ಇಂದು ರೈತ ದಿನಾಚರಣೆ, ದೇಶಕ್ಕೆ ಅನ್ನ ನೀಡುವ ಅನ್ನದಾತನ್ನನ್ನು ಎಂದಿಗೂ ಮರೆಯಬಾರದು…

0
1403

ಇಂದು ರೈತ ದಿನ, ಇಡೀ ದೇಶಕ್ಕೆ ಅನ್ನ ನೀಡುವ ರೈತನ್ನನ್ನು ಗೌರವಿಸಲು ಆಚರಿಸುವ ದಿನ. ರೈತ ದಿನದ ಆಚರಣೆಗಳಿಂದ ಸಮಾಜಕ್ಕೆ ತಮ್ಮ ಕೊಡುಗೆಗಾಗಿ ರೈತರಿಗೆ ಸಹಾಯ ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 23 ರಂದು ರೈತರ ದಿನವನ್ನು ಆಚರಿಸಲಾಗುತ್ತದೆ.

ಇಂದು ಭಾರತದ ರೈತ ನಾಯಕ ಕೇಂದ್ರ ಸಚಿವ, UP ಮಾಜಿ ಮುಖ್ಯಮಂತ್ರಿ ಮತ್ತು ಭಾರತದ 5 ನೇ ಪ್ರಧಾನಿಯಾಗಿದಂತಹ ದಿವಂಗತ ಚೌಧರಿ ಚರಣ್ ಸಿಂಗ್ ಹುಟ್ಟುಹಬ್ಬ, ರೈತರ ಕುರಿತು ಅವರಿಗಿದ್ದ ಕಾಳಜಿಯನ್ನು ಗೌರವಿಸಿ ಡಿಸೆಂಬರ್ 23 ರಂದು ಪ್ರತಿ ವರ್ಷ “ರೈತ ದಿನ”ವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ರೈತರ ಹಿತ ಕಾಯುವ ಬಿಲ್ ಅನ್ನು ಪ್ರಪ್ರಥಮ ಬಾರಿಗೆ ಅವರೇ ಮಂಡಿಸಿದ್ದರು, ಇಂದು ಅವರ ಬಿಲ್-ಅನ್ನು ದೇಶದ ಎಲ್ಲ ರಾಜ್ಯಗಳು ಪಾಲಿಸುತ್ತಿವೆ.

ರೈತರ ಜೀವನಮಟ್ಟವನ್ನು ಸುಧಾರಿಸಿ ಅವರಿಗೆ, ಮಳೆಯಿಂದ ತುಂಬಿದ ಕೃಷಿಯ ಮೇಲಿನ ಹೆಚ್ಚಿನ ಅವಲಂಬನೆಯು ಆರ್ಥಿಕತೆಯ ಹಾನಿಯನ್ನುಂಟು ಮಾಡುತ್ತದೆ ಎಂಬುದರ ಬಗ್ಗೆ ತಿಳಿಸಿ. ಈ ರೈತರಿಗೆ ಬದಲಾವಣೆ ಮತ್ತು ಆಧುನಿಕ ಸುಧಾರಿತ ಕೃಷಿ ವ್ಯವಸ್ಥೆಗಳಿಗೆ ದಾರಿ ಮಾಡಿ ಕೊಡಲು ಈ ದಿನವನ್ನು ನಿಯೋಜಿಸಲಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ರೈತರ ಪಾತ್ರ ಎಷ್ಟು ಮುಖ್ಯ ಎಂದು ನಿರ್ಣಯಿಸಲು ಇದು ಒಂದು ಕಾರ್ಯಕ್ರಮವಾಗಿದೆ. ಅವರಿಗೆ ಸರ್ಕಾರ ಮತ್ತು ಜನ ಶಿಕ್ಷಣದಲ್ಲಿ ಸಹಾಯ ಮಾಡಬೇಕಾಗಿದೆ, ವೈಜ್ಞಾನಿಕ ಕೃಷಿ, ಸಾಲ, ಸಂಗ್ರಹಣೆ ಮತ್ತು ಮಾರ್ಕೆಟಿಂಗ್-ನಲ್ಲಿ ತಮ್ಮ ಉತ್ಪಾದನೆ ಕುರಿತು ತರಬೇತಿ ನೀಡಬೇಕು.

ಸಹಜವಾಗಿ, ಕೃಷಿ ಇಲಾಖೆಯು ತಮ್ಮ ಅಗತ್ಯಗಳನ್ನು ನೋಡಿಕೊಳ್ಳುತ್ತಿದೆ ಆದರೆ ಇಡೀ ದೇಶದ ಜನ ರೈತರ ಕಾರಣಕ್ಕಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ, ಹೀಗಿರುವಾಗ ನಾವು ಅವರನ್ನು ಗೌರವಿಸಿ, ಅವರಿಗೆ ಆಧುನಿಕ ಮತ್ತು ವೈಜ್ಞಾನಿಕ ಕೃಷಿಯ ಕುರಿತು ಸಲಹೆಗಳು ನೀಡಿ ಸಹಕರಿಸಿ, ಹುರಿದುಂಬಿಸಬೇಕು. ವ್ಯಾಲೆಂಟೈನ್ಸ್-ಡೇ, ರೋಸ್ ಡೇ, ಕಿಸ್ ಡೇ ಎಂದು ಹೀಗೆ ಹಲವಾರು ಉಪಯೋಗವಿಲ್ಲದ ದಿನಗಳನ್ನು ಆಚರಿಸುವ ಬದಲು ದೇಶದ ಬೆನ್ನೆಲುಬಾಗಿರುವ “ಜೈ ಕಿಸಾನ್” ಎಂದು ಹೊಗಳಿಸಿಕೊಂಡಿರುವ ಅನ್ನದಾತನ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ದಿನವನ್ನು ಆಚರಿಸಬೇಕು.

ಒಟ್ಟಿನಲ್ಲಿ ಎಷ್ಟು ಕೋಟಿ-ಕೋಟಿ ಹಣಗಳಿಸಿದರು ಹಸಿವಾದಾಗ ಹೊಟ್ಟೆಗೆ ರೈತರು ಬೆಳೆಯುವ ಅನ್ನವನ್ನೇ ತಿನ್ನುತ್ತೇವೆ, ಹೀಗಿರುವಾಗ ನಾವೇಕೆ ಅವರ ದಿನವನ್ನು ಆಚರಿಸುವುದಿಲ್ಲ ಒಮ್ಮೆ ಯೋಚಿಸಿ ಬದಲಾಗಿ…!