ತು ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಕಾಣಬಹುದು..

ದಿನ ಭವಿಷ್ಯ

4. ಕಟಕ ರಾಶಿ:

ಮನೆಯಲ್ಲಿ ಸುಖ-ಶಾಂತಿ ನೆಲೆಸಲು ಮತ್ತು ಹಿಡಿದ ಕೆಲಸ-ಕಾರ್ಯಗಳಲ್ಲಿ ಉತ್ತಮ ಯಶಸ್ಸು ಸಿಗಲು ಈ ರಾಶಿಯವರು ದೇವಿ ಸಿದ್ಧಿದಾತ್ರಿಯನ್ನು ಪೂಜಿಸಬೇಕು. ಇವರ ಬಣ್ಣ ಬಿಳಿ. ಸಿದ್ಧಿದಾತ್ರಿಗೆ ಬಿಳಿ ಬಣ್ಣ ಇಷ್ಟ. ಅದರಲ್ಲೂ ಹೆಚ್ಚಾಗಿ ಬಿಳಿ ಮಲ್ಲಿಗೆ ಹೂವಿನಿಂದ ಪೂಜಿಸಬೇಕು.

ದಿನ ಭವಿಷ್ಯ

5. ಸಿಂಹ ರಾಶಿ:

ನವರಾತ್ರಿಯಲ್ಲಿ ದೇವಿಯ ಕೃಪೆ ಪಡೆಯಲು ಪೀತಾಂಬರಳನ್ನು ಪೂಜಿಸಬೇಕು. ಜೊತೆಗೆ ತಾಯಿ ಕಾಳರಾತ್ರಿಯನ್ನು ಆರಾಧಿಸಿ. ತಾಯಿ ಪೀತಾಂಬರಿ ಸುಲಭವಾಗಿ ಒಲಿಯುವಳಾಗಿದ್ದು. ಆದ್ದರಿಂದ ಈ ರಾಶಿಯವರು ತಾಯಿ ಪೀತಾಂಬರಳನ್ನು ಆರಾಧಿಸಿದರೆ ಸಕಲ ಇಷ್ಟಾರ್ಥವು ಸಿದ್ಧಿಸುತ್ತವೆ. ಸಹೋದರ, ಸಹೋದರಿಯಿಂದ ಉತ್ತಮ ಸಹಾಯ-ಸಹಕಾರ ದೊರೆಯಲಿದೆ.

ದಿನ ಭವಿಷ್ಯ

6. ಕನ್ಯಾ ರಾಶಿ:

ಈ ರಾಶಿಯವರು ತಾಯಿ ಭುವನೇಶ್ವರಿ ದೇವಿಯನ್ನು ಇಷ್ಟದೇವರನ್ನಾಗಿ ಮಾಡಿಕೊಂಡು ಪೂಜಿಸಬೇಕು. ತಾಯಿ ಭುವನೇಶ್ವರಿ ಜೊತೆ ಚಂದ್ರಘಂಟೆಯನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ. ಎರಡೂ ದೇವತೆಗಳು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರ ಕೊರತೆ ಕಂಡುಬರದು.

ದಿನ ಭವಿಷ್ಯ

7. ತುಲಾ ರಾಶಿ:

ತುಲಾ ರಾಶಿಯವರು ಅಂದು ಕೊಂಡ ರಾರ್ಯಗಳು ನಿರ್ವಿಘ್ನವಾಗಿ ನಡೆಯಲು ಮಾತೆ ಆದಿಶಕ್ತಿಯನ್ನು ಆರಾಧಿಸಬೇಕು. ಆದಿಶಕ್ತಿಯನ್ನು ಆರಾಧಿಸಿದರೆ ಸಕಲ ಸಮೃದ್ಧಿ, ಧನ ಸಂಪತ್ತು ಹೆಚ್ಚುತ್ತದೆ. ಈ ನವರಾತ್ರಿಯು ಜೀವನದಲ್ಲಿ ಮತ್ತಷ್ಟು ಖುಷಿಯನ್ನು ತರಲಿದೆ.

ದಿನ ಭವಿಷ್ಯ

8 ವೃಶ್ಚಿಕ ರಾಶಿ:

ದಿನ ಭವಿಷ್ಯ

ವೃಶ್ಚಿಕ ರಾಶಿಯನ್ನು ಮಂಗಳ ಗ್ರಹ ಆಳುತ್ತಾನೆ. ತಾಯಿ ಭಗವತಿ ದೇವಿಯನ್ನು ಮತ್ತು ತಾಯಿ ತಾರಾ ದೇವಿ ಹಾಗೂ ತಾಯಿ ಶೈಲಪುತ್ರಿಯನ್ನು ಆರಾಧಿಸಿದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ. ಶೈಲಪುತ್ರಿಯ ಆರಾಧನೆಯಿಂದ ಸಾಧಕನಿಗೆ ಬಲ, ಶೌರ್ಯ ಮತ್ತು ಇಂದ್ರಿಯ ನಿಗ್ರಹ ಶಕ್ತಿ ಬರುತ್ತದೆ.

9. ಧನಸ್ಸು ರಾಶಿ:

ದಿನ ಭವಿಷ್ಯ

ಧನಸ್ಸು ರಾಶಿಯವರು ತಾಯಿ ಕಮಲ ಹಾಗೂ ಸಿದ್ಧಿಧಾತ್ರಿಯನ್ನು ಆರಾಧಿಸಿದರೆ ಜ್ಞಾನ, ಬುದ್ದಿ ಮತ್ತು ತಿಳುವಳಿಕೆ ಹೆಚ್ಚುತ್ತದೆ. ಸಿದ್ಧಿಧಾತ್ರಿ ದೇವಿಯ ಪೂಜೆ ಮಾಡುವುದರಿಂದ ಹೆಚ್ಚಿನ ಆಧ್ಯಾತ್ಮಿಕ ಜ್ಞಾನ ಮತ್ತು ಸ್ವಯಂ ಪರಿಶೋಧನೆ ಸಿಗುವುದು. ಜನ್ಮಕುಂಡಲಿಯಲ್ಲಿ ಕೇತುವಿನಿಂದ ಆಗಿರುವಂತಹ ಯಾವುದೇ ಕೆಡುಕನ್ನು ಸಿದ್ಧಿಧಾತ್ರಿ ದೇವಿಯು ನಿವಾರಿಸುವರು.

10. ಮಕರ ರಾಶಿ:

ಮಕರ ರಾಶಿಯವರು ಜಗನ್ಮಾತೆಯ ಕೃಪೆ ಪಡೆಯಲು ಶಕ್ತಿ ಸ್ವರೂಪಿಣಿ ಕಾಳಿ ದೇವಿ ಹಾಗೂ ಸಿದ್ಧಿಧಾತ್ರಿ ದೇವಿಯನ್ನು ಆರಾಧಿಸಬೇಕು. ಶ್ರದ್ಧೆಯಿಂದ “ಓಂ ದೈತ್ಯ ಮರ್ದಿನಿ ನಮಃ” ಎಂಬ ಮಂತ್ರವನ್ನು ಪಠಿಸುವುದರ ಮೂಲಕ ಶಕ್ತಿ ದೇವತೆಯ ಕೃಪೆಗೆ ಪಾತ್ರರಾಗಬಹುದಾಗಿ.

ದಿನ ಭವಿಷ್ಯ

11. ಕುಂಭ ರಾಶಿ:

ಈ ರಾಶಿಯವರಿಗೆ ಕೆಲಸ- ಕಾರ್ಯಗಳಲ್ಲಿ ಅದೃಷ್ಟ ಜೊತೆಗಿರಲು ತಾಯಿ ಕಾಳಿ ಮಾತೆ ಹಾಗೂ ತಾಯಿ ಸಿದ್ಧಿಧಾತ್ರಿಯನ್ನು ಪೂಜೆ ಮಾಡಿದರೆ ನಿಮ್ಮ ಬದುಕಿನಲ್ಲಿ ಒಳ್ಳೆಯ ದಿನಗಳು ಬರುತ್ತವೆ. ನವಮಿಯಂದು ದುರ್ಗೆಯು ಒಂಭತ್ತನೇ ಅವತಾರವಾದ ಸಿದ್ಧಿಧಾತ್ರಿಯ ರೂಪದಲ್ಲಿರುತ್ತಾಳೆ. ಸಿದ್ಧಿಧಾತ್ರಿ ದೇವಿಯು ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆ ನೀಡುತ್ತಾಳೆ.

ದಿನ ಭವಿಷ್ಯ

12. ಮೀನ ರಾಶಿ

ಮೀನ ರಾಶಿಯವರು ಮಹಾಗೌರಿ ದೇವಿಯ ಪೂಜೆ ಮಾಡಬೇಕು. ಗಣೇಶ ಪ್ರಾರ್ಥನೆ ಮೂಲಕ ಪೂಜೆ ಆರಂಭಿಸಿ, ಷೋಡಸೋಪಚಾರ ಮಾಡಿದ ಬಳಿಕ ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು. ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧಾನ್ಯ ನೀಡುವರು. ಮನಸ್ಸಿನಲ್ಲಿರುವಂತಹ ಗೊಂದಲ ನಿವಾರಣೆ ಮಾಡಿ, ಯಶಸ್ವಿ ಜೀವನ ಸಾಗಿಸಲು ನೆರವಾಗುವರು.

ದಿನ ಭವಿಷ್ಯ