ಒಟ್ಟಿಗೆ ಕುಳಿತು ಊಟ ಮಾಡುವದರ ಲಾಭ!!!

0
2948

ನಾವು ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಅನೇಕ ಲಾಭಗಳಿವೆ. . . .ಅವುಗಳೇನೆಂದು ತಿಳಿದುಕೊಳ್ಳೋಣ.

ಮೊದಲಿಗೆ ಒಟ್ಟಿಗೆ ಕುಳಿತುಕೊಳ್ಳುವುದರಿಂದ ಒಬ್ಬರನ್ನೊಬ್ಬರು ನೋಡುವ ಅವಕಾಶ ಸಿಗುತ್ತದೆ. ಒಬ್ಬರನ್ನೊಬ್ಬರು ಪ್ರತಿ ದಿನ ನೋಡುತ್ತಿದ್ದರೆ, ನಮ್ಮ ಮನಸ್ಸಿನಲ್ಲಿ ಅವರ ಬಗ್ಗೆ ಇರುವ ಅಭಿಪ್ರಾಯ ಎಂದಿನಂತೆ ಇರಲು ಸಾಧ್ಯವಾಗಬಹುದು (ಕೆಲವು ಸನ್ನಿವೇಶಗಳಲ್ಲಿ ಆದ ವೈಮನಸ್ಥಿತಿಯನ್ನು ಹೊರತುಪಡಿಸಿ). ಪ್ರತಿ ದಿನ ನೋಡುವುದರಿಂದ ನಮ್ಮ ಚಿಕ್ಕ ಪುಟ್ಟ ದೈಹಿಕ ಬದಲಾವಣೆಗಳು ನಮ್ಮ ಬಾಂಧವ್ಯಕ್ಕೆ ಯಾವ ಅಡ್ಡಿಯನ್ನು ತರುವುದಿಲ್ಲ, ಕಾರಣ ಪ್ರತಿ ದಿನ ನೋಡುತ್ತಿದ್ದರೆ ದೈಹಿಕ ಬದಲಾವಣೆಯ ಅರಿವಾದರು ಸಹ ಮನಸ್ಸು ಅದನ್ನು ತಕ್ಷಣ ಒಪ್ಪಿಕೊಳ್ಳುತ್ತದೆ. ಈ ಒಪ್ಪಿಕೊಳ್ಳುವ ಮನಸ್ಥಿತಿ ಇದೆಯಲ್ಲ ಇದು ಜೀವನದಲ್ಲಿ ಬಹಳ ಪ್ರಾಮುಖ್ಯತೆ ವಹಿತ್ತದೆ. ನಮ್ಮ ಪರಿಸರದಲ್ಲಿ ಈ ಒಪ್ಪಿಕೊಳ್ಳುವಿಕೆ ಇಲ್ಲದಿದ್ದಿದ್ದರೆ ಬಹುಷ: ನಾವು ಸಹ ನಮ್ಮಲ್ಲಾದ ದೈಹಿಕ ಬದಲಾಣೆಗಳಿಗೆ ಅಳುಕಿ ಬದುಕಬೇಕಾಗುತ್ತಿತ್ತು.

ಎರಡನೆಯದಾಗಿ ನಾವು ನಮ್ಮ ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು, ಕಾರಣ ಪ್ರತಿ ದಿನ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ನಮಗೇ ಅರಿವಿಲ್ಲದೆ ನಮ್ಮ ಅಣ್ಣ ತಂಗಿಯರಜೊತೆ, ತಂದೆ ತಾಯಿಗಳಜೊತೆ, ಅಜ್ಜಿ ತಾತ, ಮಾವ, ದೊಡ್ಡಮ್ಮ ಹೀಗೆ ಅನೇಕರಲ್ಲಿ ನಮ್ಮ ಒಡನಾಟ ಉತ್ತಮವಾಗಿ ವಾತ್ಸಲ್ಯದ ವಾತಾವರಣ ನಿರ್ಮಾಣವಾಗುತ್ತದೆ. ಈ ವಾತ್ಸಲ್ಯದ ವಾತಾವರಣ ಅದೆಷ್ಟೋ ಮನೆಗಳಲ್ಲಿ ನಿರ್ಮಾಣವಾಗದಿರುವುದೇ ನಮ್ಮ ಅನೇಕ ವೈಫಲ್ಯ ಮತ್ತು ವೈಮಸ್ಸಿಗೆ ಕಾರಣವಾಗಿರುತ್ತದೆ. ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಸಹ ನಾವು ಆ ಕ್ಷಣ ಮರೆಯುತ್ತೇವೆ. ದಿ ನ ದಿನ ಹೀಗೆ ನೋಡುತ್ತ ಮಾತನಾಡುವುದರಿಂದ ಭಿನ್ನಾಭಿಪ್ರಾಯ ದಿನಗಳೆದಂತೆ ಮಾಯವಾಗಿ ಹೊಸದಾದ ಭಲಿಷ್ಟ ವಾತಾವರಣ ಸೃಷ್ಠಿಯಾಗುತ್ತದೆ. ಈ ಭಲಿಷ್ಟ ವಾತಾವರಣ ಸೃಷ್ಟಿಯಾಗುವುದಿದೆಯಲ್ಲ ಇದ ಅಷ್ಟು ಸುಲಭದ ವಿಷಯವಲ್ಲ.

ಮೂರನೆಯದಾಗಿ ನಾವು ನಮ್ಮವರ ಜೊತೆ ಯಾವ ವಿಷಯದ ಬಗ್ಗೆಯಾದರೂ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಹಾಗಾಗಿ ಎಲ್ಲಿ ಸಂತೋಷದ ವಾತಾವರಣ ಮುಕ್ತವಾಗಿರುತ್ತದೋ ಅಲ್ಲಿ ಮಾತ್ರ ನಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು. ಕೇವಲ ಸಂತೋಷದ ವಾತಾವರಣದಿಂದ ಮಾತ್ರ ಸಾಧ್ಯವಿಲ್ಲ, ಅಲ್ಲಿ ಅಭಿಪ್ರಾಯಗಳ ಅವಲೋಕನಕ್ಕೆ ಮುಕ್ತ ಅವಕಾಶವಿರಬೇಕು, ಅಂತಹ ಅವಕಾಶ ಬಹುಷ: ಈ ರೀತಿಯ ಬೋಜನದಿಂದ ಮಾತ್ರ ಸಾಧ್ಯ ಎಂದು ನಾ ಹೇಳಬಹುದು. ಇದೇ ಕಾರಣಕ್ಕಾಗಿಯೇ ಹಲವರು ಹಲವಾರು ಸಲ ಬೋಜನಕೂಟವನ್ನು ಆಯೋಜಿಸುತ್ತಾರೆ.

ಕೆಲವರು ನೇರವಾಗಿ ಹೇಳಲಾಗದ ವಿಷಯವನ್ನು ಸೂಕ್ಷ್ಮವಾಗಿ ಹೇಳಲು ಇಂತಹ ಬೋಜನ ಕೂಟಗಳನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ, ತಪ್ಪೇನು ಇಲ್ಲ ಒಂದು ಒಳ್ಳೆಯ ಕೆಲಸವಾಗಬೇಕಾದರೆ ನಾವು ಸ್ವಲ್ಪ ಭಿಗುಮಾನ ಬಿಟ್ಟು ಎಲ್ಲರೊಂದಿಗೆ ಇಂತಹ ಭೋಜನ ಕೂಟಗಳಲ್ಲಿ ಭಾಗವಹಿಸುವುದು ಉತ್ತಮ ಎಂದು ನನ್ನ ಅನಿಸಿಕೆ. ನಿಮಗೆ ತಿಳಿದಿರುವ ಇನ್ನೂ ಅನೇಕ ವಿಚಾರಗಳನ್ನು ನೀವು ನನ್ನೊಂದಿಗೆ ಹಂಚಿಕೊಳ್ಳಬಹುದು.