ದೀಪಾವಳಿಗೆ ಮೋದಿ ಸರ್ಕಾರದಿಂದ ಗಿಫ್ಟ್, ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಇಳಿತ.. ರಾಜ್ಯ ಸರ್ಕಾರಗಳು ಇವಾಗ ಕಡಿಮೆ ಮಾಡಲಿದೆಯೇ?

0
942

ಇತ್ತೀಚಿಗಷ್ಟೇ ಕೇಂದ್ರ ಇಂಧನ ಸಚಿವರು ದೀಪಾವಳಿ ವೇಳೆಗೆ ಪೆಟ್ರೋಲ್​ ಹಾಗೂ ಡಿಸೈಲ್​ ಬೆಲೆಯಲ್ಲಿ ಇಳಿಮುಖವಾಗುವ ಬಗ್ಗೆ ಸೂಚನೆ ನೀಡಿದ್ದರು. ಅದರಂತೆ ಪೆಟ್ರೋಲ್​ ಹಾಗೂ ಡೀಸೆಲ್​ ಮೇಲಿನ ಅಬಕಾರಿ ಸುಂಕ ಲೀಟರ್​​ಗೆ 2 ರೂಪಾಯಿ ಕಡಿತಗೊಳ್ಳಲಿದೆ. ಪರಿಷ್ಕೃತ ದರ ಇಂದು (ಅ.4) ಮಧ್ಯ ರಾತ್ರಿಯಿಂದಲೇ ಜಾರಿಯಾಗಲಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚುತ್ತಿದ್ದರೂ, ದೇಶದಲ್ಲಿ ದರವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಹೊಸ ಪ್ಲಾನ್ ಮಾಡಿಕೊಂಡಿದೆ. ಇನ್ನು ಈ ಅವಧಿಗೆ ಸರ್ಕಾರದ ಬೊಕ್ಕಸಕ್ಕೆ ಸುಮಾರು 13 ಸಾವಿರ ಕೋಟಿ ರೂಪಾಯಿ ಹೊರೆಯಾಗಲಿದೆ. ಇನ್ನು ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಚುಕ್ಕಾಣಿ ಹಿಡಿದ ಬಳಿಕ ಐದು ಬಾರಿ ಸುಂಕದ ಬೆಲೆಯನ್ನು ಹೆಚ್ಚಿಸಲಾಗಿತ್ತು. ಪ್ರಸ್ತುತ ಕೇಂದ್ರ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ ರೂ. 21.48 ಹಾಗೂ ಡೀಸೆಲ್‌ಗೆ ರೂ. 17.33 ಸುಂಕ ವಿಧಿಸುತ್ತಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ಮಂಗಳವಾರ 71.99 ರೂ. ಇದ್ದು 2.55 ರೂ. ಕಡಿಮೆಯಾಗಿ ಬುಧವಾರ 69.44 ರೂ. ಆಗಿದೆ. ಅದೇ ರೀತಿ 59.25 ರೂ. ಇದ್ದ ಡೀಸೆಲ್ ದರ 2.29 ರೂ. ಕಡಿಮೆಯಾಗಿ 56.96 ರೂ. ಆಗಿದೆ. ಕೇಂದ್ರ ಸರ್ಕಾರ ಪ್ರಸ್ತುತ 1 ಲೀಟರ್ ಪೆಟ್ರೋಲ್ ಗೆ 21.48 ರೂ., ಡೀಸೆಲ್ ಗೆ 17.33 ರೂ. ಅಬಕಾರಿ ಸುಂಕ ವಿಧಿಸಲಾಗುತ್ತಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್​ ದರ (ಅ.4): ದೆಹಲಿ, 68.38, ಕೋಲ್ಕತಾ 71.16, ಮುಂಬೈ 77.51, ಚೆನ್ನೈ 70.85