ಸುಮಲತಾ ಅಂಬರೀಶ್ ಅವರಿಗೆ ಯೋಧ ಹಾಕಿದ್ದ ಮೊದಲ ಮತವನ್ನು ಅಸಿಂಧುಗೊಳಿಸಿದ ಕೇಂದ್ರ ಚುನಾವಣಾ ಆಯೋಗ ಇದರಲ್ಲಿ ಪ್ರತಿಪಕ್ಷದ ಕೈವಾಡ ವಿದೆಯೇ??

0
466

ಮಂಡ್ಯದಲ್ಲಿ ಚುನಾವಣೆ ಸದ್ದೆ ಬೇರೆಯಾಗಿದ್ದು ಪಲಿತಾಂಶಕ್ಕಾಗಿ ಕಾದು ಕುಳಿತ್ತಿದ್ದ ಜನರಿಗೆ ನಿರಾಶೆ ಒಂದು ಮೂಡಿದೆ ಅದರಲ್ಲಿ ಸುಮಲತಾ ಅವರ ಬೆಂಬಲಿಗರಿಗೆ ಬೇಸರ ತರುವ ಸುದ್ದಿಯೊಂದು ಹರಿದಾಡುತ್ತಿದೆ. ಚುನಾವಣೆ ಮೊದಲು ಸುಮಲತಾ ಅಂಬರೀಷ್ ಗೆ ಹಾಕಿದ್ದ ಮೊದಲ ಅಂಚೆ ಮತವನ್ನು ಕೇಂದ್ರ ಚುನಾವಣಾ ಆಯೋಗ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ.

Also read: ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ, ಸಿ.ಎಂ. ವಿಶ್ರಾಂತಿಗಾಗಿ ದುಬಾರಿ ರೆಸಾರ್ಟ್-ನಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿರುವುದು ನೈತಿಕತೆಯೇ??

ಸುಮಲತಾಗೆ ಬಂದ ಮೊದಲ ಮತ ಅಸಿಂಧು?

ಹೌದು ಸಿಆರ್ ಪಿಎಫ್ ಸೇನೆಯ ಯೋಧ ರಾಜನಾಯಕ ಎಂಬುವವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸುಮಲತಾ ಅಂಬರೀಷ್ ಗೆ ವೋಟ್ ಮಾಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಅದನ್ನು ಸುಮಲತಾ ಅಂಬರೀಷ್‌ ಕೂಡ ತಮ್ಮ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮತದಾನದ ಗೌಪ್ಯತೆ ವಿಷಯವಾಗಿ ಚರ್ಚೆಗಳು ನಡೆದಿದ್ದು. ಈ ಹಿನ್ನೆಲೆಯಲ್ಲಿ ಮತದಾನದ ಗೌಪ್ಯತೆ ಹಾಳುಮಾಡಿದ್ದಕ್ಕೆ ಯೋಧನ ಮತವನ್ನು ಚುನಾವಣಾ ಆಯೋಗ ಅಸಿಂಧುಗೊಳಿದೆ.

ಪೋಸ್ಟ್‌ನಲ್ಲಿ ಏನಿತ್ತು?

ಯುಗಾದಿ ಹಬ್ಬದ ದಿನ ನಿಮ್ಮ ಸಿಆರ್‌ಪಿಎಫ್‌ ಯೋಧನಿಂದ ಸುಮಲತಾ ಅಂಬರೀಶ್ ಮೇಡಂ ಅವರಿಗೆ ಮೊದಲನೇ ವೋಟ್ ಹಾಕುವುದರ ಮೂಲಕ ಅವರಿಗೆ ಒಳ್ಳೆದಾಗಲಿ. ಲೀಡಿಂಗ್‍ನಿಂದ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇದೆ. ನಮ್ಮ ಮಂಡ್ಯ ತುಂಬಾ ಅಭಿವೃದ್ಧಿ ಹೊಂದಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದು ನಿಲ್ಲಬೇಕು. ನಮ್ಮ ರೈತರು ಕಷ್ಟದಿಂದ ಹೊರಗೆ ಬರಬೇಕು. ನಮ್ಮಂತ ಯೋಧರ ಕುಟುಂಬಕ್ಕೆ ಒಳ್ಳೆದಾಗಬೇಕು. ಈ ಹಿಂದೆ ನಮ್ಮ ಅಂಬರೀಶ್ ಅಣ್ಣ ಮಂಡ್ಯಕ್ಕೆ ಎಷ್ಟೋ ಕೊಡುಗೆ ನೀಡಿದ್ದಾರೆ. ಅವರ ಪ್ರೀತಿ ನಿಮ್ಮಲ್ಲಿದೆ ದಯವಿಟ್ಟು ಎಲ್ಲರು ಸುಮಲತಾ ಅವರಿಗೆ ಸಪೋರ್ಟ್ ಮಾಡಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದರು. ಜೊತೆಗೆ ತಾವು ಮತ ಮಾಡಿದ್ದ ಫೋಟೋ ಪೋಸ್ಟ್ ಮಾಡಿದ್ದರು.

ಇದಕ್ಕೆ ಪ್ರತಿಪಕ್ಷದಲ್ಲಿ ವಿರೋಧ ವ್ಯಕ್ತವಾಗಿ ಗೌಪ್ಯತೆ ಕಾಪಾಡದೆ ಯೋಧರೊಬ್ಬರು ಮತ ಚಲಾಯಿಸಿರುವ ಬಗ್ಗೆ ಸಹಾಯಕ ಚುನಾವಣಾಧಿಕಾರಿ ಅವರಿಂದ ವರದಿ ಕೇಳಲಾಗಿತ್ತು. ಅವರು ನೀಡುವ ವರದಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿ ಆಯೋಗದ ನಿರ್ದೇಶನದಂತೆ ಮುಂದಿನ ಕ್ರಮ ವಹಿಸಲಾಗುವುದು. ಎಂದು ಹೇಳಿದರು. ಈ ಸಂಬಂಧ ಮತದಾನದ ಗೌಪ್ಯತೆ ಮತದಾನವನ್ನು ಮರೆತು ಹಕ್ಕಿನ ದುರ್ಬಳಕೆ ಬಹಿರಂಗಗೊಳಿಸದ್ದಕ್ಕೆ ಯೋಧನ ವಿರುದ್ಧ ದೂರು ದಾಖಲಾಗಿತ್ತು.

ಇದಕ್ಕೆ ಸಂಬಂಧಪಟ್ಟಂತೆ ಮಂಡ್ಯ ಮೂಲದ ವಕೀಲರಾದ ಕಿರಣ್‌ ಅವರು ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದರು, ದೂರನ್ನು ಪರೀಶಿಲನೆ ನಡೆಸಿದ ಆಯೋಗ ಮತದಾನದ ಗೌಪ್ಯತೆಯನ್ನು ಉಲ್ಲಂಘನೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಆಯೋಗಕ್ಕೆ ಮೇ 23ರಂದು ನಡೆಯುವ ಮತ ಏಣಿಕೆ ವೇಳೆಯಲ್ಲಿ ಯೋಧ ರಾಜನಾಯಕ ಅವರ ಪೊಸ್ಟಲ್‌ ಮತವನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಆದೇಶ ಹೊರಡಿಸಿದೆ.

ಸುಮಲತಾ ಗೆಲ್ಲುವ ನಿರೀಕ್ಷೆಯಲ್ಲಿ ಮಂಡ್ಯ;

ಮಂಡ್ಯದಲ್ಲಿ ಈಗಾಗಲೇ ಹಲವು ಸಮೀಕ್ಷೆಗಳು ನಡೆದಿದ್ದು ಸುಮಲತಾ ಅವರು ಬಾರಿ ಅಂತರದಿಂದ ಗೆಲ್ಲುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹಾಗೆಯೆ ಸುಮಲತಾ ಕೇಂದ್ರದಿಂದ ಸಚಿವಸ್ಥಾನ ಸಿಗುವ ಭಾಗ್ಯವು ಇದೆ ಎನ್ನುವ ಸುದ್ದಿಗಳು ಹಲವು ಮೂಲಗಳಿಂದ ತಿಳಿದಿವೆ. ಪ್ರತಿಪಕ್ಷದ ಸ್ಪರ್ಧಿ ನಿಖಿಲ್ ಕೂಡ ಗೆಲುವಿನ ನಿರೀಕ್ಷೆಯಲ್ಲಿದ್ದು ಇದಕ್ಕಾಗಿ ಕುಮಾರಸ್ವಾಮಿ ಎರಡು ಸಮೀಕ್ಷೆ ನಡೆಸಿದ್ದಾರೆ. ಅದರಲ್ಲಿ ಕಡಿಮೆ ಅಂತರದಿಂದ ನಿಖಿಲ್ ಗೆಲ್ಲುತ್ತಾರೆ ಎನ್ನುವ ಬಗ್ಗೆ ಸಮೀಕ್ಷೆಯಿಂದ ತಿಳಿದಿದೆ. ಇದೆ ತಿಂಗಳ 23 ರಂದು ಮಂಡ್ಯದ ಹಣೆ ಬರಹ ಯಾರ ಕೈಯಲ್ಲಿದೆ ಎನ್ನುವುದು ಕಾದುನೋಡಬೇಕಿದೆ.

Also read: ರೈತರಿಗೆ ಸಿಹಿಸುದ್ದಿ; ಲೋಕಸಭೆ ಚುನಾವಣೆ ಪಲಿತಾಂಶದ ನಂತರ ಸಾಲಮನ್ನಾ ಮೊತ್ತ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸಿಎಂ ಆದೇಶ..