ಪ್ರತಿ ಅಪ್ಪ ಅಮ್ಮ ಕಲಿಯಲೇ ಬೇಕಾದ ಪಾಠವಿದು..!!

0
2252

Kannada News | kannada Useful Tips

ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಎಲ್ಲಾ ತಂದೆ ತಾಯಂದಿರಿಗೆ ಪಾಠವಾಗಿದೆ..

ಮೂಲತಃ ಮೈಸೂರಿನ ಮಂಜುನಾಥ್ ದಂಪತಿಗಳು ತಮ್ಮ ಒಂದುವರೆ ವರ್ಷದ ಮಗುವಿನೊಂದಿಗೆ  ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದಾರೆ..ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ್ ಎಂದಿನಂತೆ ಆಫೀಸ್ ಗೆ ತೆರಳಿದ್ದಾರೆ..

ಆನಂತರ ಧನ್ಯಾರವರು ಮನೆಕೆಲಸ ಮುಗಿಸಿ ಮಗುವನ್ನು ಮಲಗಿಸಿ ಸ್ನಾನಕ್ಕೆ ತೆರಳಿದ್ದಾರೆ.. ಇದೇ ಸಮಯದಲ್ಲಿ ಎಚ್ಚರವಾದ ಮಗು ಆಟವಾಡುತ್ತಾ ಬಾತ್ ರೂಮ್ ಬಳಿ ಬಂದು ಡೋರ್ ಲಾಕ್ ಮಾಡಿಬಿಟ್ಟಿದ್ದೆ.. ವಾಪಸ್ ಲಾಕ್ ತೆಗೆಯಲು ತಿಳಿಯದ ಮಗು ಅಳಲು ಶುರು ಮಾಡಿದೆ..

ಮಗು ಅಳುವ ಸದ್ದನ್ನು ಕೇಳಿದ ತಾಯಿ ಧನ್ಯಾ ರವರು ಬಾತ್ ರೂಮ್ ಡೋರ್ ತೆರೆಯಲು ನೋಡಿದಾಗ ಲಾಕ್ ಆಗಿರುವ ವಿಷಯ ತಿಳಿದಿದೆ.. ಅತ್ತ ಮಗು ಅಳುವುದನ್ನು ಕೇಳಲಾಗದೆ ಇತ್ತ ಡೋರ್ ಕೂಡ ಓಪನ್ ಮಾಡಲಾಗದೆ ಧನ್ಯಾರವರು ದಿಕ್ಕೇ ತೋಚದಂತಾದರು.. ಆನಂತರ ಬಾತ್ ರೂಮ್ ಕಿಟಕಿಯಿಂದ ಘಂಟೆಗಳ ಕಾಲ ಕೂಗಿ ಕೊಂಡಿದ್ದಾರೆ..

ಇದನ್ನು ಕೇಳಿಸಿಕೊಂಡ ಮನೆಯ ಓನರ್ ಮಂಜುನಾಥ್ ಮನೆಯ ಬಳಿ ಬಂದು ಮನೆ ಬಾಗಿಲನ್ನು ಹೊಡೆದು ಒಳ ಹೋಗಿ ಬಾತ್ ರೂಮ್ ಲಾಕ್ ತೆರೆದಿದ್ದಾರೆ.. ಏನೇ ಆಗಲಿ ಆ ತಾಯಿಗೆ ಹೋದ ಜೀವ ಮತ್ತೆ ಬಂದಂತಾಗಿದೆ.. ಅಮ್ಮನಿಲ್ಲದೇ ಅತ್ತು ಅತ್ತು ಕಂಗಾಲಾಗಿದ್ದ ಮಗುವನ್ನು ಸಮಧಾನ ಪಡಿಸಿ ಇನ್ನು ಮುಂದೆ ಈ ರೀತಿಯ ಪರಿಸ್ಥಿತಿ ತಂದುಕೊಳ್ಳಬಾರದೆಂದು ಪಾಠ ಕಲಿತಿದ್ದಾರೆ..

ಇದು ಅವರಿಗಷ್ಟೇ ಅಲ್ಲ ಎಲ್ಲಾ ಅಪ್ಪ ಅಮ್ಮಂದಿರಿಗೆ ಪಾಠವಾಗಿದೆ.. ಮಗುವೊಂದನ್ನು ಬಿಟ್ಟು ಕೆಲಸ ಮಾಡುವ ಅಮ್ಮಂದಿರು ಸ್ವಲ್ಪ ಎಚ್ಚರ ವಹಿಸಿದರೆ ಒಳ್ಳೆಯದು..

ಶೇರ್ ಮಾಡಿ ಮುನ್ನೆಚ್ಚರಿಕೆಗಿಂತ ಒಳ್ಳೆಯ ಉಪಾಯ ಇನ್ನೊಂದಿಲ್ಲ..

Also Read: ಪ್ರಧಾನಿಯ ಮಹತ್ವಾಕಾಂಕ್ಷೆಯ “ಮೇಕ್ ಇನ್ ಇಂಡಿಯಾ” ಯೋಜನೆಯನ್ನು ದುರಪಯೋಗ ಪಡೆಸಿಕೊಂಡು, ಭಾರತೀಯರಿಗೆ ಮೋಸ ಮಾಡುತ್ತಿರುವ ಚೀನಿ ಮೊಬೈಲ್ ಕಂಪನಿಗಳು!!