ವಿವಿಧ ಬೇಡಿಕೆಗೆ ರೈತರು ಮಾಡುತ್ತಿರುವ ಹೋರಾಟ ರಾಜಧಾನಿಗೆ ತಲುಪಿದ್ದು; ನೀಚಗೆಟ್ಟ, ನಾಚಿಗೆಟ್ಟ, ವಚನಭ್ರಷ್ಟ ಅವಿವೇಕಿ ಮುಖ್ಯಮಂತ್ರಿ ಎಂದ ಪ್ರತಿಭಟನಾಕಾರರು..

0
442

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತಾರಕಕ್ಕೇರಿ ಸಂಘರ್ಷದ ರೂಪ ಪಡೆದಿದ್ದು. ಹೋರಾಟದ ಬಿಸಿ ಬೆಂಗಳೂರಿಗೆ ತಲಿಪಿದೆ. ರಾಜ್ಯದ ಹಲವಾರು ಪ್ರದೇಶಗಳಿಂದ ರಾತ್ರೋ ರಾತ್ರಿ ಬಂದಿಳಿದ ಸಾವಿರಾರು ರೈತರು ಕಬ್ಬು ಬಾಕಿ ಪಾವತಿ, ಸೂಕ್ತ ಬೆಂಬಲ ಬೆಲೆ ನಿಗದಿಗಾಗಿ ಹೋರಾಟಕ್ಕೆ ಇಳಿದ ರೈತರು ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ವಿರುದ್ದ ಮಾತನಾಡಿ. ರೈತರಿಗೆ ಸುಳ್ಳು ಬರವಸೆ ನಿಡುತ್ತಿರುವ ಮುಖ್ಯಮಂತ್ರಿ ನೀಚಗೆಟ್ಟ, ನಾಚಿಗೆಟ್ಟ, ವಚನಭ್ರಷ್ಟ ಅವಿವೇಕಿ ಮುಖ್ಯಮಂತ್ರಿ ಇವನ ಬಾಯಿಯಲ್ಲಿ ಬರುವ ಮಾತುಗಳು ಶುದ್ದ ಸುಳ್ಳು ಅವನೊಬ್ಬ ಕರ್ನಾಟಕದ ನಂ. 1 ಸುಳ್ಳುಗಾರ ಇಂತಹ ಮಂತ್ರಿ ಕರ್ನಾಟಕಕ್ಕೆ ಸಿಕ್ಕಿದ್ದು ಮೊದಲೇ ಬಾರಿ ಎಂದು ಏಕವಚನದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

@publictv

ಕುಮಾರಸ್ವಾಮಿಯವರು ನಿನ್ನೆ ಆಡಿದ ಮಾತು ಇವತ್ತಿಲ್ಲ. ಇವತ್ತು ಆಡದ ಮಾತು ನಾಳೆಗಿಲ್ಲ. ನಾನು ಸೋಮವಾರ ಬೆಳಗಾವಿಯಲ್ಲಿ ಸಭೆ ಕರೀತಿನಿ ಅಂತ ಹೇಳಿದ್ದಾನೆ. ಆದ್ರೆ ಈ ಅವಿವೇಕಿ ಮುಖ್ಯಮಂತ್ರಿ ಇವತ್ತು ಆಗಲ್ಲ ಮಂಗಳವಾರ ಬರುತ್ತೇನೆ ಎಂದು ತಿಳಿಸಿದ್ದಾನೆ. ಇವನಿಗೆ ರೈತ ಮಹಿಳೆಯರ ಮೇಲೆ ಮಾತಿನ ಹಿಡಿತವಿಲ್ಲ ದೇಶಕ್ಕೆ ಅನ್ನನಿಡುವ ರೈತ ಮಹಿಳೆಗೆ 4 ವರ್ಷದಿಂದ ಎಲ್ಲಿ ಮಲಗಿದ್ದಿಯಾಮ್ಮ ಅಂತ ಕೇಳಿದ್ದಾರಲ್ಲ, ಇದೇ ಮಾತನ್ನು ನಾವು ರಾಜ್ಯದ ರೈತರು ಅವರಿಗೆ ಕೇಳಿದ್ರೆ ಅವರಿಗೆ ಏನ್ ಮರ್ಯಾದೆ ಬರುತ್ತಾ?. ಎಂದು ಪ್ರಶ್ನಿಸುವ ಮೂಲಕ ಇವರಿಗೆ ಸಾಲಮನ್ನಾ ಮಾಡಲು ಆಗಲ್ಲ. ರೈತರ ಪರ ಕೆಲಸ ಮಾಡುವ ಯೋಗ್ಯತೆ ಇಲ್ಲ ಇಂತಹವರು ತಾಕತ್ತಿದ್ದರೆ ಗೋಲಿಬಾರ್ ಮಾಡಿಸಲಿ ಅಂತ ಗುಡಿಗಿದ್ದಾರೆ.

ಏನಿದು ಹೋರಾಟ?

@publictv

ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಮತ್ತು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೆಲವಾರು ದಿನಗಳಿಂದ ರಾಜ್ಯದಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಈ ಹಿನ್ನೆಯಲ್ಲಿ ಭಾನುವಾರ ಪ್ರತಿಭಟನಾಕಾರರು ಬೆಳಗಾವಿ ಸುವರ್ಣ ಸೌಧದ ಗೇಟ್‌ ಮುರಿಯಲೆತ್ನಿಸಿದ್ದಲ್ಲದೆ ಆವರಣಕ್ಕೆ ಲಾರಿಗಳನ್ನು ನುಗ್ಗಿಸಲಾಯಿತು. ಬಾಗಲಕೋಟದಲ್ಲಿ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದ ಮೂರು ಲಾರಿಗಳಿಗೆ ಬೆಂಕಿ ಹಚ್ಚಲಾಗಿದೆ. ಹಲವು ತಾಲೂಕುಗಳಲ್ಲಿ ಪ್ರತಿಭಟನೆ, ರಸ್ತೆ ತಡೆ, ಕಬ್ಬು ಹೊತ್ತ ವಾಹನಗಳನ್ನು ಉರುಳಿಸುವ ಕೃತ್ಯಗಳು ನಡೆದಿತ್ತು. ಈ ನಡುವೆ, ನವೆಂಬರ್‌ 19ರಂದು ಸೋಮವಾರ ಬೆಳಗಾವಿಗೆ ಬಂದು ಮಾತುಕತೆ ನಡೆಸುವುದಾಗಿ ಪ್ರಕಟಿಸಿದ್ದ ಸಿಎಂ ಕುಮಾರಸ್ವಾಮಿ ಏಕಾಏಕಿಯಾಗಿ ಮಂಗಳವಾರ ಬೆಂಗಳೂರಿನಲ್ಲಿ ಸಭೆ ನಿಗದಿಪಡಿಸಿದ್ದು ಕೂಡಾ ಪ್ರತಿಭಟನಾಕಾರರನ್ನು ಒಂದು ಹಂತದಲ್ಲಿ ಕೆರಳಿಸಿತು.

ವಿಧಾನಸೌಧಕ್ಕೆ ಮುತ್ತಿಗೆ ಹಾಕುವಂತೆ ರೈತ ಸಂಘ ಕರೆ:

@publictv

ನ.19ರಂದು ಕಬ್ಬು ಬೆಳೆಗಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವಂತೆ ರೈತ ಸಂಘ ಕರೆಯ ಹಿನ್ನೆಲೆಯಾಗಿ ರಾಜ್ಯದ ಬೇರೆ ಬೇರೆ ಕಡೆಗಳಿಂದ 25000ಕ್ಕೂ ಅಧಿಕ ರೈತರು ಆಗಮಿಸಿದ್ದಾರೆ. ಅದರಲ್ಲೂ ಮಂಡ್ಯ ಭಾಗದಿಂದ ಹೆಚ್ಚಿನ ರೈತರು ಆಗಮಿಸಿದ್ದು ವಿಶೇಷವಾಗಿದೆ. ಹೀಗಾಗಿ ರಾಜಧಾನಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು ಪ್ರತಿಭಟನಾ ರ್ಯಾಲಿ ಚುರುಕ್ಕಾಗಿದೆ.

ರೈತರ ಮೂಲ ಬೇಡಿಕೆಗಳು ಏನು?

1) ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು.
2) ರೈತರ ಆರ್ಥಿಕ ಪುನಶ್ಚೇತನಕ್ಕಾಗಿ ವಿಶೇಷ ಪ್ಯಾಕೇಜ್​ ನೀಡಬೇಕು.
3) ಬೆಳೆದ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು.
4) ಕೃಷಿ ಸಾಲಕ್ಕಾಗಿ ಸರಳ ಸಾಲ ನೀತಿಯನ್ನು ಜಾರಿಗೆ ತರಬೇಕು.
5) ಬ್ಯಾಂಕ್​ಗಳು ನೀಡುತ್ತಿರುವ ಕಿರುಕುಳಗಳನ್ನ ತಡೆಗಟ್ಟಬೇಕು.
6) ಬರಗಾಲ ಪ್ರದೇಶದ ರೈತ ಕುಟುಂಬಕ್ಕೆ 10 ಸಾವಿರ ಜೀವನ ಭತ್ಯೆ ನೀಡಬೇಕು.
7) ಪ್ರತಿ ಹೆಕ್ಟೇರ್​ಗೆ 25 ಸಾವಿರ ರೂ. ನಷ್ಟ ಪರಿಹಾರ ನೀಡಬೇಕು.
8) ಬೆಂಬಲ ಬೆಲೆಯಲ್ಲಿ ಕೊಳ್ಳಲು ಖರೀದಿ ಕೇಂದ್ರ ತೆರೆಯಬೇಕು.
9) ಕೊಡಗು ಪುನರ್ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು.
10) ಕನ್ನಂಬಾಡಿ ಅಣೆಕಟ್ಟು ಉಳಿಸಲು ಗಣಿಗಾರಿಕೆ ನಿಷೇಧ ಮಾಡಬೇಕು.
11) ರೈತರಿಗೆ ಬಗರ್ ಹುಕಂ ಸಾಗುವಳಿ ಹಕ್ಕುಪತ್ರ ನೀಡಬೇಕು.