ದೇಶಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಪತ್ರ ಬರೆದ ಆರೋಪ; ಪ್ರಧಾನಿಗೆ ಪತ್ರ ಬರೆದಿದ್ದ 50 ಗಣ್ಯರ ವಿರುದ್ಧ ದೇಶದ್ರೋಹ ಕೇಸ್ ದಾಖಲು.!

0
335

ನರೇಂದ್ರ ಮೋದಿಯವರಿಗೆ ಪತ್ರ ಬರೆದವರು ದೇಶದ್ರೋಹಿ ಪಟ್ಟ ಕಟ್ಟಿಕೊಂಡಿರುವ ವಿವಾದ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಗುಂಪು ಹತ್ಯೆ ಸಂಬಂಧಪಟ್ಟಂತೆ ಪತ್ರಕರ್ತರು ಮತ್ತು ಚಿತ್ರರಂಗದ ನಟ ನಟಿಯರೂ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಗಣ್ಯರ ವಿರುದ್ಧ ಇದೀಗ ಎಫ್​ಐಆರ್​ ದಾಖಲಾಗಿದೆ. ಇವರೆಲ್ಲ ಬರೆದ ಪತ್ರದಲ್ಲಿ “ದೇಶದಾದ್ಯಂತ ಎಲ್ಲೆಡೆ ಮುಸ್ಲಿಮರು, ದಲಿತರು ಹಾಗೂ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಹಲ್ಲೆ ಪ್ರಕರಣವನ್ನು ಸರ್ಕಾರ ತಕ್ಷಣಕ್ಕೆ ತಡೆಯಬೇಕು. ಭಿನ್ನಾಭಿಪ್ರಾಯವಿಲ್ಲದೆ ಪ್ರಜಾಪ್ರಭುತ್ವ ಇಲ್ಲ. ಜೈ ಶ್ರೀರಾಮ್​ ಎನ್ನುವ ವಾಕ್ಯ ಪ್ರಚೋದನಾಕಾರಿ ಯುದ್ಧದ ಕೂಗಿನಂತೆ ಕೇಳುತ್ತಿದೆ, ಎಂದು ಪತ್ರದಲ್ಲಿ ಬರೆದಿದ್ದರು.

Also read: ಬಂಡೀಪುರ ರಾತ್ರಿ ಸಂಚಾರ ನಿಷೇಧದ ಪ್ರತಿಭಟನೆಗೆ ಕರ್ನಾಟಕ ವಿರುದ್ಧ ಕೊನೆಗೂ ನೈತಿಕ ಬೆಂಬಲ ಸೂಚಿಸಿ ಪ್ರತಿಭಟನೆಗೆ ಕುಳಿತ ರಾಹುಲ್ ಗಾಂಧಿ.!

ಹೌದು ಈ ವರ್ಷದ ಜುಲೈ ತಿಂಗಳಿನಲ್ಲಿ ದೇಶಾದ್ಯಂತ ಹೆಚ್ಚುತ್ತಿರುವ ಕೋಮು ದ್ವೇಷದ ಅಪರಾಧಗಳು ಹಾಗೂ ಗುಂಪು ಹಲ್ಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ 49 ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದರು. ಜು. 23ರಂದು ಕಳುಹಿಸಲಾದ ಈ ಪತ್ರಕ್ಕೆ ಇತಿಹಾಸಕಾರ ರಾಮಚಂದ್ರ ಗುಹಾ, ಸಮಾಜಶಾಸ್ತ್ರ ತಜ್ಞ ಆಶಿಸ್ ನಂದಿ, ಚಿತ್ರ ನಿರ್ದೇಶಕರಾದ ಅಡೂರು ಗೋಪಾಲಕೃಷ್ಣನ್, ಅಪರ್ಣ ಸೇನ್, ಶಾಸ್ತ್ರೀಯ ಸಂಗೀತ ಗಾಯಕಿ ಶುಭಾ ಮುದ್ಗಲ್, ಮಣಿರತ್ನಂ, ಅನುರಾಗ್ ಕಶ್ಯಪ್, ಶ್ಯಾಮ್ ಬೆನಗಲ್, ಅನುಪಮ್ ರಾಯ್, ಕೊಂಕಣ್ ಸೇನ್ ಶರ್ಮಾ ಅವರಂತಹ ಚಿತ್ರರಂಗದ ಪ್ರಮುಖರು ಸೇರಿದಂತೆ ಒಟ್ಟು 49 ಮಂದಿ ಈ ಪತ್ರಕ್ಕೆ ಸಹಿ ಮಾಡಿದ್ದರು.

ಸಾಮೂಹಿಕ ಹಲ್ಲೆ ಹಾಗೂ ಗೋ ರಕ್ಷಣೆಯ ಹೆಸರಿನಲ್ಲಿ ಕಳೆದ 5 ವರ್ಷಗಳಿಂದ ರಾಷ್ಟ್ರಾದಾದ್ಯಂತ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಕಳೆದ ಜುಲೈನಲ್ಲಿ ಖ್ಯಾತ ನಿರ್ದೇಶಕ ಮಣಿರತ್ನಂ, ಅನುರಾಗ್​ ಕಶ್ಯಪ್, ಇತಿಹಾಸ ತಜ್ಞ ರಾಮಚಂದ್ರ ಗುಹಾ​ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನ ಮೋದಿಗೆ ಬಹಿರಂಗ ಪತ್ರ ಬರೆದಿದ್ದರು. ಈ ಪತ್ರದಲ್ಲಿ “ದೇಶದಾದ್ಯಂತ ಎಲ್ಲೆಡೆ ಮುಸ್ಲಿಮರು, ದಲಿತರು ಹಾಗೂ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಹಲ್ಲೆ ಪ್ರಕರಣವನ್ನು ಸರ್ಕಾರ ತಕ್ಷಣಕ್ಕೆ ತಡೆಯಬೇಕು. ಭಿನ್ನಾಭಿಪ್ರಾಯವಿಲ್ಲದೆ ಪ್ರಜಾಪ್ರಭುತ್ವ ಇಲ್ಲ. ಜೈ ಶ್ರೀರಾಮ್​ ಎನ್ನುವ ವಾಕ್ಯ ಪ್ರಚೋದನಾಕಾರಿ ಯುದ್ಧದ ಕೂಗಿನಂತೆ ಕೇಳುತ್ತಿದೆ,” ಎಂದು ಉಲ್ಲೇಖಿಸಿದ್ದರು. ಆದರೆ, ಹೀಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಎಲ್ಲಾ ಗಣ್ಯರ ವಿರುದ್ಧವೂ ಇದೀಗ ದೇಶದ್ರೋಹ, ಸಾರ್ವಜನಿಕರಿಗೆ ತೊಂದರೆ ಹಾಗೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದ ಪ್ರಕರಣವನ್ನು ಹೊರಿಸಲಾಗಿದೆ. ಪ್ರಸ್ತುತ ಈ ಪ್ರಸಂಗ ಇಡೀ ದೇಶದ ಪ್ರಜ್ಞಾವಂತ ಸಮುದಾಯದ ಆಘಾತಕ್ಕೆ ಕಾರಣವಾಗಿದೆ.

Also read: ರಾಜ್ಯ ಸರ್ಕಾರದ ವರದಿಯಲ್ಲಿ ನಷ್ಟದ ಪ್ರಮಾಣವನ್ನು ಬೇಕಾಬಿಟ್ಟಿ ಹೆಚ್ಚಿಸಲಾಗಿದೆ ಎಂದ ಕೇಂದ್ರ ಸರ್ಕಾರ; ಸರ್ಕಾರದ ಮೋದಿ ಸರ್ಕಾರಕ್ಕೆ ರಾಜ್ಯದ ಮೇಲೆ ನಂಬಿಕೆ ಇಲ್ವಾ??

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಆಗಸ್ಟ್​ 20 ರಂದು ವಿಚಾರಣೆ ನಡೆಸಿದ್ದ ಸ್ಥಳೀಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ​ ಸೂರ್ಯ ಕಾಂತ್​ ತಿವಾರಿ, ಸಾಮೂಹಿಕ ಹಲ್ಲೆಗೆ ಸಂಬಂಧಿಸಿ ಪ್ರಧಾನಿಗೆ ಪತ್ರ ಬರೆದಿದ್ದ ಎಲ್ಲಾ ವ್ಯಕ್ತಿಗಳ ವಿರುದ್ಧ ಎಫ್​ಐಆರ್ ದಾಖಲು ಮಾಡುವಂತೆ ಪೊಲೀಸರಿಗೆ ಆದೇಶ ನೀಡಿದ್ದರು. ಇದರ ಅನ್ವಯ ಬಿಹಾರ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದ 50 ಕ್ಕೂ ಹೆಚ್ಚು ವಿಚಾರವಾದಿಗಳ ವಿರುದ್ಧ ಗುರುವಾರ ದಾಖಲು ಮಾಡಿದ್ದಾರೆ.