ನಾವೇಕೆ ಕಣ್ಣ ರೆಪ್ಪೆ ಬಡಿಯುತ್ತೇವೆ?

0
834

ದಿನದಲ್ಲಿ ನೀವು ಎಷ್ಟು ಬಾರಿ ರೆಪ್ಪೆ ಬಡಿಯುತ್ತೇವೆ ಎಂಬುದನ್ನು ಎಣಿಸಿದ್ದೀರಾ? ಬೇಡ ರೆಪ್ಪೆ ಬಡಿಯುವುದು ಯಾಕೆ ಎನ್ನುವುದನ್ನು ನೀವು ಯೋಚಿಸಿರುವಿರಾ? ರೆಪ್ಪೆ ಬಡಇಯುವುದು ಅನೈಚ್ಛಿಕ ಪ್ರಕ್ರಿಯೆ. ಅಂದರೆ ಅದು ತಾನಾಗಿ ನಡೆದು ಹೋಗುವ ಪ್ರಕ್ರಿಯೆ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ಸಾಮಾನ್ಯವಾಗಿ ನಾವು ಆರು ಸೆಕೆಂಡುಗಳಿಗೊಮ್ಮೆ ರೆಪ್ಪೆ ಬಡಿಯುತ್ತೇವೆ. ವೈಜ್ಞಾನಿಕವಾಗಿ ಹೇಳುವುದಾದರೆ ಮೇಲು ರೆಪ್ಪೆಯ ಅಡಿ ಭಾಗದಲ್ಲಿ ಅಶುಗ್ರಂಥಿಗಳಿವೆ (ಟಿತರ್ ಗ್ಲ್ಯಾಡ್ಸ್) ನಾವು ರೆಪ್ಪೆ ಮುಚ್ಚಿದಾಗ ಆ ಗ್ರಂಥಿಗಳು ಬಂದು ವಿಶಿಷ್ಟವಾದ ಕ್ಷಾರದಂಥ ದ್ರವವನ್ನು ಉತ್ಪನ್ನವಾದರೆ ಕಣ್ಣೀರಿನ ರೂಪದಲ್ಲಿ ಹೊರ ಬರುತ್ತದೆ. ಕಣ್ಣನ್ನು ರಕ್ಷಿಸುವ ಈ ದ್ರವವು ಕಣ್ಣಿಗೆ ಬೀಳುವ ಧೂಳು, ಕಸಗಳು ಹೊರಬರಲು ನೆರವಾಗುತ್ತದೆ.

ಪ್ರಕಾಶಮಾನವಾದ ಬೆಳಕು ಕಣ್ಣಿಗೆ ಬಿದ್ದ ಕೂಡಲೇ ರೆಪ್ಪೆ ಮುಚ್ಚಿಕೊಂಡು ಆ ಬೆಳಕು ಅಕ್ಷಿಪಟ (ರೆಟಿನಾ)ವನ್ನು ಪ್ರವೇಶಿಸಿದಂತೆ ಮಾಡಿ ದೃಷ್ಟಿಯನ್ನು ಕಾಪಾಡುತ್ತದೆ. ಮೇಲ್ನೋಟಕ್ಕೆ ಸಾಮಾನ್ಯ ಕ್ರಿಯೆಯಮತೆ ತೋರಿದರೂ ಕಣ್ಣಿನ ರಕ್ಷಣೆಯಲ್ಲಿ ರೆಪ್ಪೆ ಬಡಿಯುವಿಕೆ ಮಹತ್ತರವಾದದ್ದು.

-ರವಿಚಂದ್ರ ಎಂ.ವೈ