ಪ್ರತಿಯೊಬ್ಬರಿಗೂ ಒಂದು ಬುಕ್ ಎನ್ನುವಂತೆ ಬೆಳೆದಿರುವ ಫೇಸ್ಬುಕ್ ಹಲವು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ಇದು ಯುವಕ- ಯುವತಿಯರಿಗೆ ಗುಡ್ ನ್ಯೂಸ್ ಹೇಳಿದ್ದು, ಇನ್ಮುಂದೆ ಅವಿವಾಹಿತರಿಗೆ ಡೇಟಿಂಗ್ ಸೇವೆಯನ್ನೂ ಒದಗಿಸಲಿದೆ. ಏಕೆಂದರೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಫೇಸ್ಬುಕ್ ಬಳಕೆ ಮಾಡುತ್ತಿದ್ದು ಅದರಲ್ಲಿ ಹೆಚ್ಚಿನ ಜನ ಮೊಬೈಲ್ ನಲ್ಲಿಯೇ ಡೇಟಿಂಗ್ ಮಾಡೋದಕ್ಕೆ ಅವಕಾಶವಿದ್ರೇ ಎಷ್ಟು ಒಳ್ಳೇದಲ್ವಾ ಎನ್ನುವ ವಿಚಾರವನ್ನು ಮಾಡುತ್ತಿದ್ದರು ಅದಕ್ಕಾಗಿ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಬಳಕೆದಾರರ ಕನಸ್ಸನ್ನು ನನಸು ಮಾಡಿದ್ದಾರೆ.
ಫೇಸ್ಬುಕ್ ಡೇಟಿಂಗ್ ಆ್ಯಪ್?
ಹೌದು ಈ ದಿನಗಳಲ್ಲಿ ಏನೇನೆಲ್ಲ ನೋಡಬೇಕು ಎನ್ನುವ ಕಾತುರದಲ್ಲಿ ಜನರಿಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ಇನ್ನು ಮುಂದೆ ಡೇಟಿಂಗ್ ಸೇವೆಯನ್ನೂ ಒದಗಿಸಲಿದೆ. ಈಗಾಗಲೇ ಅಮೆರಿಕಾ ಸೇರಿದಂತೆ 20 ದೇಶಗಳಲ್ಲಿ ಜುಕರ್ಬರ್ಗ್ ಡೇಟಿಂಗ್ ಆ್ಯಪ್ ಹೊರತಂದಿದ್ದಾರೆ. ಅಲ್ಲದೇ ಈ ಆ್ಯಪ್ ಹೇಗೆ ಅವಿವಾಹಿತರಿಗೆ ಸಹಯವಾಗಲಿದೆ ಎಂದು ನೋಡಲು ಉತ್ಸುಕನಾಗಿದ್ದೇನೆ ಎಂದು ಅಧಿಕೃತವಾಗಿ ಜುಕರ್ಬರ್ಗ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕೊಲಂಬಿಯಾದಲ್ಲಿ ಗುರುವಾರ ಡೇಟಿಂಗ್ ಆಯಪ್ ಪ್ರಾಯೋಗಿಕವಾಗಿ ಫೇಸ್ ಬುಕ್ ಶುರು ಮಾಡಿದೆ.
ಈಗಾಗಲೇ ಹಿಂಜ್ ಇಂಥ ಒಂದು ಆಯಪ್ ಹೊಂದಿದ್ದು, ಅದಕ್ಕೆ ಎಫ್ ಬಿ ಟಕ್ಕರ್ ನೀಡಲಿದೆ. ಬಳಕೆದಾರರ ಪ್ರೊಫೈಲ್ ನಲ್ಲಿ ಏನಾದರೂ ಪ್ರಶ್ನೆ ಕೇಳಲು ಮತ್ತು ಅದಕ್ಕೆ ಸಮರ್ಥ ಉತ್ತರವನ್ನೂ ಪಡೆಯಲು, ಜತೆಗೆ ಸಂಭಾಷಣೆ ನಡೆಸಲು ಇಲ್ಲಿ ವೇದಿಕೆ ಇದೆ. ಅದೇ ರೀತಿ ಪ್ರೊಫೈಲ್ ನಲ್ಲಿ ಡೇಟಿಂಗ್ ನಡೆಸೋರಿಗೆ ಎಫ್ ಬಿ ಕೂಡ ಕೊಂಡಿಯಾಗಲಿದೆ. ಇದರಲ್ಲಿ ಜನ ಹೆಚ್ಚು ಸರಳ- ಆರಾಮದಾಯಕವಾಗಿ ಆಯಪ್ ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶ ಸಂಸ್ಥೆಯದ್ದಾಗಿದೆ. 20 ಕೋಟಿಗೂ ಅಧಿಕ ಫೇಸ್ಬುಕ್ ಬಳಕೆದಾರರು ಸಿಂಗಲ್ ಎಂದು ತಮ್ಮ ಸ್ಟೇಟಸ್ ದಾಖಲಿಸಿಕೊಂಡಿದ್ದಾರೆ. ಹೀಗಾಗಿ ನಾವು ಕೂಡಾ ಡೇಟಿಂಗ್ ಆ್ಯಪ್ನ್ನು ಸಿದ್ಧ ಪಡಿಸಬೇಕಿದೆ ಎಂದು ಈ ಹಿಂದೆಯೇ ಜುಕರ್ಬರ್ಗ್ ಹೇಳಿಕೊಂಡಿದ್ದರು. ಒಂದು ದಶಕದ ಹಿಂದೆಯೇ ಡೇಟಿಂಗ್ ಅಪ್ಲಿಕೇಶನ್ ಕುರಿತಾದ ಆಲೋಚನೆ ಮಾಡಿದ್ದೆ. ಆದರೀಗ ಫೇಸ್ಬುಕ್ ಅಧಿಕೃತವಾಗಿ ಈ ಅಪ್ಲಿಕೇಶನ್
ಲಾಂಚ್ ಮಾಡಿದೆ ಎಂದು ಜುಕರ್ಬರ್ಗ್ ತಿಳಿಸಿದ್ದಾರೆ.
2004ರಲ್ಲಿ ಫೇಸ್ಬುಕ್ ತಮ್ಮ ಬಳಕೆದಾರರಿಗೆ ತಮ್ಮ ವೈವಾಹಿಕ ಮಾಹಿತಿ ಕುರಿತು ಹಂಚಿಕೊಳ್ಳಲು ಆಯ್ಕೆಯೊಂದನ್ನು ನಿರ್ಮಿಸಿತ್ತು. ಈ ದಾಖಲೆಗಳನ್ನು ಪರಿಶೀಲಿಸಿರುವ ಫೇಸ್ಬುಕ್, ವಿಶ್ವದಲ್ಲಿ ಕನಿಷ್ಟ 20 ಕೋಟಿ ಜನ ಸಿಂಗಲ್ (ಅವಿವಾಹಿತ) ಎಂದು ದಾಖಲಿಸಿಕೊಂಡಿದ್ದಾರೆ. ಕೆಲವು ಅಪ್ಲಿಕೇಶನ್ಗಳು ಹೆಚ್ಚು ವೈರಲ್ ಆಗಿತ್ತು. ಆದರೆ ಇದೀಗ ಇವರೆಲ್ಲರಿಗೂ ಸೆಡ್ಡು ಹೊಡೆಯಲು ಫೇಸ್ಬುಕ್ ಸ್ವತಃ ಡೇಟಿಂಗ್ ಅಪ್ಲಿಕೇಶನ್ ಲಾಂಚ್ ಮಾಡಿರುವುದು ವಿಶೇಷವಾಗಿದೆ.
ಹೇಗೆ ಕೆಲಸ ಮಾಡುತ್ತೆ ಈ ಆ್ಯಪ್?
ಎಫ್8 ಸಮ್ಮೇಳನವೊಂದರಲ್ಲಿ ಫೇಸ್ಬುಕ್ ತಮ್ಮ ಡೇಟಿಂಗ್ ಅಪ್ಲಿಕೇಶನ್ ಕುರಿತಾದ ಮಾದರಿಯನ್ನು ಪರಿಚಯಿಸಿದ್ದು, ಈ ಮಾದರಿಯ ಪ್ರಕಾರ ಫೇಸ್ಬುಕ್ ಆ್ಯಪ್ನಲ್ಲಿ ಹಾರ್ಟ್ ಚಿತ್ರಣದ ಎಮೊಜಿಯನ್ನು ಅಳವಡಿಸಲಾಗುತ್ತದೆ. ಖಾತೆದಾರರು ಈ ಹಾರ್ಟ್ ಸಿಂಬಲ್ಗೆ ಕ್ಲಿಕ್ ಮಾಡಿದಲ್ಲಿ ಅವರಿಗೆ ಸೂಕ್ತವಾದ ಮ್ಯಾಚಿಂಗ್ ಹುಡುಕುತ್ತದೆ.