ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಇಬ್ಬರು ಮಹಿಳೆಯರು; ಯಾರಿವರು ಘಟಾನುಘಟಿಗಳು??

0
223

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ದಕ್ಷ ಆಡಳಿತದ ಮೂಲಕ ಜಗತ್ತಿನ ಗಮನ ಸೆಳೆಯುತ್ತಿದ್ದು, ಮತ್ತೊಂದು ಹೆಮ್ಮೆಗೆ ಪಾತ್ರರಾಗಿದ್ದಾರೆ. ಫೋರ್ಬ್ಸ್ ನಿಯಾತಕಾಲಿಕೆಯ 2019ನೇ ಸಾಲಿನ ವಿಶ್ವದ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎಚ್‍ಸಿಎಲ್ ಕಾರ್ಪೋರೇಷನ್ ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕಿ ರೋಶಿಣಿ ನಾಡರ್ ಮಲ್ಹೋತ್ರಾ ಹಾಗೂ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ಪಟ್ಟಿಯಲ್ಲಿ ಸೇರಿದ್ದಾರೆ.

Also read: ಇನ್ಮುಂದೆ ಗ್ರಾಮಪಂಚಾಯತಿಯಲ್ಲೇ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಿಸುವಂತೆ ಆದೇಶಿಸಿದ ಸರ್ಕಾರ;ಈ ಕಾರ್ಡ್-ನಿಂದ ಏನೆಲ್ಲಾ ಚಿಕಿತ್ಸೆ ಪಡೆಯಬಹುದು??

ಹೌದು ಫೋರ್ಬ್ಸ್ 2019 ರ “ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ” ಪಟ್ಟಿಯಲ್ಲಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅಗ್ರಸ್ಥಾನದಲ್ಲಿದ್ದರೆ, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷೆ ಕ್ರಿಸ್ಟೀನ್ ಲಾಗಾರ್ಡ್ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೃತೀಯ ಸ್ಥಾನದಲ್ಲಿದ್ದಾರೆ.
ಪಟ್ಟಿಯಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ (29) ಸಹ ಇದ್ದು “2019 ರಲ್ಲಿ, ವಿಶ್ವದಾದ್ಯಂತ ಮಹಿಳೆಯರು ಸರ್ಕಾರ, ವ್ಯವಹಾರ, ಲೋಕೋಪಕಾರ ಮತ್ತು ಮಾಧ್ಯಮಗಳಲ್ಲಿ ಮುಖ್ಯ ಸ್ಥಾನಗಳನ್ನು ಪಡೆದುಕೊಂಡುಉತ್ತಮ ಸಾಧನೆ ಮಾಡುತ್ತಿದ್ದಾರೆ” ಎಂದು ಫೋರ್ಬ್ಸ್ ಹೇಳಿದೆ.

ಫೋರ್ಬ್ಸ್ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ಸೀತಾರಾಮನ್ 34 ನೇ ಸ್ಥಾನದಲ್ಲಿದ್ದದ್ದಾರೆ. ಇವರು ಪಟ್ಟಿಯಲ್ಲಿರುವ ಭಾರತೀಯರ ಪೈಕಿ ಮೊದಲಿಗರಾಗಿದ್ದಾರೆ. ಭಾರತದ ಮೊದಲ ಮಹಿಳಾ ಹಣಕಾಸು ಸಚಿವೆಯಾಗಿರುವ ಸೀತಾರಾಮನ್ ದೇಶದ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

Also read: ಹೃದಯ ಚಿಕಿತ್ಸೆಗಾಗಿ ಬಂದು ಆಟೋದಲ್ಲೇ 10 ಲಕ್ಷ ಹಣ ಮರೆತು ಹೋದ ವಿದೇಶಿ ಪ್ರಜೆ; ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ.!

ಇನ್ನು ನಾಡರ್ ಮಲ್ಹೋತ್ರಾ (54), ಕಿರಣ್ ಮಜುಂದಾರ್ ಶಾ(65) ಸ್ಥಾನದಲ್ಲಿದ್ದಾರೆ. ಮಲ್ಹೋತ್ರಾ ಎಚ್‌ಸಿಎಲ್ ಕಾರ್ಪೊರೇಶನ್‌ನ ಸಿಇಒ ಆಗಿ, 8.9 ಬಿಲಿಯನ್ ಯುಎಸ್ಡಿ ತಂತ್ರಜ್ಞಾನ ಕಂಪನಿಯ ಎಲ್ಲಾ ಕಾರ್ಯತಂತ್ರದ ಭಾಗವಾಗಿ ದುಡಿಯುತ್ತಿದ್ದರೆ ಮಜುಂದಾರ್ ಶಾಭಾರತದ ಅತ್ಯಂತ ಶ್ರೀಮಂತ ಸ್ವಂತ ಉದ್ಯಮ ನಡೆಸುವ ಮಹಿಳೆ ಮತ್ತು 1978 ರಲ್ಲಿ ದೇಶದ ಅತಿದೊಡ್ಡ ಜೈವಿಕ ಔಷಧೀಯ ಸಂಸ್ಥೆ ಬಯೋಕಾನ್ ಸ್ಥಾಪನೆ ಮಾಡಿದ್ದವರು ಎನ್ನುವುದು ಗಮನೀಯ ಅಂಶ.

ಉಳಿದಂತೆ ಫೋರ್ಬ್ಸ್ ಪಟ್ಟಿಯಲ್ಲಿ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷ ಮೆಲಿಂಡಾ ಗೇಟ್ಸ್ (6), ಐಬಿಎಂ ಸಿಇಒ ಗಿನ್ನಿ ರೊಮೆಟ್ಟಿ (9), ಫೇಸ್‌ಬುಕ್ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್ (18), ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ (38), ಮೊದಲ ಮಗಳು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರ ಇವಾಂಕಾ ಟ್ರಂಪ್ (42), ಗಾಯಕರಾದ ರಿಹಾನ್ನಾ (61), ಬೆಯೋನ್ಸ್ (66) ಮತ್ತು ಟೇಲರ್ ಸ್ವಿಫ್ಟ್ (71), ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ (81) ಮತ್ತು ಯುವ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ (100). ಸ್ಥಾನ ಗಳಿಸಿದ್ದಾರೆ. ಈ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.