ಬಿ.ಪಿ. ಸಮಸ್ಯೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿ, ಏರುಪೇರಾದರೆ ಸಾವೇ ಸಂಭವಿಸಬಹುದು; ಇದನ್ನು ಓದಿ ನಿಮ್ಮ ಬಿ.ಪಿ. ಎಷ್ಟು ಇರಬೇಕು ಅಂತ ತಿಳ್ಕೊಳ್ಳಿ..

0
3759

ನಿಮ್ಮ ವಯಸ್ಸಿಗೆ ತಕ್ಕಂತೆ ನಿಮಗೆ “ಬಿಪಿ” ಎಷ್ಟು ಇರಬೇಕು ಅಂತ ತಿಳಿದುಕೊಳ್ಳಿ

ಪ್ರತಿಯೊಬ್ಬರಿಗೂ ಯಾವಾಗಲೋ ಒಮ್ಮೆಮ್ಮೆ ಎದುರಾಗುವ ಆರೋಗ್ಯ ಸಮಸ್ಯೆ ಎಂದರೆ ಹೈಬಿಪಿ, ಅಥವಾ ಲೋ ಬಿಪಿ. ಆಹಾರ ಅಭ್ಯಾಸಗಳು, ಜೀವನಶೈಲಿ, ಒತ್ತಡ ಕಾರಣದಿಂದ ಅದೇ ರೀತಿ ಉಪ್ಪು ಹೆಚ್ಚಾಗಿ ಸೇವಿಸುವುದು, ಅನುವಂಶೀಯತೆ ಕಾರಣದಿಂದ ಬಿಪಿ (ರಕ್ತದ ಒತ್ತಡ) ಸಮಸ್ಯೆಗಳು ಬರುವ ಅಪಾಯ ಕಾದಿದೆ. ಇದರಿಂದ ಮೂತ್ರಕೋಶಗಳ ಸಮಸ್ಯೆ, ಹೃದ್ರೋಗ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ಈ ವಿಚಾರದಲ್ಲಿ ಎಚ್ಚರ ವಹಿಸಿ. ಸಾಮಾನ್ಯವಾಗಿ ನಿಮ್ಮ ವಯಸ್ಸಿಗೆ ತಕ್ಕಂತೆ ಬಿಪಿ ಎಷ್ಟು ಇರಬೇಕು ಎಂಬುದನ್ನು ತಿಳಿದುಕೊಳ್ಳಿ.

ರಕ್ತದ ಒತ್ತಡ ಎಂದ ಕೂಡಲೆ ಎಲ್ಲರಿಗೂ 120/80 ನೆನಪಿಗೆ ಬರುತ್ತದೆ. ಯಾಕೆಂದರೆ ಅದು ಸಾಮಾನ್ಯ ರಕ್ತದ ಒತ್ತಡದ ಮಾನದಂಡಕ್ಕೆ ತಕ್ಕಂತೆ ಯುವತಿ ಯುವತಿಯರಿಗೆ (20-40 ವರ್ಷಗಳವರಿಗೆ) ಸಾಮಾನ್ಯ ಬಿಪಿ 120/80ಗೆ ಒಂದು ಸಂಖ್ಯೆ ಅತ್ತಿತ್ತ ಇರಬೇಕು. ವಯಸ್ಸು ಹೆಚ್ಚಾಗುತ್ತಾ ಸಾಮಾನ್ಯ ರಕ್ತದ ಒತ್ತಡ 130/85ಕ್ಕೆ ಬರುತ್ತದೆ.

ಅದೇ ರೀತಿ ಚಿಕ್ಕಮಕ್ಕಳಿಗೆ ಸಾಮಾನ್ಯ ರಕ್ತದ ಒತ್ತಡ ಹುಟ್ಟಿದಾಗ 90/60 ಇದ್ದು ಅದು ಕ್ರಮೇಣ ಹೆಚ್ಚಾಗುತ್ತದೆ. ಅದೇ ರೀತಿ ಈ ಕೆಳಗಿನ ಚಾರ್ಟ್‌ನಲ್ಲಿ ವಯಸ್ಸಿಗೆ ತಕ್ಕಂತೆ, ಎಷ್ಟು ರಕ್ತದ ಒತ್ತಡ ಇರಬೇಕು ಎಂಬುದನ್ನು ತಿಳಿಸಿದ್ದಾರೆ ಒಮ್ಮೆ ಗಮನಿಸಿ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.