ಈಸಬೇಕು ಇದ್ದು ಜೈಸಬೇಕು

0
856

ಕನ್ನಡದ ಗಾದೆಗಳು ಜೀವನಕ್ಕೆ, ಸಂಸಾರಕ್ಕೆ ಸಂಬಂಧಿಸಿದ ಅದೆಷ್ಟೋ ಸಂಗಾತಿಗಳನ್ನು ಬಲು ಸ್ವಾರಸ್ಯವಾಗಿಯೂ, ಮನಸ್ಸಿಗೆ ನಾಟುವಂತೆಯೂ ಹೇಳುತವೆ. ಈಸಬೇಕು ಇದ್ದು ಜೈಸಬೇಕು ಎಂದು ಸುಲಭವಾಗಿ ಹೇಳುವುದಕ್ಕೆ ಗಾದೆಗಷ್ಟೇ ಸಾಧ್ಯವಾಗಿದೆ. ಸಂಸಾರ ದುಃಖಮಯ ಎಂದೋ ವ್ಯಾಮೋಹಕ್ಕೆ ಒಳಗಾಗಿ ಲಾಭನಷ್ಟಗಳ ಚಿಂತನೆಯಲ್ಲಿ ಕಳೆದೋ ವ್ಯಕ್ತಿ ಕ್ಷಣಕಾಲ ಈ ಪದರಪಮಚವನ್ನು ತೊರೆದು ಬಿಡಲೇ ಎಂದು ಯೋಚಿಸಿರಲು ಸಾಕು. ಆದರೆ ಬಿಟ್ಟೋಡುವುದೇ ಎಲ್ಲದಕ್ಕೂ ಪರಿಹಾರವಲ್ಲ, ಸಾಹಸ ಪಡಬೇಕು. ಸಾಮರ್ಥ್ಯದಿಂದ ಕಷ್ಟ ನಷ್ಟಗಳನ್ನೆದುರಿಸಬೇಕು. ಇವೆಲ್ಲ ಕುಡಿಯುವ ಪಾನಕದಲ್ಲಿ ಕಡ್ಡಿ ಸಿಕ್ಕಿದ ಹಾಗೆ. ಕಡ್ಡಿ ಆ ಕಡೆ ಎಸೆದು ಕುಡಿಯಬೇಕೇ ವಿನಃ ಪಾನಕ ಬೇಡ ಎಂದರಚಲಾಗದು.

ಯಾವಗಲೂ ಕಷ್ಟಗಳೇ ಇರುವುದಿಲ್ಲ, ಯಾವಾಗಲೂ ಸುಖವೇ ಇರುವುದಿಲ್ಲ, ಎರಡರ ಸಮ್ಮಿಲನವೇ ಜೀವನ. ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ಎಂದಿರುವಂತೆ ಸಂತೋಷವೋ ದುಃಖವೋ ಎರಡು ಅನುಭವಿಸುವಂಥದೇ. ಎಲ್ಲವೂ ದೈವ ಸಂಕಲ್ಪವೇ. ಶಿವನ ಗುಟ್ಟು ಶಿವನೇ ಬಲ್ಲ ಎಂದು ಹೇಳಿರುವಂತೆ ನಾವು ಜಗನ್ನಾಟಕ ಸೂತ್ರಧಾರಿಯ ಕೈಯ್ಯಲ್ಲಾಡುವ ಗೊಂಬೆಗಳು ಈ ಜೀವನ ಸೋಲು ಗೆಲುವುಗಳ ಸಂಗಮವಾಗಿದೆ.