ಆಧಾರ್-ನಲ್ಲಿ ಇರೋ ನಿಮ್ಮ ಗುಪ್ತ ಮಾಹಿತಿಗಿಂತ 10 ಪಟ್ಟು ಹೆಚ್ಚು ಮಾಹಿತಿ ಕಸಿದು ಕೊಳ್ಳುತ್ತಿದೆಯೇ ಫೇಸ್ಬುಕ್??

0
1526

ಆಧಾರ್ ಕಾರ್ಡ್, ಈಗ ಪ್ರತಿಯೊಬ್ಬರೂ ನಿತ್ಯ ಒಂದಲ್ಲ ಒಂದು ಕಡೆ ಕೇಳುವ ಸಾಮಾನ್ಯ ದಾಖಲಾತಿ, ಸಿಮ್, ಬ್ಯಾಂಕ್ ಖಾತೆ, LPG, ಶಾಲೆಗೆ, ಉದ್ಯೋಗಕ್ಕೆ, ಪಡಿತರ ಕಾರ್ಡ್, ಪಿಂಚಣಿಗೆ, ಸಾಲ ಪಡೆಯಲು, ಮತ್ತು ಸರ್ಕಾರದ ಯಾವುದೇ ಸೇವೆ ಪಡೆಯಲು ಸಹ ಇದು ಬೇಕು.

ಜನರಿಗೆ, ಇನ್ನು ಇದರಲ್ಲಿನ ಮಾಹಿತಿ ಭದ್ರತೆ ಬಗ್ಗೆ ಮೊದಲಿನಿಂದಲೂ ಸಂಶಯವಿದೆ. ಆದರೆ, ಆಧಾರ ಕಾರ್ಡ್ ಗಿಂತಲೂ ಭದ್ರತೆ ಇಲ್ಲದ ಮತ್ತು ನೀವು ನಿತ್ಯ ಆದರಿಗಿಂತಲೂ ಹೆಚ್ಚು ಬಳಸುವ ಒಂದು ಜನಪ್ರಿಯ ಸೈಟ್ ಬಗ್ಗೆ ನೀವು ತಿಳಿದುಕೊಂಡರೆ ಅಚ್ಚರಿ ಪಡುತ್ತೀರ.

ಜನ ಆಧಾರ್ ಕಾರ್ಡ್ನಲ್ಲಿ ನೀಡುವ ಬಯೊಮಿಟ್ರಿಕ್ಸ್ ಸೋರಿಕೆಯಾದರೆ ಹೇಗೆ, ಅದರಲ್ಲಿನ ಮಾಹಿತಿ ದುರುಪಯೋಗಪಡಿಸಿಕೊಂಡು ನಮ್ಮ ಲೊಕೇಶನ್ ಬಳಸಿ ನಾವು ಎಂದು ಮಾಡುತ್ತಿದ್ದೇವೆ, ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಮತ್ತು ಇನ್ನಿತರ ಗೌಪ್ಯ ಸಂಗತಿಯನ್ನು ಟ್ರ್ಯಾಕ್ ಮಾಡಿದರೆ ಹೇಗೆ ಎಂದು ಸಂಶಯವಿದೆ.

ಆದರೆ ನೀವು ನಿತ್ಯ ಬಳಸುವ ಸಾಮಾಜಿಕ ಜಾಲತಾಣ ಫೇಸ್-ಬುಕ್ ನಿಮ್ಮ ಮೇಲೆ ಎಷ್ಟರ ಮಟ್ಟಿಗೆ ನಿಗಾ ಇಟ್ಟಿದೆ ಎಂದು ಗೊತ್ತಾದರೆ ಶಾಕ್ ಆಗ್ತೀರ. ಹೌದು, ವಿಶ್ವದ NO.1 ಸಾಮಾಜಿಕ ಜಾಲತಾಣವಾದ ಫೇಸ್-ಬುಕ್ ನಿಮ್ಮನ್ನು ಆದರಿಗಿಂತಲೂ ಜಾಸ್ತಿ ಟ್ರ್ಯಾಕ್ ಮಾಡುತ್ತಿದೆ ಗೊತ್ತಾ.

ಭಾರತ ಸರ್ಕಾರಕ್ಕಿಂತಲೂ ನಿಮ್ಮನ್ನು ಟ್ವಿಟ್ಟರ್, ಫೇಸ್-ಬುಕ್ ಮತ್ತು ಗೂಗಲ್ ಹಿಂಬಾಲಿಸುತ್ತಿದೆ, ನಿಮ್ಮ ಬಗ್ಗೆ ಪ್ರತಿಯೊಂದು ಸಣ್ಣ ಸಂಗತಿಯು ಅವರ ಬಳಿ ಇದೆ ನಿಮಗೆ ಖಾಸಗಿತನ ಬೇಕಾದರೆ ಇವುಗಳಿಂದ ದೂರವಿರಿ ಎಂದಿದ್ದಾರೆ ಹಿರಿಯ ಪತ್ರಕರ್ತ ಥಾಮಸ್.

ಹಿರಿಯ ಪತ್ರಕರ್ತ ಥಾಮಸ್ ಲೋರೆನ್ ಫ್ರೀಡ್ಮನ್ ಅಮೆರಿಕಾದ ಪತ್ರಕರ್ತ ಮತ್ತು ಲೇಖಕ. ಅವರು ಮೂರು ಬಾರಿ ಪುಲಿಟ್ಜೆರ್ ಪ್ರಶಸ್ತಿ ವಿಜೇತರಾಗಿದ್ದಾರೆ. ಫ್ರೀಡ್ಮನ್ ಪ್ರಸ್ತುತ ನ್ಯೂಯಾರ್ಕ್ ಟೈಮ್ಸ್ ನ ನಿಯತಕಾಲಿಕೆಯಲ್ಲಿ ಬರಹಗಾರರಾಗಿದ್ದರೆ.

ನನಗೆ ಭಾರತ ಸರ್ಕಾರ ಮಾಡಿದ ಆಧಾರ್ ಕಾರ್ಡ್ ಬಗ್ಗೆ ತುಂಬಾ ಹೆಮ್ಮೆ ಇದೆ ಇದೊಂದು ತುಂಬ ಒಳ್ಳೆಯ ಯೋಜನೆ. ನಿಮಗೆ ಖಾಸಗಿತನ ಬೇಕಾದರೆ ಟ್ವಿಟ್ಟರ್, ಫೇಸ್-ಬುಕ್ ಮತ್ತು ಗೂಗಲ್ ನಿಂದ ದೂರವಿರಿ, ಆಧಾರ್ ಬಗ್ಗೆ ಸಂಶಯ ಪಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.