ದಂಡ ಕಟ್ಟೋಕ್ಕಿಂತ ವಾಹನಮಾರೋದೇ ವಾಸಿ!

0
1423

ಸಂಚಾರ ನಿಯಮ ಉಲ್ಲಂಘನೆಪ್ರಕರಣಗಳಿಗೆ ಕಡಿವಾಣ ಹಾಕಲುದಂಡದ ಪ್ರಮಾಣ ಹೆಚ್ಚಿಸುವ ಕೇಂದ್ರಸರಕಾರ ಜಾರಿಗೆ ಅಂಗಿಕಾರ ನೀಡಲಾಗಿದೆ. ಅಧಿವೇಶನದಲ್ಲಿ ಈ ನಿಯಮಕ್ಕೆ ಅನುಮೋದನೆ ಸಿಕ್ಕಿದೆ. ದಂಡ ಕಟ್ಟೋದಕ್ಕಿಂತವಾಹನ ಮಾರೋದೇ ವಾಸಿಎಂಬಂತಿದೆ.

ಪ್ರಸ್ತಾಪಿಸಲಾದ ಹೊಸ ಕಾನೂನು ಪ್ರಕಾರ ಲೈಸೆನ್ಸ್ ಇಲ್ಲದೇ ವಾಹನಚಲಾಯಿಸುತ್ತಿದ್ದರೆ ಈ ಹಿಂದೆ ೫೦೦ ರೂ. ಇದ್ದ ದಂಡದ ಮೊತ್ತವನ್ನು ೫೦೦೦ರೂ.ಗೆ ಏರಿಸಲಾಗಿದೆ. ಅತಿ ವೇಗವಾಗಿವಾಹನ ಚಲಾಯಿಸುತ್ತಿದ್ದರೆ ಪ್ರಸ್ತುತ೨೦೦ ರೂ. ದಂಡದ ಮೊತ್ತ ಇದ್ದರೆ ಈಗ೧ ಸಾವಿರದಿಂದ ೨೦೦೦ ರೂ.ಗೆಏರಿಕೆಯಾಗಲಿದೆ.

ಕಾರು ಚಾಲಕರು ಸೀಟ್ ಬೆಲ್ಟ್ ಧರಿಸದೇಇದ್ದಲ್ಲಿ ೧೦೦೦ ರೂ. ದಂಡಕಟ್ಟಬೇಕಾಗುತ್ತದೆ. ಈಗ ಅದರ ಮೊತ್ತ೧೦೦ರೂ. ಮಾತ್ರ. ದ್ವಿಚಕ್ರ ವಾಹನಸವಾರರು ಹೆಲ್ಮೆಟ್ ಧರಿಸದೇ ಇದ್ದಲ್ಲಿಇನ್ನು ಮುಂದೆ ನೂರರ ಬದಲು ೧೦೦೦ರೂ. ಪಾವತಿಸಬೇಕಾಗುತ್ತದೆ. ಅಲ್ಲದೇಮೂರು ತಿಂಗಳು ನಿಮ್ಮ ಲೈಸೆನ್ಸ್ಅಮಾನತುಪಡಿಸಲಾಗುವುದು.

ಹಿಟ್ ಅಂಡ್ ರನ್ ಪ್ರಕರಣದಲ್ಲಿಪರಿಹಾರ ಮೊತ್ತವನ್ನು ೨೫ಸಾವಿರದಿಂದ ೨ ಲಕ್ಷಕ್ಕೆ ಏರಿಸಲಾಗಿದೆ.

ಅಪ್ರಾಪ್ತರು ವಾಹನ ಚಲಾಯಿಸುವಾಗಸಿಕ್ಕಿಬಿದ್ದರೆ ಕನಿಷ್ಠ ೨೫ ಸಾವಿರ ರೂ.ದಂಡ ಹಾಗೂ ೩ ವರ್ಷ ಜೈಲು ಶಿಕ್ಷೆವಿಧಿಸಲಾಗುವುದು. ಅಲ್ಲದೇ ವಾಹನನೋಂದಣಿಯನ್ನುರದ್ದುಗೊಳಿಸಲಾಗುವುದು.

ವಾಹನ ವಿಮೆ ಇಲ್ಲದಿದ್ದಲ್ಲಿ ೧ ಸಾವಿರಬದಲಿಗೆ ೧೦ ಸಾವಿರ ರೂ. ಇನ್ನುಮುಂದೆ ತೆರಬೇಕು.

ದೇಶದಲ್ಲಿ ಪ್ರತಿವರ್ಷ ೫ ಲಕ್ಷಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ ಸುಮಾರು ೧.೫ ಲಕ್ಷ ಜನರುಸಾವಿಗೀಡಾಗುತ್ತಿದ್ದಾರೆ. ಈಅನಾಹುತಗಳನ್ನು ತಡೆಯಲು ಇದುಸೂಕ್ತ ನಿರ್ಧಾರ ಎಂದು ಸರಕಾರಸಮರ್ಥಿಸಿಕೊಂಡಿದೆ.