ಮಗ ಸೊಸೆಯ ಕಿರುಕುಳ ತಾಳಲಾರದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವೃಧ್ಧರ ಕತೆ ಕೇಳಿದರೆ ಹೃದಯ ಹಿಂಡುತ್ತೆ..

0
1663

ಮಕ್ಕಳಿಗೋಸ್ಕರ ತಮ್ಮ ಜೀವನವನ್ನೇ ತೇಗಿ ಅದೇ ಮಕ್ಕಳಿಂದಲೇ ಸಾವು ತರಿಸಿಕೊಳ್ಳುವ ಪರಿಸ್ಥಿತಿ ಯಾವ ತಂದೆತಾಯಿಗಳಿಗೂ ಬರಬಾರದು. ಒಂದು ವೇಳೆ ಮಕ್ಕಳು ಇಲ್ಲದಿದ್ದರೂ ನಡೆಯುತ್ತೆ ಆದರೆ ಇಂತಹ ಮಕ್ಕಳು ಯಾರಿಗೂ ಬರಬಾರದು ಎನ್ನುವುದು ಈ ಘಟನೆಯ ನೋಡಿದ ಕೇಳಿದ ಜನರು ಆಡಿಕೊಳ್ಳುತ್ತಿದ್ದಾರೆ. ಏಕೆಂದರೆ ಮಕ್ಕಳು ನೀಡುವ ಹಿಂಸೆಯಿಂದ ಈ ವೃದ್ದರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೃದ್ದರು ಎಷ್ಟೊಂದು ಹಿಸೆಯಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದರೆ ನೋಡಿದವರಿಗೆ ಮಕ್ಕಳೇ ಬೇಡ ಎನ್ನುವ ರೀತಿಯಲ್ಲಿದೆ.

ಹೌದು ಮನೆಯ ಗೋಡೆ ಮೇಲೆ ಡೆತ್ ನೋಟ್ ಬರೆದಿಟ್ಟು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. ಎನ್ನುವ ಸುದ್ದಿ ಇಲ್ಲದೆ ಹರಡಿತ್ತು ಆದರೆ ಈ ಪ್ರಕರಣ ಎಷ್ಟೊಂದು ಹಿನವಾಗಿದೆ ಎಂದರೆ ಈ ಪರಿಸ್ಥಿತಿ ಯಾರಿಗೂ ಬರಬಾರದು ಎನ್ನುವಂತಿದೆ. ಹೌದು ಮಗ ಮತ್ತು ಸೊಸೆಯಿಂದ ಕಿರುಕುಳ, ಹಿಂಸೆಯನ್ನು ತಾಳಲಾರದೆ ಈ ಕ್ರಮ ತೆಗೆದುಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಬಿಇಎಲ್ ಮಾಜಿ ನೌಕರ 70 ವರ್ಷದ ಕೃಷ್ಣಮೂರ್ತಿ ಮತ್ತು ಅವರ ಪತ್ನಿ 68 ವರ್ಷದ ಸ್ವರ್ಣ ಎಂದು ಗುರುತಿಸಲಾಗಿದ್ದು ಗಿರಿನಗರ ಮುಖ್ಯ ರಸ್ತೆಯ ನಿವಾಸಿಗಳಾಗಿದ್ದರು. ಸ್ವರ್ಣ ವಿಷ ಸೇವಿ ಆತ್ಮಹತ್ಯೆ ಮಾಡಿಕೊಂಡರೆ ಕೃಷ್ಣಮೂರ್ತಿ ವಿಷ ಸೇವಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಮಗ ಮತ್ತು ಸೊಸೆ ವೈಟ್ ಫೀಲ್ಡ್ ನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಮೊನ್ನ ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕಾಲಿಂಗ್ ಬೆಲ್ ಒತ್ತಿದರೆ ವೃದ್ಧ ದಂಪತಿ ಬಾಗಿಲು ತೆಗೆಯಲಿಲ್ಲ, ಬಾಗಿಲು ಬಡಿದರೂ ಪ್ರತಿಕ್ರಿಯೆ ಬರಲಿಲ್ಲ. ಆಗ ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಸಾಯುವುದಕ್ಕೆ ಮೊದಲು ಕೃಷ್ಣಮೂರ್ತಿ ಗೋಡೆಯಲ್ಲಿ ಡೆತ್ ನೋಟ್ ಬರೆದು ಅಂಟಿಸಿದ್ದರು. ಅದರಲ್ಲಿ ನಮ್ಮ ಸಾವಿಗೆ ಮಗ ಮತ್ತು ಸೊಸೆಯ ಕಿರುಕುಳವೇ ಕಾರಣ, ನಾವು ತೀವ್ರ ನೊಂದು ಹೋಗಿದ್ದೇವೆ ಎಂದು ಬರೆದಿದ್ದರು. ಸ್ವರ್ಣ ಸ್ಪೈನಲ್ ಕಾರ್ಡ್ ನೋವಿನಿಂದ ಬಳಲುತ್ತಿದ್ದು ಸಂಪೂರ್ಣ ಹಾಸಿಗೆ ಹಿಡಿದಿದ್ದರು. ಮನೆಯಲ್ಲಿ ಮಂಜುನಾಥ್, ಮತ್ತು ಶ್ರೇಯಸ್ ಮತ್ತು ಸೊಸೆ ತಮಗೆ ದೈಹಿಕವಾಗಿ, ಮಾನಸಿಕವಾಗಿ ಬಹಳಷ್ಟು ಹಿಂಸೆ ನೀಡಿದರು. ನಾವು ನರಕದಿಂದ ಸ್ವರ್ಗಕ್ಕೆ ಹೋಗುತ್ತಿದ್ದೇವೆ ಎಂದು ಗೋಡೆಯಲ್ಲಿ ಬರೆದಿಟ್ಟು ಇಬ್ಬರು ವಿಷ ಕುಡಿದಿದ್ದಾರೆ. ಅದರಲ್ಲಿ ಕೃಷ್ಣಮೂರ್ತಿಯವರು ನೇಣು ಹಾಕಿಕೊಂಡು ಸಾವನ್ನಪ್ಪಿದರೆ ವೃದ್ದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಕೆಲಸಕ್ಕೆ ಮಹಿಳೆಯರು ಬರುತ್ತಿದ್ದರೂ ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಪದೇ ಪದೇ ಕೆಲಸದಿಂದ ತೆಗೆದುಹಾಕುತ್ತಿದ್ದರು. ಕೃಷ್ಣಮೂರ್ತಿಯವರೇ ಪತ್ನಿಯನ್ನು ನೋಡಿಕೊಳ್ಳುತ್ತಿದ್ದರು. ಈ ದಂಪತಿಯ ಮಗಳು ನಾಗರಬಾವಿಯಿಂದ ಪ್ರತಿದಿನ ಸಂಜೆ ಬಂದು ನೋಡಿಕೊಂಡು ಹೋಗುತ್ತಿದ್ದರು. ದಂಪತಿ ಆತ್ಮಹತ್ಯೆಗೆ ಮುನ್ನ ಪದೇ ಪದೇ ಮಗ-ಸೊಸೆಯ ಜತೆ ಜಗಳವಾಗುತ್ತಿತ್ತು, ತಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ ಎಂಬ ಭಯ ಈ ದಂಪತಿಗಿತ್ತು. ಇದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈಕ್ ಕುರಿತು ಪ್ರತಿಕ್ರಿಯೆ ನೀಡಿದ ಮೃತರ ಮಗಳು ತಮ್ಮ ಸೋದರ ತಂದೆ -ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ದಂಪತಿಯ ಮಗಳು ವೈರುಧ್ಯ ಹೇಳಿಕೆ ನೀಡಿದ್ದಾರೆ. ಆದರೆ ಯಾವ ತಂದೆ ತಾಯಿಗಳಿಗೂ ಈ ಪರಿಸ್ಥಿತಿ ಬರಬಾರದು ಎನ್ನುವುದು ಪ್ರತಿಯೊಬ್ಬ ಮಕ್ಕಳ ಜವಾಬ್ದಾರಿಯಾಗಿದೆ.