ಮತದಾನ ಮಾಡೋ ವೇಳೆ ನಿಮ್ಮ ಬಳಿ ವೋಟರ್ ಐ.ಡಿ. ಕಾರ್ಡ್ ಇರದೇ ಇದ್ದರೂ, ಇಲ್ಲಿ ಹೇಳಿರುವ ಗುರುತಿನ ಚೀಟಿಯನ್ನು ತೋರಿಸಿ ನಿಮ್ಮ ಮತ ಚಲಾಯಿಸಬಹುದು!!

0
896

ಈ ಬಾರಿ ಲೋಕಸಭಾ ಚುನಾವಣೆಗೆ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು ಮತದಾರರಿಗೆ ಅನುಕೂಲವಾಗುವಂತೆ ನಿಯಮಗಳನ್ನು ತಂದಿದೆ. ಈ ಹಿಂದೆ ಚುನಾವಣೆ ಆಯೋಗ ನೀಡಿದ ವೋಟರ್ ಐಡಿ ಇಲ್ಲದಿದ್ದರೆ ಅಥವಾ ಕಳೆದು ಹೋದರೆ ಮತದಾನ ಮಾಡಲು ಅವಕಾಶಗಳು ಇರುತ್ತಿರಲಿಲ್ಲ. ಆದರೆ ಹೊಸ ನೀತಿಯಿಂದ ವೋಟರ್ ಐಡಿ ಇಲ್ಲದಿದ್ದರೂ ಮತದಾನ ಮಾಡಬಹುದು. ಅದು ಹೇಗೆ ಎಂದರೆ ಇಲ್ಲಿದೆ ನೋಡಿ ಮಾಹಿತಿ.

Also read: ಪಿಎಂ ನರೇಂದ್ರ ಮೋದಿ’ ಬಯೋಪಿಕ್​ ಸಿನಮಾ ಬ್ಯಾನ್​; ಚುನಾವಣೆ ಮುಗಿಯುವವರೆಗೂ ಮೋದಿ ಚಿತ್ರ ಬಿಡುಗಡೆ ಭಾಗ್ಯ ಇಲ್ಲ..

ಹೌದು ಗುರುತಿನ ಚೀಟಿಯಲ್ಲಿರುವ ಹೆಸರು, ಭಾವಚಿತ್ರ ಮತ್ತು ವೋಟರ್​ ಪಟ್ಟಿಯಲ್ಲಿರುವ ಹೆಸರಿಗೂ ಹೊಂದಿಕೆಯಾದರೆ ಮತದಾನ ಮಾಡಬಹುದು. ಈ ಬಾರಿ ಮತದಾನ ಮಾಡಲು ನಿಮ್ಮ ಬಳಿ ವೋಟರ್​ ಐಡಿ ಇರಬೇಕಿಲ್ಲ ಪ್ರತೀ ಬಾರಿ ಮತದಾರ ಮತಗಟ್ಟೆಯ ಅಧಿಕಾರಿಗೆ ತನ್ನ ವೋಟರ್​ ಐಡಿ ತೋರಿಸಬೇಕಿತ್ತು. ಅದಾದ ನಂತರ ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ಎಂಬುದನ್ನು ನೋಡಿದ ನಂತರ ಚುನಾವಣಾಧಿಕಾರಿ ಮತಹಾಕಲು ಅನುಮತಿ ನೀಡುತ್ತಿದ್ದರು. ಆದರೆ ಈ ಬಾರಿ ವೋಟರ್​ ಐಡಿ ಇಲ್ಲದಿದ್ದರೂ ನೀವು ಮತಹಾಕಬಹುದು.

ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಸುನೀಲ್​ ಅರೋರಾ ಪತ್ರಿಕಾಗೋಷ್ಠಿ ನಡೆಸಿ ಚುನಾವಣಾ ಹೊಸ ನೀತಿಯ ಬಗ್ಗೆ ತಿಳಿಸಿದ ನಂತರ ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯುಕ್ತ ಸಂಜೀವ್​ ಕುಮಾರ್​ ಮಾಧ್ಯಮಗೋಷ್ಠಿಯಲ್ಲಿ ಚುನಾವಣೆಯ ರೂಪುರೇಷೆಗಳ ಬಗ್ಗೆ ಮಾತನಾಡಿದ ಸಂಜೀವ್​ ಕುಮಾರ್​ ಈ ಬಾರಿ ಮತದಾನದ ವೇಳೆ ವೋಟರ್​ ಐಡಿ ತೋರಿಸುವುದು ಕಡ್ಡಾಯವಲ್ಲ ಎಂಬ ಮಾಹಿತಿ ನೀಡಿದ್ದಾರೆ. ಅದರಂತೆ ಮತದಾರರ ಹೆಸರು ಇದ್ದರೆ ಸಾಕು ಅದಕ್ಕೆ ನಿಮ್ಮ ಬಳಿ ಇರುವ ಯಾವುದಾದರೂ ಗುರುತಿನ ಚಿಟಿ ಅಂದರೆ ಪಾಸ್ ಪೋರ್ಟ್, ಚಾಲನಾ ಪರವಾನಗಿ, ಕೇಂದ್ರ ರಾಜ್ಯ ಪಿಎಸ್‍ಯು ನೌಕರರಾಗಿದ್ದರೆ ಸರ್ಕಾರ ಕೊಟ್ಟಿರುವ ಫೋಟೋ ಸಹಿತ ಗುರುತಿನ ಚೀಟಿ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನೀಡಿರುವ ಸ್ಮಾರ್ಟ್ ಕಾರ್ಡ್, ಬ್ಯಾಂಕ್, ಪೋಸ್ಟ್ ಆಫೀಸ್ ಫೋಟೋವುಳ್ಳ ಪಾಸ್ ಬುಕ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ತರಹದ ಗುರುತಿನ ಚಿಟಿ ತೋರಿಸಿ ಮತಹಾಕಬಹುದು. ಗುರುತಿನ ಚೀಟಿಯಲ್ಲಿರುವ ಹೆಸರು, ಭಾವಚಿತ್ರ ಮತ್ತು ವೋಟರ್​ ಪಟ್ಟಿಯಲ್ಲಿರುವ ಹೆಸರಿಗೂ ಹೊಂದಿಕೆಯಾದರೆ ಮತದಾನ ಮಾಡಬಹುದು. ಎಂದು ತಿಳಿಸಿದ್ದಾರೆ. ಇದರಿಂದ ಇಷ್ಟುದಿನ ವೋಟರ್​ ಐಡಿ ಕಳುವಾದರೆ ಅಥವಾ ತರುವುದನ್ನು ಮರೆತಿದ್ದರೆ ಮತದಾನ ಮಾಡಲು ಆಗುತ್ತಿರಲಿಲ್ಲ. ಆದರೀಗ ಚುನಾವಣಾ ಆಯೋಗದ ಹೊಸ ನೀತಿಯಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಹಾಗಾದ್ರೆ ಯಾವೆಲ್ಲ ಗುರುತಿನ ತೋರಿಸಿ ಮತದಾನ ಮಾಡಬಹುದು?

ಸಂಧರ್ಬಿಕ ಚಿತ್ರ

Also read: ಲೋಕಸಭಾ ಚುನಾವಣೆಗೆ ಕರ್ನಾಟಕದ 28 ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವಿದ್ಯಾರ್ಹತೆ ಏನು ಗೊತ್ತಾ??

ಮತದಾನಕ್ಕೆ ಬೇಕಾದ ಗುರುತಿನ ಚಿಟಿಗಳು;

1. ಪ್ಯಾನ್​ ಕಾರ್ಡ್​
2. ಆಧಾರ್​ ಕಾರ್ಡ್​
3. ಪಾಸ್​ಪೋರ್ಟ್
4. ಎಸ್​ಎಸ್​ಎಲ್​ಸಿ ಮಾರ್ಕ್ಸ್​ ಕಾರ್ಡ್​
5. ರೇಷನ್​ ಕಾರ್ಡ್​ ಡ್ರೈವಿಂಗ್​ ಲೈಸೆನ್ಸ್​
6. ಬ್ಯಾಂಕ್, ಪೋಸ್ಟ್ ಆಫೀಸ್ ಫೋಟೋವುಳ್ಳ ಪಾಸ್ ಬುಕ್,
7. ನರೇಗಾ ಜಾಬ್ ಕಾರ್ಡ್
8. ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
9. ಫೋಟೋವುಳ್ಳ ಪಿಂಚಣಿ ದಾಖಲೆ
10. ಕೇಂದ್ರ ರಾಜ್ಯ ಪಿಎಸ್‍ಯು ನೌಕರರಾಗಿದ್ದರೆ ಸರ್ಕಾರ ಕೊಟ್ಟಿರುವ ಫೋಟೋ ಸಹಿತ ಗುರುತಿನ ಚೀಟಿ
11. ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನೀಡಿರುವ ಸ್ಮಾರ್ಟ್ ಕಾರ್ಡ್
12. ಅಧಿಕೃತ ಫೋಟೋ ಸ್ಲಿಪ್
13. ಕಾರ್ಮಿಕ ಇಲಾಖೆಯಿಂದ ನೀಡಿದ ಹೆಲ್ತ್​ ಇನ್ಶೂರೆನ್ಸ್​ ಕಾರ್ಡ್​