ಜೀವನದಲ್ಲಿ ಸಾರ್ಥಕತೆ ಪಡೆಯುವುದಕ್ಕೆ ಪಂಚ ಸೂತ್ರಗಳು!!

0
1393

ಸಾವು ಯಾರಿಗೂ ಪ್ರಿಯವಲ್ಲ . ಸಾವು ಎನ್ನುವುದು ಕಹಿ ಸತ್ಯ , ಪ್ರತಿಯೊಬ್ಬನ ಅಂತ್ಯವು ಸಾವಿನ ಮೂಲಕವೇ . ಇಂಥ ಸಾವಿನ ಅಂಚಿನಲ್ಲಿದ್ದಾಗ , ನಾವು ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಸಾಯುತ್ತೇವೆ ಎಂಬ ಅರಿವಿದ್ದಾಗ ವಿಷಾದಗಳ ಸರಮಾಲೆ ನಮ್ಮನು ಸುತ್ತಿಕೊಳ್ಳುತ್ತದೆ . ಒಂದು ಸರ್ವೆಯ ಪ್ರಕಾರ ಸಾಯುವ ಜನರಲ್ಲಿ ಅತಿಯಾಗಿ ಕಂಡು ಬರುವುದು ಈ ೫ ವಿಷಾದಗಳು .:

೧. ನಾನು ಬೇರೆಯರು ಬಯಸಿದ ಹಾಗೆ ಜೀವಿಸುವ ಬದಲು ನನಗೆ ಬೇಕಾದಂತೆ , ನನ್ನ ಕನಸುಗಳನ್ನು ಜೀವಿಸಬೇಕಾಗಿತ್ತು , ಸಾಧಿಸಬೇಕಾಗಿತ್ತು : ಇದು ಪ್ರತಿಯೊಬ್ಬರ ವಿಷಾದ .

ನಮ್ಮ ಜೀವನ ಕೊನೆಯಾಗುತ್ತಾ ಬಂದಾಗ ,ನಾವು ಬಂದ ಹಾದಿಯನ್ನು ನೋಡಿದಾಗ ಕಂಡ ಕನಸುಗಳು ನೆನಪಾಗುತ್ತವೆ . ನಮ್ಮ ಜೀವನದಲ್ಲಿ ,” ಛೆ! ನಾನು ಅದನ್ನು ಮಾಡಲಿಲ್ಲವಲ್ಲ ” ಎಂಬ ವಿಷಾದಕ್ಕಿಂತ ” ನಾನದನ್ನು ಮಾಡಿದೆ ಎಂದು ನಂಗೆ ನಂಬಲಾಗುತ್ತಿಲ್ಲ ” ಎಂಬ ಆಶ್ಚರ್ಯ ಹೆಚ್ಚು ಆನಂದ ನೀಡುತ್ತದೆ .

೨.ನಾನು ಅಷ್ಟೊಂದು ಕಷ್ಟಪಟ್ಟು ದುಡಿಯಬೇಕಾಗಿರಲಿಲ್ಲ : ಇದು ಬಹುತೇಕ ಗಂಡಸರಲ್ಲಿ ಇರುವ ವಿಷಾದ . ನಾವು ಹಣ ಮಾಡುವ ಭರದಲ್ಲಿ ಜೀವನವನ್ನು ಜೀವಿಸುವುದೇ ಮರೆತುಬಿಡುತೇವೆ . ದುಡಿಯುವುದು ಜೀವನಕ್ಕೆ ಬಹಳ ಮುಖ್ಯ , ಆದರೆ ಜೀವನವೇ ದುಡಿತವಲ್ಲ . ನಾವು ಈ ಲೋಕ ಬಿಟ್ಟು ಹೋಗುವಾಗ ಏನನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ .

೩.ನಾನು ನನಗನ್ನಿಸಿದ್ದನ್ನು ಎಂದು ಹೇಳಲಿಲ್ಲ , ನನ್ನ ಹೃದಯದ ಮಾತನ್ನು ಎಂದು ಕೇಳಲಿಲ್ಲ :

ಬೇರೆಯವರು ನೊಂದುಕೊಳ್ಳುತಾರೆ , ನಮ್ಮ ಸಂಬಂಧ ಹಾಳುಗುತ್ತದೆ , ನೋಡಿದವರು ಏನು ಎಂದುಕೊಳ್ಳುತ್ತಾರೋ ಎಂದು ನಾವು ಜೀವನ ಪೂರ್ತಿ ನಾವಾಗಿಯೇ ಇರುವುದಿಲ್ಲ . ಬೇರೆಯವರ ರೀತಿಯೇ ಬದುಕುತ್ತೇವೆ . ಬೇರೆಯವರ ಮೇಲಿನ ಸಿಟ್ಟನ್ನು ನಮ್ಮೊಳಗೇ ಇಟ್ಟುಕೊಂಡು ನಮ್ಮ ಅರೋಗ್ಯ ಹದಗೆಡಿಸಿಕೊಳ್ಳುತೇವೆ . ನಾವು ನಾಮಗನ್ನಿಸಿದ್ದನ್ನು ಒಳ್ಳೆಯ ರೀತಿಯಲ್ಲಿ ಎದುರಿನ ವ್ಯಕ್ತಿಗೆ ಹೇಳಬೇಕು .

೪.ನಾನು ನನ್ನ ಸ್ನೇಹಿತರೊಡನೆ ಸ್ನೇಹವನ್ನು ಜೀವಂತವಾಗಿರಿಸಬೇಕಾಗಿತ್ತು :

ಕಷ್ಟ ಸುಖ ನಗು ಅಳು ವನ್ನು ಹಂಚಿಕೊಳ್ಳಲು ಪಕ್ಕದಲ್ಲಿ ಒಬ್ಬ ಒಳ್ಳೆಯ ಸ್ನೇಹಿತನಿಲ್ಲದಿದ್ದರೆ ನಮ್ಮ ಬದುಕು ಎಂದಿಗೂ ಪರಿಪೂರ್ಣವಲ್ಲ . ಸ್ನೇಹಿತರು ಜೀವನದ ಒಂದು ಅವಿಭಾಜ್ಯ ಅಂಗ.

೫.ನಾನು ನನ್ನನ್ನು ಇನ್ನು ಖುಷಿಯಾಗಿರಿಸಬೇಕಾಗಿತ್ತು :

ಖುಷಿ ಎನ್ನುವುದು ಆಯ್ಕೆ . ಖುಷಿ ನಮ್ಮ ಒಳಗಿನಿಂದ ಬರುವುದು . ಎಷ್ಟು ದುಡಿದರು , ಎಷ್ಟು ಕಷ್ಟ ಪಟ್ಟರು ಜೀವನದಲ್ಲಿ ಖುಷಿ ಇಲ್ಲವಾದರೆ , ಏತಕ್ಕಾಗಿ ದುಡಿತ ?

ನಾವು ನಮ್ಮ ಜೀವನಾವಧಿಯಲ್ಲಿ ನಮ್ಮ ಬಗ್ಗೆ , ನಮ್ಮ ಕನಸುಗಳ ಬಗ್ಗೆ , ನಮ್ಮ ಖುಷಿಯ ಬಗ್ಗೆ  ಒಂದು ಚೂರು ಆಸಕ್ತಿ ತೋರಿಸಿದರೆ ನಾವು ಈ ವಿಷಾದಗಳಿಂದ ಮುಕ್ತವಾಗಿರಬಹುದು.