ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದ್ವೆ ವಿಷಯ ರಿವೀಲ್ ಆಗ್ತಿದ್ದಂತೆ ಅವರ ಲೇಡಿ ಫ್ಯಾನ್ಸ್ ಏನ್ ಮಾಡ್ತಿದ್ದಾರೆ ಗೊತ್ತ??

0
752

ಧ್ರುವ ಸರ್ಜಾ ಇದುವರೆಗೂ ಮಾಡಿರುವ ಪ್ರತಿಯೊಂದು ಸಿನೆಮಾದಲ್ಲೂ ಭಾರಿ ಯಶಸ್ಸು ಕಂಡ ಇಡೀ ಸ್ಯಾಂಡಲ್-ವುಡ್-ಅನ್ನೇ ಧೂಳೆಬ್ಬಿಸುತ್ತಿರುವ ಆಕ್ಷನ್ ಪ್ರಿನ್ಸ್ ಅತೀ ಕಡಿಮೆ ಸಮಯದಲ್ಲಿ ಭಾರಿ ಅಭಿಮಾನಿಗಳನ್ನು ಕಲೆಹಾಕಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ, ಅದರಲ್ಲೂ ಅವರನ್ನು ಕಂಡರೆ ಹುಡುಗಿಯರಗಂತೂ ಅಚ್ಚು ಮೆಚ್ಚು.

Also read: ಬೀದಿ ಬೀದಿಯಲ್ಲಿ ನಾಟಕ ಮಾಡಿ ಸ್ಟಾರ್ ಆದ ಸ್ಟಾರ್ ಕುಟುಂಬದ ಕುಡಿ’ಯ 10 ವರ್ಷದ ಹಿಂದಿನ ಕಹಾನಿ

ಕೆಲದಿನಗಳಿಂದ ಧ್ರುವ ಸರ್ಜಾರವರ ಮದ್ವೆ ವಿಚಾರ ಎಲ್ಲಾ ಕಡೆ ಹರಿದಾಡುತ್ತಿದೆ, ಇದರಿಂದ ಅವರ ಮೇಲೆ ಅನೇಕ ಹುಡುಗಿಯರು ಅವರ ಮೇಲೆ ಭಾರಿ ಕೋಪ ಮಾಡಿಕೊಂಡಿರವ ವಿಚಾರ ಅವರ ಆಪ್ತರು ಹಂಚಿಕೊಂಡಿದ್ದಾರೆ.

ಇತ್ತೀಚಿಗೆ ಧ್ರುವ ಸರ್ಜಾರವರ ಹುಟ್ಟು ಹಬ್ಬ ಆಚರಿಸಿಕೊಂಡರು, ಅದೇ ದಿನ ಅವ್ರು ತಮ್ಮ ಪ್ರೀತಿಯ ವಿಚಾರ ಹಂಚಿಕೊಂಡಿದ್ದು, ತಾನು ಲವ್ ಮ್ಯಾರೇಜ್ ಆಗುವುದಾಗಿ ತಿಳಿಸಿದ್ದರು, ಇದು ಅವರ ಅನೇಕ ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿತ್ತು, ಆದರೆ ಅವರ ಮೇಲಿನ ಅತೀ ಅಭಿಮಾನದಿಂದ ಕೆಲವೊಂದು ಹುಡುಗಿಯರು ಅವರನ್ನು ಈ ವಿಚಾರವಾಗಿ ಪೀಡಿಸುತ್ತಿದ್ದಾರೆ.

Also read: ಟಗರು ಚಿತ್ರದ ವಿವಾದಾತ್ಮಕ ಡೈಲಾಗ್ ಬಗ್ಗೆ ಶಿವಣ್ಣ ಅಭಿಮಾನಿಗಳಿಗೆ ಏನ್ ಹೇಳಿದ್ರು ಗೊತ್ತಾ??

ಇನ್ನೂ ಅವರ ಮದುವೆಯಾಗುವ ಹುಡುಗಿಯ ಫೋಟೋ-ವನ್ನು ಸಾಮಾಜಿಕ ಜಾಲತಾಣಗಳಲ್ಲಿ ರಿವೀಲ್ ಮಾಡಿದ್ದಾರೆ, ಇದರಿಂದ ಹುಡುಗಿಯರು ಇನ್ನೂ ಮುನಿಸಿಕೊಂಡಿದ್ದಾರಂತೆ. ಆಗಿನಿಂದ ಕೆಲವರು ಇವರ ಪರ್ಸನಲ್ ಫೋನ್-ಗೆ ಕರೆ ಮಾಡಿ ತುಂಬಾ ಕಾಟ ಕೊಡಲು ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಧ್ರುವ ರವರ ಮದುವೆ ಸುದ್ದಿ ಹೊರಬಿದ್ದ ದಿನದಿಂದ ಅನೇಕ ಅನಾಮಧೇಯ ಹುಡುಗಿಯರು ಕರೆ ಬರೋಕ್ಕೆ ಶುರುವಾಗಿದ್ದು ಇನ್ನೂ ನಿಂತಿಲ್ಲವಂತೆ. ಧ್ರುವ ಸರ್ಜಾ ಹಾಗೂ ಅವರ ಸ್ನೇಹಿತರಿಗೂ ಅನೇಕ ಕರೆಗಳು ಬರುತ್ತಿವೆಯಂತೆ. ಕೆಲವರಂತೂ ಮದುವೆಯಾದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ನಾನೂ ನಿಮ್ಮನ್ನ ತುಂಬಾ ಪ್ರೀತಿಸುತ್ತೇನೆ ನನ್ನೇ ಮದುವೆಯಾಗು ಅಂತ ಹೇಳುತ್ತಿದ್ದಾರಂತೆ. ಇನ್ನೂ ಅನೇಕರು ನೀವು ಮದ್ವೆಯಾಗಿದ್ದೆ ಆದರೆ ನಿಮ್ಮ ಮನೆ ಮುಂದೆ ಧರಣಿ ಕುಳಿತುಕೊಳ್ಳುತ್ತೇವೆ ಅಂತೆಲ್ಲ ಬೆದರಿಕೆ ಹಾಕುತ್ತಿದ್ದಾರಂತೆ.

Also read: ಸು’ದೀಪ’-ರವರ ಈ ಹಠಮಾರಿ ಗುಣದಿಂದ ತೆಗೆದುಕೊಂಡ ಸಾವಿರಾರು ಕುಟುಂಬಗಳ ಮನೆ ದೀಪ ಬೆಳಗಿದೆ..

ಧ್ರುವ ಸರ್ಜಾರವರು ತಮ್ಮ ಬಾಲ್ಯದ ಗೆಳತಿಯನ್ನೇ ಮದ್ವೆಯಾಗುತ್ತಿರುವುದು ವಿಶೇಷ, ಅದರಲ್ಲೂ ಇವರಿಬ್ಬರು ೧೪ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರಂತೆ. ಇಬ್ಬರೂ ಮುಂದಿನ ತಿಂಗಳು ನಿಶ್ಚಿತಾರ್ಥವಾಗುತ್ತಿದ್ದಾರೆ, ಇನ್ನೂ ಪ್ರೇರಣಾ-ಧ್ರುವ ಜೋಡಿ ಅತೀ ಶೀಘ್ರದಲ್ಲೇ ಮದುವೆ ದಿನಾಂಕವನ್ನೂ ಹೇಳಲಿದ್ದಾರೆ ಅಂತೆ. ಈ ಜೋಡಿಗೆ ಒಳ್ಳೆದಾಗಲಿ ಅಂತ ಹಾರೈಸೋಣ, ಹಾಗೆಯೇ ಕೆಲ ಅಭಿಮಾನಿಗಳು ಹುಚ್ಚು ಅಭಿಮಾನವನ್ನು ಬಿಟ್ಟು ಈ ಜೋಡಿಗೆ ಶುಭ ಹಾರೈಸಲಿ ಎಂದು ಆಶಿಸೋಣ!!