ಸರ್ಕಾರ ಮಾಡಿರುವ ರೈತರ ಸಾಲ ಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳುವುದು ಹೇಗೆ ಅಂತ ಹೇಳ್ತೀವಿ ಓದಿ…

0
3029

ರಾಜ್ಯದ ರೈತರ ಬೆಳೆ ಸಾಲ ಮನ್ನಾ ಮಾಡಿದ ಮೈತ್ರಿ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಡೆದಿತ್ತು ಇದರಿಂದ ರೈತರಿಗೆ ಮಂದಹಾಸ ಮೂಡಿತ್ತು . ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸುಸ್ತಿ ಸಾಲ ಮನ್ನಾ ಮಾಡಲು ಮಹತ್ವದ ನಿರ್ಧಾರ ಕೈಗೊಂಡು ಎರಡು ಲಕ್ಷದವರೆಗೆ ಸಾಲಮನ್ನಾ ಮಾಡಿತ್ತು ಇದಕ್ಕೆ ರಾಜ್ಯದ ತುಂಬೆಲ್ಲ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ ಹಾಗೆ ಸಾಲ ಮನ್ನಾ ಮಾಡುವಲ್ಲಿ ವಿಳಂಭವಾಗುತ್ತಿದೆ ಎಂದು ಮೈತ್ರಿ ಸರ್ಕಾರದ ವಿರುದ್ದ ದ್ವನಿ ಕೇಳಿ ಬರುತ್ತಿತು.

Also read: ಮುಖ್ಯಮಂತ್ರಿ ಎಚ್.ಡಿ.ಕೆ ಗೆ ವಾರ್ನಿಂಗ್ ನೀಡಿದ ವಿಷ್ಣುವರ್ಧನ್​ರವರ ಅಳಿಯ ಅನಿರುದ್ದ್; ತಿರುಗೇಟು ನೀಡಿ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ..

ರೈತರಿಗೆ ಯಾವ ರೀತಿಯ ಸಾಲಮನ್ನಾ ಆಗುತ್ತೆ ಅಂತ ಭಯದಲ್ಲಿದರು ಏಕೆಂದರೆ ರೈತರಿಗೆ ಬ್ಯಾಂಕ್-ಗಳಿಂದ ಹಲವಾರು ಬಾರಿ ನೋಟಿಸ್-ಗಳು ಬರುತ್ತಾನೆ ಇದವು ಇದರಿಂದ ಭಯಭೀತರಾದ ರೈತರು ಇನ್ನು ಸಾಲ ಮನ್ನಾ ಯಾವಾಗೆ ಅಂತಾ ಯೋಚನೆಯಲ್ಲಿದ್ದರು. ಈ ವಿಷಯಕ್ಕೆ ಹಲವಾರು ಚರ್ಚೆಗಳು ಕೂಡ ನಡೆದಿದ್ದವು. ರೈತರಿಗೆ ಋಣಮುಕ್ತ ಪತ್ರ ಯಾವಾಗೆ ಸಿಗುತ್ತೆ ಅಂತ ಪ್ರಶ್ನೆಗಳು ಕೇಳಿ ಬರುತ್ತಿದವು. ಇದಕ್ಕೆ ಮುಖ್ಯಮಂತ್ರಿಗಳು ಕೂಡ ರೈತರಿಗೆ ದೈರ್ಯ ಹೇಳಿ ಬ್ಯಾಂಕ್-ಗಳಿಗೆ ಎಚ್ಚರಿಕೆ ನೀಡಿದ್ದರು. ಈಗ ರೈತರ ಸಾಲಮನ್ನಾ ವಿಷಯವಾಗಿ ಒಂದು ಹೆಜ್ಜೆ ಮುಂದೆ ಬಂದಿರುವ ಸರ್ಕಾರ ಯಾವೆಲ್ಲ ರೈತರ ಬೆಳೆ ಸಾಲ ಮನ್ನಾ ಆಗಿದೆ ಎಂಬುದನ್ನು ಅಂತರ್ಜಾಲದಲ್ಲಿ ಪ್ರಕಟಿಸಿದೆ.

ಏನಿದು ಪ್ರಕಟಣೆ?

ಬ್ಯಾಂಕ್ ಗಳಿಂದ ರೈತರು ಪಡೆದ ಸಾಲದ ಸಮಗ್ರ ಮಾಹಿತಿ ಪಡೆದ ಸರ್ಕಾರ ಅದಕ್ಕೆ ಅಧಿಕೃತ ವೆಬ್ಸೈಟ್ ಮಾಡಿ ಅದರಲ್ಲಿ ಯಾವ ಯಾವ ಸಾಲ ಮನ್ನಾ ಆಗುತ್ತೆ ಮತ್ತು ಸಾಲ ಪಡೆದ ರೈತರ ಹೆಸರು, ಸಾಲದ ಮೊತ್ತ ವನ್ನು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.

ಸಾಲ ಮನ್ನಾ ಪ್ರಕಟಣೆ ನೋಡುವುದು ಹೇಗೆ?

ಸರಕಾರ ನೀಡಿರುವ ಮಾಹಿತಿವು ಈ ಕೆಳಗಿನ ಲಿಂಕ್ ತೋರಿಸಲಾಗಿದೆ.

http://clws.karnataka.gov.in/clws/pacs/pacsreports/PendingBankverification.aspx

ರೈತರ ಸಾಲ ಮನ್ನಾ ಆಗಿದೆ ಎಂಬುದನ್ನು ಲಿಂಕ್​ ಮೂಲಕ ತಿಳಿದುಕೊಳ್ಳಬಹುದು. ಮೊದಲು ಈ ಲಿಂಕ್​ ಕ್ಲಿಕ್​ ಮಾಡಿ, ಅಲ್ಲಿ ನೀಡಿರುವ ಆಯ್ಕೆಗಳಲ್ಲಿ ಜಿಲ್ಲೆಯ ಹೆಸರನ್ನು ನಮೂದಿಸಿ, ಬ್ಯಾಂಕಿನ ಹೆಸರು ಮತ್ತು ಯಾವ ಶಾಖೆ ಎಂಬುದನ್ನು ಆಯ್ಕೆ ಮಾಡಿ. ನಂತರ ಎಕ್ಸ್​ಪೋರ್ಟ್​ ಒತ್ತಿ. ಆಗ ಆ ಶಾಖೆಯಲ್ಲಿ ಯಾವೆಲ್ಲ ರೈತರ ಸಾಲ ಮನ್ನಾ ಆಗಿದೆ ಎಂಬುದರ ಪಟ್ಟಿ ಕಾಣಿಸಿಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.