ಲಿಂಗಾಯಿತ ವೀರಶೈವರಿಗೆ ಅಲ್ಪ ಸಂಖ್ಯಾತ ಸ್ಥಾನಮಾನ ಸಿಕ್ಕಿದರೆ ಸಿಗುವ ಸೌಲಭ್ಯಗಳು ಏನೇನು ಗೊತ್ತಾ?? ಇಲ್ಲಿವೆ ನೋಡಿ..

1
897

ಹಿಂದೂ ಧರ್ಮದಿಂದ ಲಿಂಗಾಯಿತರನ್ನು ಬೇರ್ಪಡಿಸಿ ಪ್ರತ್ಯೇಕ ಧರ್ಮವನ್ನಾಗಿ ಮಾಡಿದ್ದು ರಾಜಕೀಯ ವಲಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದು ಸತ್ಯ.. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು.. ಲಿಂಗಾಯಿತರ ಮತ ಪಡೆಯಲು ಸಿದ್ದರಾಮಯ್ಯನವರು ಇಟ್ಟ ರಾಜಕೀಯದ ಹೆಜ್ಜೆ ಧರ್ಮವನ್ನು ಒಡೆಯುವ ಕೆಲಸ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ..

ಇನ್ನು ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಅಲ್ಪ ಸಂಖ್ಯಾತರ ಸ್ಥಾನಮಾನ ಸಿಕ್ಕರೆ ಅವರಿಗೆ ಸಿಗುವ ಸೌಲಭ್ಯಗಳು ಕೂಡ ಹೆಚ್ಚಾಗುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿವೆ.. ಯಾವ ಯಾವ ಸೌಲಭ್ಯಗಳು ಸಿಗಲಿವೆ?? ಇಲ್ಲಿದೆ ನೋಡಿ..


ಪ್ರತ್ಯೇಕ ಧರ್ಮ ಸ್ಥಾನಮಾನ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಣಯವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಶಿಫಾರಸ್ಸಿಗೆ ಸಮ್ಮತಿಸಿದರೂ ಅಲ್ಪ ಸಂಖ್ಯಾತರಿಗೆ ಸಿಗುವ ವಿಶೇಷ ಸೌಲಭ್ಯಗಳು ಲಿಂಗಾಯಿತ ವೀರಶೈವರಿಗೆ ಸಿಗುವುದಿಲ್ಲ.. ಉದ್ಯೋಗದಲ್ಲೂ ಯಾವುದೇ ರೀತಿಯ ವಿಶೇಷ ಸೌಲಭ್ಯಗಳು ಸಿಗುವುದಿಲ್ಲ..

ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪ ಸಂಖ್ಯಾತರಿಗಿರುವ ವಿಶೇಷ ಸೌಲಭ್ಯ ಲಿಂಗಾಯಿತರಿಗೆ ಸಿಗಲಿದೆ..

ಜೊತೆಗೆ ಲಿಂಗಾಯಿತ ವೀರಶೈವರಿಗೆ ಅಲ್ಪ ಸಂಖ್ಯಾತ ಸ್ಥಾನಮಾನ ಸಿಕ್ಕರೂ ಈಗ ಇರುವ ಪ್ರವರ್ಗ ಬದಲಾಗುವುದಿಲ್ಲ..

ಈಗ ಲಿಂಗಾಯಿತ ವೀರಶೈವರು ಪ್ರವರ್ಗ 3ಬಿ ಗೆ ಸೇರುತ್ತಾರೆ.. ಮುಂದೆಯೂ ಕೂಡ ಅದೇ ಪ್ರವರ್ಗದ ಅಡಿಯಲ್ಲಿಯೇ ಮುಂದುವರೆಯುತ್ತಾರೆ..ಮುಸ್ಲೀಮರ ಸೌಲಭ್ಯಕ್ಕೆ ಧಕ್ಕೆ??

ಲಿಂಗಾಯಿತ ವೀರಶೈವರಿಗೆ ಅಲ್ಪ ಸಂಖ್ಯಾತ ಸ್ಥಾನಮಾನ ಸಿಕ್ಕರೂ ಮುಸ್ಲೀಮರಿಗೆ ಈಗ ಇರುವ ಸೌಲಭ್ಯಗಳಿಗೆ ಯಾವುದೇ ರೀತಿಯಾದ ತೊಂದರೆಯಾಗುವುದಿಲ್ಲ.

ಸದ್ಯ ಮುಸ್ಲೀಮರಿಗೆ ನಮ್ಮ ರಾಜ್ಯದಲ್ಲಿ 4% ಮೀಸಲಾತಿ ನೀಡಲಾಗುತ್ತಿದೆ.. ಅದರಂತೆಯೇ ಮುಂದುವರೆಯಲಿದೆ..