ಬೆಂಗಳೂರಿನ ಯಾವುದೇ ರಸ್ತೆಯಲ್ಲಿ ಇನ್ಮುಂದೆ ರಸ್ತೆ ಗುಂಡಿ ಕಾಣಿಸಿಕೊಂಡರೆ ಗುಂಡಿಗೆ ಸಾವಿರದಂತೆ ಇಂಜಿನಿಯರ್‌ಗೆ ಬಿಳ್ಳಲಿದೆ ದಂಡ.!

0
368

ಬೆಂಗಳೂರಿನ ರಸ್ತೆ ಗುಂಡಿಯಿಂದ ಪ್ರತಿನಿತ್ಯವೂ ಅಪಘಾತಗಳು ಆಗುತ್ತಲೇ ಇವೆ. ಇದಕ್ಕೆ ಹೈಕೋರ್ಟ್‌ ಆದೇಶವನ್ನು ನೀಡಿದರು ಇನ್ನೂ ರಸ್ತೆ ಗುಂಡಿ ಮುಚ್ಚುವ ಲಕ್ಷಣ ಕಾಣುತ್ತಿಲ್ಲ, BBMP ಲೆಕ್ಕದಲ್ಲಿ ಪ್ರನಿತ್ಯವೂ ಗುಂಡಿ ಮುಚ್ಚಲಾಗುತ್ತಿದೆ. ಆದರೆ ಒಂದು ಕಿಮೀ ರಸ್ತೆಯಲ್ಲಿ ಕನಿಷ್ಠ 5 ರಿಂದ 10 ಗುಂಡಿಗಳು ಕಾಣುತ್ತಿವೆ, ಮಳೆಗಾಲದಲ್ಲಿ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆದರು BBMP ಪ್ರತಿನಿತ್ಯ ಒಂದು ಹೇಳಿಕೆಯನ್ನು ನೀಡುತ್ತಿದ್ದು, ಕೆಲಸವನ್ನು ಮಾಡುತ್ತಿಲ್ಲ ಎನ್ನುವುದು ಸಾರ್ವಜನಿಕರ ಮಾತಾಗಿದೆ. ಅದರಂತೆ ಬಿಬಿಎಂಪಿ ಹೊಸ ಆದೇಶವನ್ನು ಹೊರಡಿಸಿದ್ದು. ಅವೈಜ್ಞಾನಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿದರೆ ಪ್ರತಿ ಗುಂಡಿಗೆ ಇಂಜಿನಿಯರ್‌ಗಳಿಗೆ 1 ಸಾವಿರ ರೂ. ದಂಡ ವಿಧಿಸಲಾಗುತ್ತೆ ಎಂದು ಹೇಳುತ್ತಿದ್ದೆ.

Also read: ಬೆಂಗಳೂರಿನ ವಾಹನ ಅಪಘಾತಗಳಿಗೆ ರಸ್ತೆ ಗುಂಡಿಗಳು ಮಾತ್ರ ಕಾರಣವಲ್ಲ, ಮ್ಯಾನ್‌ಹೋಲ್ ಗುಂಡಿಗಳು ಕೂಡ ಮುಖ್ಯ ಕಾರಣವಂತೆ..

ರಸ್ತೆ ಗುಂಡಿ ಕಂಡರೆ ಇಂಜಿನಿಯರ್‌ಗಳಿಗೆ ದಂಡ?

ಹೌದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಇಂಜಿನಿಯರ್‌ಗಳಿಗೆ ಶಾಕ್ ನೀಡಿದ್ದು, ಒಂದುವೇಳೆ ಅವೈಜ್ಞಾನಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿದರೆ ಪ್ರತಿ ಗುಂಡಿಗೆ ಇಂಜಿನಿಯರ್‌ಗಳಿಗೆ 1 ಸಾವಿರ ರೂ. ದಂಡ ವಿಧಿಸಲು ಬಿಬಿಎಂಪಿ ನಿರ್ಧಾರ ಕೈಗೊಂಡಿದೆ. ಈ ಕುರಿತು ಬಿಬಿಎಂಪಿ ಮೇಯರ್ ಗಂಗಾಂಬಿಕೆ ವಲಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪ್ರತಿ ವಾರ್ಡ್ ಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗಳ ಪಟ್ಟಿ ಮಾಡಬೇಕು. ವಾರ್ಡ್ ಮಟ್ಟದಲ್ಲಿನ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ ವಾರ್ಡ್ ನಲ್ಲಿ ಪ್ರಮುಖವಾಗಿ ಕಂಡುಬರುವ ರಸ್ತೆ ಗುಂಡಿ, ಬೀದಿ ದೀಪ, ಕಸದ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ನೀಡಬೇಕು ಎಂದು ಸೂಚಿಸಿದ್ದಾರೆ.
ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಕಳೆದ ವಾರದಿಂದ ಪ್ರತಿದಿನ ಮಳೆಯಾಗುತ್ತಿದೆ. ಸರಿಯಾಗಿ ಮುಚ್ಚದ ರಸ್ತೆಗುಂಡಿಗಳು ಬಾಯಿ ತರೆದು ನಿಂತಿವೆ. ಯಾವುದೇ ವಾರ್ಡ್‌ನಲ್ಲಿ ರಸ್ತೆಗುಂಡಿಗಳಿದ್ದರೆ ಇಂಜಿನಿಯರ್‌ಗೆ 1000 ರೂ. ದಂಡ ಹಾಕಲಾಗುತ್ತದೆ. ಎಲ್ಲಾ ವಾರ್ಡ್‌ಗಳು ರಸ್ತೆಗುಂಡಿ ಮುಕ್ತವಾಗಿರಬೇಕು ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ಸೂಚನೆ ಕೊಟ್ಟಿದ್ದಾರೆ. ಅವೈಜ್ಞಾನಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿ, ಅವು ಮಳೆಗೆ ಬಾಯಿ ತೆರೆದು ಕೂತಿದ್ದರೆ ಎಇಇಗಳನ್ನು ಹೊಣೆ ಮಾಡಲು ತೀರ್ಮಾನಿಸಲಾಗಿದೆ. ಎಂದು ಹೇಳಿದ ಬಿಬಿಎಂಪಿ ಮೇಯರ್ ಗಂಗಾಬಿಕೆ ಅವರು ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ.

Also read: ಇನ್ಮುಂದೆ ರಸ್ತೆ ಗುಂಡಿ ಅಪಘಾತ ಸಂತ್ರಸ್ತರಿಗೆ ಬಿಬಿಎಂಪಿ ಪರಿಹಾರ ಕೊಡಬೇಕು; ಹೈ ಕೋರ್ಟ್ ಮಹತ್ವದ ತೀರ್ಪು.!!

ರಸ್ತೆಯಲ್ಲಿ ಗುಂಡಿಗಳಿದ್ದರೆ ಅದನ್ನು ಮುಚ್ಚಿಸಲು ಖಡಕ್ ಸೂಚನೆ ನೀಡುತ್ತಿದ್ದಾರೆ. ಮುಖ್ಯ ಇಂಜಿನಿಯರ್‌ಗಳು ಎಲ್ಲಾ ವಾರ್ಡ್‌ಗಳಲ್ಲಿಯೂ ರಸ್ತೆ ಗುಂಡಿಯ ಬಗ್ಗೆ ಗಮನ ಹರಿಸಿ ಎಂದು ಎಇಇಗಳಿಗೆ ತಿಳಿಸಿದ್ದಾರೆ. ವಾರ್ಡ್‌ಗಳಲ್ಲಿರುವ ಸಮಸ್ಯೆಗಳ ಪಟ್ಟಿಯನ್ನುಎಇಇಗಳು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು. ಇನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಪ್ರತಿ ಇಂಜಿನಿಯರ್‌ಗಳ ಜವಾಬ್ದಾರಿಯಾಗಿದ್ದು, ಸೇವೆಯಲ್ಲಿ ಲೋಪಗಳು ಕಂಡು ಬಂದರೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಅಮಾನತು ಮಾಡಲಾಗುತ್ತದೆ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್ ಎಂ.ಆರ್. ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.