ಸಾಲಭಾದೆ ತಾಳಲಾರದೆ ರೈತ ಕುಟುಂಬ ಆತ್ಮಹತ್ಯೆ; ಮೈತ್ರಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ…

0
777

ಮಂಡ್ಯ ಜಿಲ್ಲೆ ಸುಂಕಾತೊಣ್ಣುರು ಗ್ರಾಮದ ರೈತ ಕುಟುಂಬ ಸಾಲಭಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದೆ. 35 ವರ್ಷದ ನಂದೀಶ್, 28 ವಯಸ್ಸಿನ ಪತ್ನಿ ಕೋಮಲ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಂದೀಶ್ ಮಾಡಿದ್ದ 6 ಲಕ್ಷ ಸಾಲವನ್ನು ಮರು ಪಾವತಿಸುವಂತೆ ಬ್ಯಾಂಕ್ ಸಿಬ್ಬಂದಿಗಳು ಪೀಡಿಸುತ್ತಿದ್ದರು.. ಈ ಸಂಬಂಧ ನಂದೀಶ್ ಸಿಎಂ ಜನತಾ ದರ್ಶನದಲ್ಲಿ ಎರಡು ಬಾರಿ ತಮ್ಮ ಸಮಸ್ಯೆ ಹೇಳಿಕೊಂಡಿದ್ರು. ಸಿಎಂ ಕುಮಾರಸ್ವಾಮಿ ನಂದೀಶ್ ಸಾಲದ ಸಮಸ್ಯೆಗೆ ಸ್ಪಂದಿಸಿದ್ರು. ಅದರಲ್ಲಿ ಖಾಸಗಿ ಸಾಲ, ಒಡವೆ ಸಾಲ ಹಾಗೂ ಬ್ಯಾಂಕ್ ಸಾಲ ಕೂಡ ಇತ್ತು. ನೋಟೀಸ್ ಕೊಡದಂತೆ, ಸಾಲ ಮರುಪಾವತಿಗೆ ಒತ್ತಾಯ ಮಾಡದಂತೆ ಬ್ಯಾಂಕ್ ನವರಿಗೆ ಸೂಚನೆ ಸಹ ನೀಡಲಾಗಿತ್ತು. ಆದರೂ ನಂದೀಶ್ ಕುಟುಂಬ ಆತ್ಮ ಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.

ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತ ರೈತ ನಂದೀಶ್ ಪೋಷಕರಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂ. ಹಣವನ್ನು ಹಸ್ತಾಂತರಿಸಿದರು. ಸಾಲ ಭಾದೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡರೆ ಐದು ಲಕ್ಷ ಪರಿಹಾರ ಕೊಡಬೇಕು ಎಂದು ಈ ಹಿಂದೆಯೇ ಆದೇಶ ಮಾಡಿತ್ತು. ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಎಲ್ಲ ಸೌಲಭ್ಯ ಸಿಗುವಂತೆ ಮಾತನಾಡುತ್ತೇನೆ. ಜಿಲ್ಲಾಧಿಕಾರಿ ಬಂದು ಕುಟುಂಬದ ಜತೆ ಮಾತನಾಡಬೇಕಿತ್ತು. ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಆತ್ಮಹತ್ಯೆಯಿಂದ ಅವರ ಕುಟುಂಬಕ್ಕೆ ಹಾನಿಯಾಗಲಿದೆ ಅಷ್ಟೇ ಯಾವುದೇ ಲಾಭ ಅಗುವುದಿಲ್ಲ ಎಂದರು.

ಸಾಲಮನ್ನಾ ಹಣ ಜನರಿಗೆ ತಲುಪಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಏಕೆ ಸಾಲಮನ್ನಾ ಮಾಡಬಾರದು? ಅದಕ್ಕೆ ಉತ್ತರಿಸಲಿ, ಸುಮ್ಮನೆ ಆರೋಪ ಮಾಡಬಾರದು. ಮೋದಿ ಜತೆ ಮಾತನಾಡಿ ಸಾಲಮನ್ನಾ ಮಾಡಿಸಲಿ. ಸರ್ಕಾರ ಉರುಳುತ್ತದೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಯಾವ ಶಾಸಕರೂ ನಮ್ಮನ್ನು ಬಿಟ್ಟು ಹೋಗಿಲ್ಲ ಎಂದು ಹೇಳಿದರು.