ಕಣ್ಣುಗಳ ಸೌಂದರ್ಯ ಕಾಪಾಡಲು ನೈಸರ್ಗಿಕ ಟಿಪ್ಸ್

0
806

ಕಣ್ಣುಗಳು ನಮ್ಮ ಮುಖದ ಸೌಂದರ್ಯ ಹೆಚ್ಚಿಸುವಲ್ಲಿ  ಯಾವುದೇ ಸಂಶಯವಿಲ್ಲ ಕಣ್ಣಿನ ಸೌಂದರ್ಯವನ್ನು  ಹೆಚ್ಚಿಸುವ ನಿಟ್ಟಿನಲ್ಲಿ ನಾವು ದುಬಾರಿ ಬೆಲೆಯ ಸೌಂದರ್ಯವರ್ಧಕ ಸಾಮಾಗ್ರಿಗಳನ್ನು ಬಳಸುವುದರ ಬದಲಿಗೆ ಸರಳವಾದ ಮನೆ ಮದ್ದುಗಳನ್ನು ಬಳಸುವ ಮೂಲಕ ಕಣ್ಣುಗಳಿಗೆ ಮತ್ತಷ್ಟು ಕಾಂತಿಯನ್ನು ನೀಡಬಹುದು.

*ಸೌತೆಕಾಯಿ: ಆಯಾಸಗೊಂಡ ಕಣ್ಣುಗಳಿಗೆ ಮತ್ತು ಊದಿಕೊಂಡ ಕಣ್ಣುಗಳಿಗೆ ಸೌತೆಕಾಯಿ ತುಂಡುಗಳು ಆರಾಮವನ್ನು ಒದಗಿಸುತ್ತದೆ. ಇವುಗಳಲ್ಲಿ ನೀರಿನ ಅಂಶ ಕುಗ್ಗಿದ ಚರ್ಮವನ್ನು ಮತ್ತೆ ಮೊದಲಿನಂತೆ ಮಾಡುತ್ತವೆ. ಇದಕ್ಕಾಗಿ ಫ್ರಿಡ್ಜ್ ನಲ್ಲಿಟ್ಟ ಸೌತೆಕಾಯಿಯನ್ನು ದುಂಡಗೆ ಕತ್ತರಿಸಿಕೊಳ್ಳಿ ತಣ್ಣಗಿರುವ ಈ ತುಂಡುಗಳನ್ನು ನಿಮ್ಮ ಕಣ್ಣುಗಳ ಮೇಲೆ 10 ನಿಮಿಷಗಳ ಕಾಲ ಇಡಿ. ಮುಂದಿನ ಫಲಿತಾಂಶ ನಿಮಗೆ ತಿಳಿಯುತ್ತದೆ.

*ರೋಸ್ ವಾಟರ್: ಮೊದಲು ನಿಮ್ಮ ಕಣ್ಣುಗಳ ಸುತ್ತ ಮತ್ತು ಕಣ್ಣಿನ ಮೇಲೆ ಹರಳೆಣ್ಣೆಯಿಂದ ಮೃದುವಾಗಿ ಮಸಾಜ್ ಮಾಡಿ. ನಂತರ ರೋಸ್ ವಾಟರಿನಲ್ಲಿ ನೆನೆಸಿದ ಹತ್ತಿ ತುಂಡುಗಳನ್ನು ಕಣ್ಣುಗಳ ಹೊಳಪನ್ನು ನೀಡುವುದರ ಜೊತೆಗೆ, ಕಣ್ಣಿನ ಸುತ್ತ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ.

* ಸೇಬಿನ ರಸ: ದಪ್ಪ ಹತ್ತಿಯ ಪ್ಯಾಡ್ ಗಳನ್ನು ಶುದ್ಧವಾದ ಸೇಬಿನ ರಸಕ್ಕೆ ಅದ್ದಿ ಎರಡು ನಿಮಿಷ ಬಿಡಿ. ನಂತರ ಅವುಗಳನ್ನು ಕಣ್ಣುಗಳ ಮೇಲೆ 10 ನಿಮಿಷಗಳು ಇಡಿ. ಸೇಬಿನಲ್ಲಿರುವ ವಿಟಮಿನ್ ಗಳು ಕಣ್ಣುಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ, ಇವು ಕಣ್ಣುಗಳಿಗೆ ಆರಾಮವನ್ನು ನೀಡುವುದರ ಜೊತೆಗೆ, ಹೊಳಪನ್ನು ಸಹ ನೀಡುತ್ತವೆ. ಕಣ್ಣುಗಳ ಸುತ್ತ ಬರುವ ಸುಕ್ಕುಗಳನ್ನು ಸಹ ಸೇಬಿನ ರಸ ಪರಿಹಾರಿಸುತ್ತದೆ.

*ಅಲೂಗಡ್ಡೆ: ಕತ್ತರಿಸಿದ ಆಲೂಗಡ್ಡೆ ತುಂಡುಗಳನ್ನು ನಿಮ್ಮ ಮುಚ್ಚಿದ ಕಣ್ಣುಗಳ ಮೇಲೆ ಇರಿಸಿ, ಆಲೂಗಡ್ಡೆಗಳು ಕೇವಲ ಕಣ್ಣುಗಳ ಸುತ್ತ ಇರುವ ಕಪ್ಪು ವೃತ್ತಗಳನ್ನು ಮಾತ್ರ ನಿವಾರಿಸುವುದಿಲ್ಲ. ಜೊತೆಗೆ ಇವು ಕಣ್ಣುಗಳಿಗೆ ಅಗತ್ಯವಾಗಿರುವ ನೀರಿನಂಶವನ್ನು ಸಹ ನೀಡುತ್ತವೆ ಮತ್ತು ಊತವನ್ನು ನಿವಾರಿಸುತ್ತವೆ. ಆಲೂಗಡ್ಡೆಯಲ್ಲಿರುವ ಪೋಷಕಾಂಶಗಳನ್ನು ಕಣ್ಣಿನ ಕೆಳಗೆ ಇರುವ ತ್ವಚೆಯು ಹೀರಿಕೊಳ್ಳುತ್ತದೆ ಮತ್ತು ಆದರಿಂದ ಕಣ್ಣುಗಳಯ ಆರೋಗ್ಯಕರವಾಗಿ ಮತ್ತು ಹೊಳಪಿನಿಂದ ಕಂಗೊಳಿಸುತ್ತದೆ.

*ಹಾಲು: ಕಣ್ಣುಗಳ ಹೊಳಪಿಗಾಗಿ ಹಾಲನ್ನು ಬಳಸಿ. ಅದನ್ನು ಮೊದಲು ಐಸ್ ಕೋಲ್ಡ್ ಆಗುವ ತನಕ ರೆಫ್ರಿಜಿರೇಟರಿನಲ್ಲಿಡಿ. ನಂತರ ಅದರಲ್ಲಿ ಹತ್ತಿಯ ತುಮಡುಗಳನ್ನು ಇರಿಸಿ, ಆರಾಮವಾಗಿ ಮಲಗಿಕೊಂಡು, ಕಣ್ಣುಗಳ ಮೇಲೆ ಇಟ್ಟುಕೊಳ್ಳಿ ಇವು ಸಹ ಇಳಿಬಿದ್ದ ಮತ್ತು ಆಯಾಸಗೊಂಡ ಕಣ್ಣುಗಳಿಗೆ ಹೇಳಿ ಮಾಡಿಸಿದ ಪರಿಹಾರ.

*ನೆಲ್ಲಿಕಾಯಿ: ಆಮ್ಲ ಅಥವಾ ಬೆಟ್ಟದ ನೆಲ್ಲಿಕಾಯಿಯನ್ನು 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ನಂತರ ನೆನೆಸಿದ ನೀರಿನಿಂದ ಕಣ್ಣುಗಳನ್ನು ತೊಳೆಯಿರಿ. ನಿಮಗೆ ಬೇಕಾದಲ್ಲಿ ಈ ನೀರಿನಲ್ಲಿ ಹತ್ತಿಯ ತುಂಡುಗಳನ್ನು ನೆನೆಸಿ, ಅದನ್ನು ಕಣ್ಣುಗಳ ಮೇಲೆ ಐದು ನಿಮಿಷಗಳ ‘ಸಿ’ಯು ಊತಗೊಮಡಿರುವ ಮತ್ತು ಆಯಾಸಗೊಂಡ ಕಣ್ಣುಗಳಿಗೆ ಆರಾಮವನ್ನು ನೀಡುತ್ತದೆ. ಇದು ಸಹ ಕಣ್ಣುಗಳನ್ನು ಹೊಳಪಿನಿಂದ ಕಂಗೊಳಿಸುವಂತೆ ಮಾಡಲು ಉತ್ತಮವಾದ ಮಾರ್ಗವಾಗಿರುತ್ತದೆ.