ಕೇತುಗ್ರಸ್ತ ಚಂದ್ರ ಗ್ರಹಣ ನಿಮ್ಮ ನಕ್ಷತ್ರಕ್ಕೆ ಪರಿಣಾಮ ಬೀರಿದರೆ ಏನು ಮಾಡ್ಬೇಕು ಅಂತ ತಿಳ್ಕೊಳಿ..

0
991

ಕೇತುಗ್ರಸ್ತ ಚಂದ್ರ ಗ್ರಹಣ

ದಿನಾಂಕ : 07-08-2017ನೇ ಸೋಮವಾರದಂದು ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸಲಿದೆ. ಗ್ರಹಣವು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.

ಶ್ರಾವಣ ಮಾಸದ ಶುಕ್ಲ ಪೌರ್ಣಿಮೆಯಂದು ಚಂದ್ರ ಗ್ರಹಣ ಸಂಭವಿಸಲಿದ್ದು, ಸ್ವರ್ಷ ಕಾಲ ರಾತ್ರಿ 10-22 ರಿಂದ ಪ್ರಾರಂಭವಾಗಿ ರಾತ್ರಿ 12-49 ಕ್ಕೆ ಮೋಕ್ಷ ಕಾಲವಾಗಿರುತ್ತದೆ.

ಭೋಜನ ವಿಚಾರ :

ಆ ದಿನ ಸೂರ್ಯೋದಯಾದಿ ಹಗಲು 12-28 ಘಂಟೆಯೊಳಗೆ ಆಹಾರ ಸೇವಿಸಬಹುದು. ಬಾಲಕರು, ವೃದ್ಧರು, ರೋಗಿಗಳು, ಅಶಕ್ತರು ಆ ದಿನ ಹಗಲು 3-30 ಗಂಟೆಯವರೆಗೂ ಆಹಾರ ಸೇವಿಸಬಹುದು.

ಗ್ರಹಣ ದೋಷವಿರುವ ನಕ್ಷತ್ರ ಮತ್ತು ರಾಶಿಗಳು

ನಕ್ಷತ್ರ :ಉತ್ತರಾಷಾಢ,ಶ್ರವಣ,ಧನಿಷ್ಠ,ರೋಹಿಣಿ,ಹಸ್ತ,ರೇವತಿ,ಮತ್ತು ಭರಣಿ.

ರಾಶಿ :ಮಕರ,ಕುಂಭ,ಮಿಥುನ,ಸಿಂಹ,ತುಲಾ.

ಶಾಂತಿ ವಿಚಾರ :

ಗ್ರಹಣ ದೋಷವಿರುವ ನಕ್ಷತ್ರ,ರಾಶಿಯವರು
1.ಈಶ್ವರನ ದೇವಾಲಯಕ್ಕೆ ದೀಪದ ಎಣ್ಣೆಯನ್ನು ದಾನಮಾಜುವುದು.
2.ಚಂದ್ರನಿಗೆ ಸಂಬಂಧಿಸಿದ ಧಾನ್ಯವಾದ ಅಕ್ಕಿಯನ್ನು ದೇವಾಲಕ್ಕೆ ಕಟ್ಟು ದೇವರನ್ನು ಪ್ರಾರ್ಥಿಸಬೇಕು.
3.ಚಂದ್ರಗ್ರಹದ ಬಣ್ಣವಾದ ಬಿಳಿಬಣ್ಣದ ಬಟ್ಟೆಯನ್ನು ದಾನಮಾಡುವುದು ದೇವರಿಗೆ ವಸ್ತ್ರವನ್ನು ಕೊಡಬೇಕು.
4.ನವಗ್ರಹ ದೇವಸ್ಥಾನಕ್ಕೆ ಹೋಗಿ ಹುರುಳಿ ದಾನಮಾಡಬೇಕು.
5.ಪುಣ್ಯಕ್ಷೇತ್ರಕ್ಕೆ ಹೋಗಿ ಪೂಜೆಸಲ್ಲಿಸಬೇಕು.
6.ನದಿ, ಸಮುದ್ರ ಸ್ನಾನ ಮಾಡಬೇಕು.
7.ದೇವಾಲಯದಲ್ಲಿ 21 ಪ್ರದಕ್ಷಿಣೆಮಾಡಬೇಕು.
8.ದೇವರಿಗೆ ರುದ್ರಾಭಿಷೇಕವನ್ನು ಮಾಡಿಸಬೇಕು.
9. ಗಾಯತ್ರಿಮಂತ್ರ ಪಠಣೆ ಮಾಡಬೇಕು.
10.ಬೆಳ್ಳಿಯನ್ನು ದಾನಮಾಡಬೇಕು.

ಎನ್.ಶರತ್ ಶಾಸ್ತ್ರಿ
ಶೈವಾಗಮ,ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ
ಸುಣ್ಣದಕೇರಿ  ಮೈಸೂರು
9845371416