ಜ್ಯೋತಿಷ್ಯದ ಪ್ರಕಾರ ಓದುವ ಮಕ್ಕಳಿಗೆ ಈ ವರ್ಷದ ಪರೀಕ್ಷೆಯಲ್ಲಿ ಅವರು ಕಷ್ಟ ಪಟ್ಟಿದಕ್ಕೆ ಪ್ರತಿಫಲ ಸಿಗ ಬೇಕಾದರೆ ಈ ರೀತಿ ಮಾಡಿ!!

0
1026

ವಿದ್ಯಾರ್ಥಿಗಳಿಗೆ ಮಾರ್ಚ್ ಬಂದರೆ ಏನೋ ಒಂಥರ ಭಯ, ಗಾಬರಿ, ಗೊಂದಲ, ಚಡಪಡಿಕೆ ಶುರುವಾಗಿ ಬಿಡುತ್ತದೆ. ವಿದ್ಯಾರ್ಥಿಗಳಿಗೆ `ನಿಜವಾದ ಅಗ್ನಿ ಪರೀಕ್ಷೆ’ ಆರಂಭವಾಗುವುದು ಹೆಚ್ಚು-ಕಡಿಮೆ ಈ ಮಾರ್ಚ್ ತಿಂಗಳ ವಾರ್ಷಿಕ ಪರೀಕ್ಷೆಯಲ್ಲಿಯೇ. ವರ್ಷವಿಡೀ ಓದಿದ ಎಲ್ಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡು ಗೊಂದಲಕ್ಕೆ ಒಳಗಾಗದೆ ಪ್ರಶ್ನೆಪತ್ರಿಕೆಯಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆಲ್ಲಾ ಸರಿಯಾದ ಉತ್ತರವನ್ನು ಬರೆಯುವುದು ವಿದ್ಯಾರ್ಥಿಗಳ ಪಾಲಿಗೆ ಸವಾಲೆ ಆಗಿರುತ್ತದೆ. ಪರೀಕ್ಷೆಯ ಕೊನೆಕ್ಷಣದಲ್ಲಿ ಪರೀಕ್ಷೆಗೆ ತಯಾರಿ ಮಾಡಿಕೊಂಡರೂ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯುತ್ತೇನೆ ಅನ್ನೋ ವಿಶ್ವಾಸ ವಿದ್ಯಾರ್ಥಿಗಳಲ್ಲಿ ಇರಬೇಕು. ಕೆಲವೊಂದು ಸಮಯದಲ್ಲಿ ಎಷ್ಟೇ ಕಷ್ಟ ಪಟ್ಟರೂ ಫಲ ಸಿಗುವುದಿಲ್ಲ ಆಗ ಕುಸಿದು ಹೋಗುತ್ತಾರೆ, ಏನು ಮಾಡಲು ಅರಿಯದಂತಾಗಿ ಒದ್ದಾಡುತ್ತಾರೆ. ಈ ವಿಚಾರದಲ್ಲಿ ನಮಗೆ ಜ್ಯೋತಿಷ್ಯ ಶಾಸ್ತ್ರ ಬಹಳವಾಗಿ ಸಹಾಯಕ್ಕೆ ಬರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳ ಬೇಕು ಯಾಕೆಂದರೆ ನಮ್ಮ ಪಾಸಿಟಿವ್ ಥಿಂಕಿಂಗ್ ನಿಮ್ಮಲ್ಲಿ ಧೈರ್ಯವನ್ನು ತುಂಬುತ್ತದೆ. ಹೀಗೆ ವಿದ್ಯಾರ್ಥಿಗಳ ಆತ್ಮಸ್ತೈರ್ಯ ದ ಮೇಲೆ ವಿದ್ಯಾರ್ಥಿಯ ಸಕ್ಸಸ್‌ ಅನ್ನು ಲೆಕ್ಕಹಾಕಬಹುದು.

Also read: 2019 ವರ್ಷ ನಿಮ್ಮ ರಾಶಿಗೆ ಏನೇನೆಲ್ಲ ಫಲಾನುಫಲ ತರಲಿದೆ ಎಂದು ತಿಳುದುಕೊಳ್ಳಿ..!!

ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆತ್ಮಸ್ತೈರ್ಯವನ್ನು ಗುರುತಿಸೋದು ಹೇಗೆ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಆತ್ಮಸ್ತೈರ್ಯ ರವಿ. ಚಂದ್ರ, ಗುರು ಮತ್ತು ಶುಕ್ರನನ್ನು ಆಧರಿಸಿದೆ. ಹೀಗೆ ಜನ್ಮ ಲಗ್ನದಿಂದ ಪಂಚಮ ಸ್ಥಾನದ ಅಧಿಪತಿಯು ಬುಧ, ಗುರು ಅಥವಾ ಶುಕ್ರನ ಯುತಿಯಲ್ಲಿ ಕೇಂದ್ರ ತ್ರಿಕೋಣ ಅಥವಾ ಏಕಾದಶದಲ್ಲಿನ ಸ್ಥಿತಿಯಿಂದ ವಿದ್ಯಾರ್ಥಿಯ ಶಿಕ್ಷಣದಲ್ಲಿ ಆಸಕ್ತಿ ಇರುವನು ಎಂದು ಹೇಳಬಹುದು. ಕೆಲವು ಬಾರಿ ಈ ಗ್ರಹಗಳ ಮೇಲೇನಾದರೂ ಪಾಪಗ್ರಹಗಳ ದೃಷ್ಟಿ ಬೀಳುವಂತಿದ್ದರೆ ಅದರ ನಿವಾರಣೆಗೆ ಸುಲಭ ಪರಿಹಾರವನ್ನು ಮಾಡಿಕೊಳ್ಳಬಹುದು.

source: zenski.ba

ಲಗ್ನದಿಂದ ಎರಡನೇ ಮನೆಯಿಂದ (ಚಂದ್ರ) ಸಮಾನ, 5 ಮತ್ತು 7ರಿಂದ (ಶುಕ್ರ) ಮಧ್ಯಮ, 9 ಮತ್ತು 11ರಿಂದ (ಗುರು) ಉನ್ನತ ಮಟ್ಟದಲ್ಲಿ ಇದ್ದಲ್ಲಿ ಆ ವ್ಯಕ್ತಿಯ ವಿದ್ಯೆಯಲ್ಲಿನ ಏಕಾಗ್ರತೆ ಯನ್ನು ಕಂಡುಕೊಳ್ಳಬಹುದು. ಒಂದೊಮ್ಮೆ ಎರಡನೆಯ ಮನೆಯಲ್ಲಿ ಚಂದ್ರನೊಂದಿಗೆ ರಾಹು ಅಥವಾ ಕುಜನಿದ್ದರೆ, ಶುಕ್ರನೊಂದಿಗೆ ಕುಜ ಅಥವಾ ಶನಿಯಿದ್ದರೆ, ಗುರುವಿನೊಟ್ಟಿಗೆ ರಾಹು, ಕೇತು ಅಥವಾ ಶನಿಯಿದ್ದರೆ ಸ್ವಲ್ಪ ದೋಷವವಿದೆ ಎಂದು ತಿಳಿದುಬರುತ್ತದೆ. ಈ ದೋಷದ ಕಾರಣದಿಂದಲೇ ವಾರ್ಷಿಕ ಪರಿಕ್ಷೆಯಲ್ಲಿ ತೋರಿಸುವ ಧೈರ್ಯ ಮತ್ತು ಆತ್ಮವಿಶ್ವಾಸ ಕುಸಿದಂತೆ ಕಂಡುಬರುತ್ತದೆ.

ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆತ್ಮವಿಶ್ವಾಸ ದೋಷ ಪರಿಹಾರ ಮಂತ್ರಗಳ ಉಚ್ಹಾರದಿಂದ ವಿಧ್ಯಾರ್ಥಿಗಳ ಧೈರ್ಯ ಮತ್ತು ಆತ್ಮವಿಶ್ವಾಸದ ಮಟ್ಟ ಹೆಚ್ಚಾಗುವುದು. ಹೀಗೆ ಆಯಾ ಗ್ರಹಗಳಿಗೆ ಸಂಬಂಧಿಸಿದ ಮಂತ್ರಗಳನ್ನು ಹೇಳುವುದರಿಂದ ಮತ್ತು ಮಂತ್ರಬಲದಿಂದ ಒದಗಿ ಬಂದ ದೋಷ ಪರಿಹಾರ ವಾಗುತ್ತದೆ. ಅದರಲ್ಲೂ ಸರಸ್ವತಿ ಯಂತ್ರ ಪಠಣದಿಂದ ನಿಮ್ಮ ವಿದ್ಯಾಭ್ಯಾಸದ ಕಠಿಣತೆಯನ್ನು ದೂರಮಾಡಿ ಆತ್ಮವಿಶ್ವಾಸವನ್ನು ಹೆಚಿಸುತ್ತದೆ.

ಸರಸ್ವತಿ ಮಂತ್ರ ಮತ್ತು ಸರಸ್ವತಿ ಮಂತ್ರ ಪಠಣ ಸಮಯ

“ಓಂ ವಾಗೀಶ್ವರಿಯೇ ವಿದ್‌ಮಹೇ ವಗವಡಿನಾಯಾಯಿ ಧೀಮಹೇ ತನ್ನಾ ಸರಸ್ವತಿ ಪ್ರಚೋದಾಯತ್”

ಪ್ರತಿ ದಿನ ಬೆಳಗ್ಗೆ ಸರಸ್ವತಿ ಮಂತ್ರವನ್ನು ಪಠಿಸುವುದು ಒಳ್ಳೆಯದು. ಸರಸ್ವತಿ ಮಂತ್ರವನ್ನು ಪ್ರತಿ ಬಾರಿ ಬೆಳಿಗ್ಗೆ ಮತ್ತು ಸಂಜೆ ಸತತ 21 ಬಾರಿ ಪಠಿಸುವ ಮೂಲಕ ದೇವಿ ಸರಸ್ವತಿಯ ಆಶೀರ್ವಾದವನ್ನು ಪಡೆಯಲು ಈ ಮಂತ್ರ ಖಂಡಿತವಾಗಿ ಸಹಾಯ ಮಾಡುತ್ತದೆ ಅದರ ಜೊತೆ ಪರಿಕ್ಷೆಯಲ್ಲಿ ತೋರಿಸುವ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಿ ಕಂಡುಬರುವುದರಲ್ಲಿ ಯಾವುದೇ ಸಂಶಯವಿಲ್ಲ.

Also read: ಜ್ಯೋತಿಷ್ಯದ ಪ್ರಕಾರ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಯಾವ ಉದ್ಯೋಗ ಸೂಕ್ತ ನೋಡಿ..