ರಾಜಸ್ಥಾನ, ದೆಹಲಿ ರಾಜ್ಯದಲ್ಲೂ ಪಟಾಕಿ ನಿಷೇಧಿಸಿ ಸರ್ಕಾರ ಆದೇಶ, ಕದ್ದು ಮುಚ್ಚಿ ಪಟಾಕಿ ಹೊಡೆಯೋ ಹಾಗೂ ಇಲ್ಲ!!

0
156

ದೀಪಾವಳಿ ಹಬ್ಬ ಇನ್ನೊಂದು ವಾರವಿರುವಾಗಲೇ ಪಟಾಕಿ ಮಾರಾಟಗಾರರಿಗೆ ಸರ್ಕಾರ ಶಾಕ್ ನೀಡಿದೆ. ಪಟಾಕಿ ಮಾರಾಟ ಮಾಡಲು ಸಂಗ್ರಹಿಸಿದ್ದವರಿಗೆ ತಲೆನೋವು ತಂದೊಡ್ಡಿದೆ. ರಾಜ್ಯದಲ್ಲಿ ಸಂಪೂರ್ಣವಾಗಿ ಪಟಾಕಿ ನಿಷೇಧಿಸಿ ಆದೇಶ ಹೊರಡಿಸಿದೆ.

ಈ ಕುರಿತಂತೆ ಸಿಎಂ ಯಡಿಯೂರಪ್ಪ ಮಾಹಿತಿ ನೀಡಿದ್ದು, ಈ ಬಾರಿ ದೀಪಾವಳಿಯ ದಿನದಂದು ಪಟಾಕಿ ಹಚ್ಚಿ, ಆಚರಿಸುವ ಬಗ್ಗೆ ನಿಷೇಧ ಹೇರಲಾಗಿದೆ. ದೀಪಾವಳಿಯಂದು ರಾಜ್ಯದಲ್ಲಿ ಪಟಾಕಿ ಹೊಡೆದು ಸಂಭ್ರಮಿಸೋದಕ್ಕೆ ನಿಷೇಧವನ್ನು ವಿಧಿಸಲಾಗಿದೆ. ಪಟಾಕಿಯಿಂದ ಕರೊನಾ ರೋಗಿಗಳಿಗೆ ತೊಂದರೆಯಾಗುತ್ತದೆ, ಸೋಂಕಿನ ಪ್ರಮಾಣ ಅಧಿಕವಾಗುತ್ತದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ಈಗಾಗಲೇ ದೆಹಲಿ, ಪಶ್ಚಿಮಬಂಗಾಳ ರಾಜ್ಯಗಳು ದೀಪಾವಳಿಗೆ ಪಟಾಕಿಯನ್ನು ನಿಷೇಧಿಸಿವೆ. ಇದೀಗ ರಾಜ್ಯ ಸರ್ಕಾರವೂ ಅದೇ ನಿರ್ಧಾರ ಕೈಗೊಂಡಿದೆ.

ಈಗಾಗಲೇ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಕೋವಿಡ್-19 ನಿರ್ವಹಣೆಗೆ ನೇಮಿಸಲಾಗಿರುವ ತಾಂತ್ರಿಕ ಸಮಿತಿಯ ಸದಸ್ಯರು ಈಗಾಗಲೇ ದೀಪಾವಳಿಯಂದು ಪಟಾಕಿ ನಿಷೇಧದ ಕುರಿತಂತೆ ಸಭೆ ನಡೆಸಲಾಗಿದೆ. ಇಂತಹ ಸಮಿತಿಯು ವರದಿ ನೀಡಿದ್ದು, ಕೋವಿಡ್-19 ರೋಗಿಗಳ ಶ್ವಾಸಕೋಶದ ಮೇಲೆ ಪಟಾಕಿಯಿಂದ ಉಂಟಾಗುವ ಮಾಲಿನ್ಯವು ಪರಿಣಾಮ ಬೀರಲಿದೆ. ಚೇತರಿಸಿಕೊಳ್ಳುತ್ತಿರುವಂತ ಕೊರೋನಾ ರೋಗಿಗಳ ಆರೋಗ್ಯದ ಮೇಲೂ ತೊಂದರೆ ಉಂಟು ಮಾಡಲಿದೆ. ಹೀಗಾಗಿ ಪಟಾಕಿ ನಿಷೇಧಿಸುವಂತೆ ವರದಿಯಲ್ಲಿ ತಿಳಿಸಿದೆ.

ಇದರ ಬೆನ್ನಲ್ಲೇ, ಸಿಎಂ ಯಡಿಯೂರಪ್ಪ ನಿರ್ಧಾರ ಪ್ರಕಟಿಸಿದ್ದು, ರಾಜ್ಯದಲ್ಲಿ ಪಟಾಕಿ ನಿಷೇಧ ಮಾಡುವಂತ ಮಹತ್ವ ನಿರ್ಧಾರವನ್ನು ಕೈಗೊಂಡಿದೆ. ದೀಪಾವಳಿಯಂದು ಪಟಾಕಿಯನ್ನು ನಿಷೇಧಿಸುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.