ರೈಲಿನಲ್ಲಿ ನಿಮಗೆ ಸರಿಯಾಗಿ ಸೇವೆ ಸಿಗಲಿಲ್ಲ ಅಂದ್ರೆ, ಇಲ್ಲಿ ದೂರು ನೀಡಿ… ರೈಲಿನ ಸಿಬ್ಬಂದಿಗೆ ಶಿಸ್ತು ಕಲಿಸುವಲ್ಲಿ ಭಾಗಿಯಾಗಿ..!!

0
1718

ಹಲವು ವರ್ಷಗಳ ಬಳಿಕ ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಹಿತವನ್ನು ಕಾಪಾಡಲು ಮುಂದಾಗಿದೆ. ಇದರ ಅನುಸಾರ ಹಲವು ಸವಲತ್ತುಗಳನ್ನು ನೀಡುತ್ತಿದೆ. ಇನ್ನು ಪ್ರಯಾಣಿಕ ಸುರಕ್ಷತೆ, ಭದ್ರತೆ, ಆರೋಗ್ಯದ ಮೇಲೆ ಕಾಳಜಿ ವಹಿಸಿರುವ ರೈಲ್ವೆ ಇಲಾಖೆಯ ಕ್ರಮ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ. ಇನ್ನು ಪ್ಯಾಸೆಂಜರ್​​ಗಳ ಹಿತವನ್ನು ಕಾಯಲು ರೈಲ್ವೆ ಇಲಾಖೆ ಸಹಾಯವಾಣಿಯನ್ನು ತೆರೆಯಲು ಮುಂದಾಗಿದೆ.

ಈ ಸಹಾಯವಾಣಿಗಳ ಮುಖಾಂತರ ಪ್ರಯಾಣಿಕರು ತಮ್ಮ ಕುಂದು ಕೊರತೆಗಳನ್ನು ತಿಳಿಸಬಹುದು. ಇದರ ಮೂಲಕ ಇಲಾಖೆಗೆ ಒಂದೇ ಬಳಿ ಕುಳಿತು ಕೊಂಡು ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಇದರ ಸಹಾಯದಿಂದ ರೈಲ್ವೆ ಇಲಾಖೆಯು ತನ್ನ ಸೇವೆಯನ್ನು ಇನ್ನು ಉತ್ತಮ ಗೊಳಿಸಲು ಶ್ರಮಿಸಬಹುದು. ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಸಮಸ್ಯೆ ಏಕೆ ಕಾಣಿಸಿಕೊಂಡಿದೆ ಎಂದು ಪತ್ತೆ ಹಚ್ಚಿ, ಮುಂದಿ ಈ ತರಹನಾದ ತೊಂದರೆ ಆಗದಂತೆ ನೋಡಿಕೊಳ್ಳಬಹುದು.

source: thelogicalindian.com

ಈ ವಿಷಯದ ಬಗ್ಗೆ ದೂರು ನೀಡಬಹುದು

 • ರೈಲಿನಲ್ಲಿ ಆಸನದ ಹಂಚಿಕೆ
 • ಬೆಡ್ರೊಲ್ ದೂರು
 • ಲಂಚ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೂರು
 • ನಿಲ್ದಾಣದಲ್ಲಿ ಶುಚಿತ್ವ
 • ಲಗೆಜ್​/ ಪಾರ್ಸಲ್​​ಗೆ ಸಂಬಂಧಿಸಿದ್ದಂತೆ
 • ಸಿಬ್ಬಂದಿಯ ವರ್ತನೆ
 • ಬೇರೆ ಸಿಬ್ಬಂದಿಯ ವರ್ತನೆಯ ಬಗ್ಗೆ
 • ಸಮರ್ಪಕ ನೀರು ಸಿಗದೇ ಇರುವ ಬಗ್ಗೆ
 • ಕಾಯ್ದಿರಿಸಿದ ಸೀಟುಗಳ ಬಗ್ಗೆ
 • ರೈಲು ಸಮಯದ ಬಗ್ಗೆ
 • ಕಾಯ್ದಿರಿಸಿದ ಸ್ಥಳ ಹಾಗೂ ಸರಿಯಾದ ಮಾಹಿತಿ ನೀಡದ ಬಗ್ಗೆ
 • ಕಳವು ಆದಾಗ

ಇನ್ನು ನೀವು ಅಂತರ್ಜಾಲದ ಮುಖಾಂತರವೂ ನಿಮ್ಮ ಕಂಪ್ಲೇಟ್​ ಫೈಲ್​ ಮಾಡಬಹುದು.

ದೂರು ನೀಡಲು ಇಲ್ಲಿ ಕ್ಲಿಕ್​ ಮಾಡಿ http://www.coms.indianrailways.gov.in/criscm/common/complaint_registration.seam

source: thelogicalindian.com

ಇನ್ನು ರೈಲ್ವೆ ಇಲಾಖೆ ಪ್ರಯಾಣಿಕರ ಕುಂದುಕೊರತೆ ತಡಗೆ ಸಹಾಯವಾಣಿಯನ್ನು ತೆರೆದಿದೆ.
– ದೂರು ಹಾಗೂ ಸಲಹೆಗಳಿಗೆ 138
– ಭದ್ರತಾ ಸಲಹೆ ಹಾಗೂ ಸೂಚನೆ 182
– ಇನ್ನು SMS ಮೂಲಕವೂ ದೂರು ನೀಡಬಹುದು. SMS to +919717680982.
– ಇನ್ನು ಪ್ರಯಾಣಿಕರು ಪ್ರಯಾಣಿಸುವಾಗ ತೊಂದರೆ ಆದಲ್ಲಿ, ತಮ್ಮ ದೂರುಗಳನ್ನು ಆನ್​ಲೈನ್​​ನಲ್ಲೂ ನೀಡಬಹುದು.
@RailMinIndia.

ಇನ್ನು ಈಗ ಕಾಲಾಬದಲಾಗುತ್ತಿದ್ದು ನಿಮ್ಮ ಸ್ಮಾರ್ಟ್​​ ಫೋನ್​ ಮೂಲಕವು ಕಂಪ್ಲೇಟ್​ ನೀಡಬಹುದು. ಅದಕ್ಕಾಗಿ

https://play.google.com/store/apps/details?id=com.cris.org&hl=en ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು.
ಇನ್ನು ಈ ಆ್ಯಪ್​ ಮೂಲಕ ನಿನ್ನ ದೂರು ಲಗತ್ತಿಸಿ, ಅಗತ್ಯ ಮಾಹಿತಿ ಲಗತ್ತಿಸಬಹುದು.

ಕೃಪೆ: the logical indian