ಭಾರತ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಭೀತಿ.

0
591

ಭಾರತ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಭೀತಿ ಎದುರಾಗಿದೆ. ಏಕೆಂದರೆ ಅಮೆರಿಕವು ತನ್ನ ಡಾಲರ್ ಮೌಲ್ಯ ವೃದ್ಧಿಗೆ ಮುಂದಾಗಿದೆ ಇದರಿಂದ ಅಮೆರಿಕದ ಮತ್ತು ಟರ್ಕಿಯ ರಾಜತಾಂತ್ರಿಕ ಸಂಬಂಧಕ್ಕೆ ಹುಳಿ ಬಿದ್ದು ಭಾರತದ ರೂಪಾಯಿ ಮೌಲ್ಯವು ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದ್ದು, ದೇಶದ ಆರ್ಥಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಭೀತಿ ಎದುರಾಗಿದೆ. ಇದು ದೇಶದ ಇತಿಹಾಸದಲ್ಲಿಯೇ ಡಾಲರ್‌ಗೆ ರೂಪಾಯಿ ಮೌಲ್ಯ 69.93 ರೂ. ಇತ್ತು ಆದ್ರೆ ಟರ್ಕಿ ಆರ್ಥಿಕ ಬಿಕ್ಕಟ್ಟಿನ ಪರಿಣಾಮದಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಐತಿಹಾಸಿಕ ಕನಿಷ್ಟ ಮಟ್ಟಕ್ಕೆ ರೂ. 70.08ಕ್ಕೆ ಕುಸಿತ ಕಂಡಿದೆ.

Also read: ನೀವು ಕಳೆದುಕೊಂಡ ಪರ್ಸ್’ ಗಳು Post Box’ ಗಳಲ್ಲಿ ಪತ್ತೆಯಾಗುತ್ತಿವೆ! ಪರ್ಸ್ ಕಳೆದುಕೊಂಡವರು Post office-ಅಲ್ಲಿ ವಿಚಾರಿಸಿ ನೋಡಿ..

ಒಂದು ವೇಳೆ ರೂಪಾಯಿ ಮೌಲ್ಯವು 71ನ್ನು ದಾಟಿದರೆ ನಾಲ್ಕರಿಂದ ಆರು ತಿಂಗಳಲ್ಲಿ ಡಾಲರ್ ಎದುರು ಅದರ ಮೌಲ್ಯ 80ಕ್ಕೆ ತಲುಪುವ ಅಪಾಯವಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಈ ಹಿಂದೆ ರೂಪಾಯಿ ಮೌಲ್ಯವು 69.20ಕ್ಕೆ ಕುಸಿದಿತ್ತು. ಡಾಲರ್ ಎದುರು ರೂಪಾಯಿ ಮೌಲ್ಯವು ಸೋಮವಾರ 1.08 ರೂ.ನಷ್ಟು ಕುಸಿದಿದೆ. ಪರಿಸ್ಥಿತಿ ಇದೇ ರೀತಿ ಬಿಕ್ಕಟ್ಟಿನಲ್ಲಿ ಮುಂದುವರಿಯುವ ಸಾಧ್ಯತೆ ಇರುವುದರಿಂದ ಅದನ್ನು ಎದುರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶ ಮಾಡಿ ಆರ್ಥಿಕ ನೀತಿಗಳಲ್ಲಿ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ.

4 ವರ್ಷದಲ್ಲಿ 2ನೇ ಸಲ ಬಡ್ಡಿ ದರ ಏರಿಸಿದ ಆರ್ ಬಿಐ, ಕಾರಣ ಏನು? ಅಂದ್ರೆ ಟರ್ಕಿ ತನ್ನ ಆರ್ಥಿಕತೆಯ ಮೇಲೆ ಕೆಲವು ನಿಯಂತ್ರಣ ಕ್ರಮಗಳನ್ನು ಹೇರಿದೆ. ಅಲ್ಲದೆ. ಅಮೆರಿಕವು ಟರ್ಕಿ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದು, ಅದರ ಕರೆನ್ಸಿ ಮೌಲ್ಯ ಕುಸಿಯಲು ಕಾರಣವಾಗಿದೆ. ಲಿರಾ ಡಾಲರ್ ಎದುರು ಸೋಮವಾರ ಶೇ 12ರಷ್ಟು ಕುಸಿದಿದೆ. ಕಳೆದ 12 ತಿಂಗಳಿನಲ್ಲಿ ಶೇ 50ರಷ್ಟು ಇಳಿಕೆಯಾಗಿದೆ. 1 ಲಿರಾದ ಮೌಲ್ಯ 10 ರೂಪಾಯಿಗೆ ಸಮ. ಈ ರೂಪಾಯಿ ಮೌಲ್ಯ ಕುಸಿತದಿಂದ ಷೇರು ಪೇಟೆ ಸೂಚ್ಯಂಕ 37 ಸಾವಿರದಿಂದ 280 ಅಂಶದಷ್ಟು ಕುಸಿತ ಕಂಡಿತ್ತು. ನಿಫ್ಟಿ ಕೂಡ 50 ಅಂಶ ಇಳಿಕೆಯಾಗಿತ್ತು.

Also read: ಈ ಶಾಲೆಯಲ್ಲಿ ಹಿಂದೂ, ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ; ಹಸಿ ಮನಸ್ಸಿನ ಮಕ್ಕಳಿಗೆ ಶಿಕ್ಷಕರಿಂದಲೇ ಧರ್ಮ ಬೇಧದ ಪಾಠ..

ಭಾರತದ ರೂಪಾಯಿ ಮೌಲ್ಯ ದುರ್ಬಲಗೊಳ್ಳಲು ಪ್ರಮುಖ ಕಾರಣ ಟರ್ಕಿಯಲ್ಲಿನ ಹಣಕಾಸು ಬಿಕ್ಕಟ್ಟು ಇದರಿಂದಾಗಿ ಭಾರತದ ರೂ. 70ರ ಪಾಸಿನಲ್ಲಿ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಈ ಹಿಂದೆ ಕನಿಷ್ಠ ರೂ. 69.20ಕ್ಕೆ ಕುಸಿತವಾಗಿತ್ತು. ಆದ್ರು ಮತ್ತೆ ಸೋಮವಾರ ಡಾಲರ್‌ ಎದುರು ರೂಪಾಯಿ ಮೌಲ್ಯವು ರೂ. ಶೇ.1.57ರಷ್ಟು ಕುಸಿತ ಕಂಡಿದೆ ಇದರಿಂದ ಭಾರತದ ಆರ್ಥಿಕತೆ ಬಾರೀ ಸಂಕಷ್ಟ ಎದುರಿಸುತ್ತಿದೆ.

ಚೀನಾ ಅಮೆರಿಕಾ ಆರ್ಥಿಕ ಸಮರ ನಡೆಯಿತ್ತಿದೆ. ಹಿನ್ನೆಲೆ ಯುಎಸ್ ಡಾಲರ್‌ ಮೌಲ್ಯ ವೃದ್ಧಿಗೆ ಮುಂದಾಗಿದೆ. ಕೃತಕ ಬೇಡಿಕೆಯನ್ನು ಸೃಷ್ಟಿಸುವ ಮೂಲಕ ಇತರೆ ಕರೆನ್ಸಿಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಇದು ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆ ಇದೆ. ಈ ಪೈಪೋಟಿಯಿಂದ ಭಾರತದ ಮೇಲೆ ಹಲವಾರು ಪರಿಣಾಮಗಳು ಬಿರುತ್ತಿವೆ.

 • RBI ನ ಮಧ್ಯಪ್ರವೇಶ ದಿಂದ.
  ನಿರಂತರವಾಗಿ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿತ ಕಾಣುತ್ತಿರುವುದನ್ನು ಸರಿದೂಗಿಸಲು RBI ಮಧ್ಯಪ್ರವೇಶಿಸುವ ಸಾಧ್ಯತೆ ಇದೆ, ಇದರಿಂದ ಆರ್ಥಿಕ ನೀತಿಗಳಲ್ಲಿ ಬದಲಾವಣೆ ತಂದು ರೂಪಾಯಿ ಮೌಲ್ಯ ಕಾಯ್ದುಕೊಳ್ಳುವುದು RBI ಜವಾಬ್ದಾರಿಯಾಗಿದೆ.
 • ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ.
  ರೂಪಾಯಿ ಮೌಲ್ಯ ಕುಸಿತದಿಂದ ಪೆಟ್ರೋಲ್, ಡೀಸೆಲ್ ಮೇಲಾಗುತ್ತಿರುವ ಪರಿಣಾಮ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ. 83.58 ರಷ್ಟಾಗಿದೆ ಇದರಿಂದ ತೈಲ ದರಗಳ ಗರಿಷ್ಠ ಮಟ್ಟಕ್ಕೆ ಏರುತ್ತಿದೆ.
 • ಬಡ್ಡಿದರ ಹೆಚ್ಚಳ
  ರೂಪಾಯಿ ಕುಸಿತದ ಪರಿಣಾಮವಾಗಿ RBI ಗೆ ಹಣದುಬ್ಬರ ನಿಯಂತ್ರಿಸುವುದು ಅನಿವಾರ್ಯತೆಯಾಗಿದೆ ಅಂದರೆ ಹಣದುಬ್ಬರವನ್ನು ತಗ್ಗಿಸಲು ಬಡ್ಡಿ ದರಗಳನ್ನು ಹೆಚ್ಚಿಸಬಹುದು.
 • ಚಾಲ್ತಿ ಖಾತೆ ಕೊರತೆ
  ಚಾಲ್ತಿ ಖಾತೆ ಕೊರತೆ ಕೂಡ ತೀವ್ರವಾಗಿ ಎದುರಾಗಲಿದೆ ಕಚ್ಚಾ ತೈಲ ದರಗಳು ಏರಿಕೆಯಾಗುತ್ತಿರುವುದು ಆರ್ಥಿಕ ಬೆಳವಣಿಗೆಗೆ ತೀವ್ರ ಹಾನಿ ಉಂಟುಮಾಡಬಹುದು. 2018 ರಲ್ಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ ಕಚ್ಚಾತೈಲಗಳ ಬೆಲೆ ಪ್ರತಿ ಬ್ಯಾರೆಲ್ ಗೆ 10 ಡಾಲರ್ ಏರಿಕೆಯಾದರೆ ಆರ್ಥಿಕ ಬೆಳವಣಿಗೆಯನ್ನು ಶೇ. 0.2-0.3 ಪಾಯಿಂಟ್ ಕಡಿಮೆಗೊಳಿಸುತ್ತದೆ..