ಆರ್ಡರ್ ಮಾಡಿದ್ದ ಊಟ ಸ್ವಲ್ಪ ತಡವಾಗಿ ತಂದಿದ್ದಕ್ಕೆ ಬೆಂಗಳೂರಿನಲ್ಲಿ ಮಾರಣಾಂತಿಕ ಹಲ್ಲೆ!! ಎತ್ತ ಸಾಗುತ್ತಿದೆ ನಮ್ಮ ಸಮಾಜ!!

0
494

ಬೆಂಗಳೂರಿನಲ್ಲಿ ಮಾನವಿತೆ ಎನ್ನುವುದು ಮರೆಯಾಗುತ್ತಿದೆ ಎನ್ನುವುದಕ್ಕೆ ಹಲವು ಉದಾಹರಣೆಗಳು ದಿನನಿತ್ಯ ಕೇಳಿಬರುತ್ತಿವೆ. ಮೋಸ, ವಂಚನೆ, ಕಳ್ಳತನ, ಸೇರಿದಂತೆ ಅಮಾಯಕರ ಮೇಲೆ ಹಲ್ಲೆಗಳು ಹೆಚ್ಚಾಗಿ ನಡೆಯುತ್ತಿವೆ. ಇದಕ್ಕೆ ಪೊಲೀಸ್ ಅಧಿಕಾರಿಗಳು ಎಷ್ಟೇ ಎಚ್ಚರ ವಹಿಸಿದರು ಕೆಲವೊಂದು ಬುದ್ದಿಗೆಡಿಗಳು ಇಂತಹ ಹೀನಾಯ ಕೃತ್ಯವನ್ನು ನಡೆಸುತ್ತಿದ್ದಾರೆ. ಇಂತಹದೆ ಒಂದು ಕೃತ್ಯ ಶನಿವಾರ ನಡೆದಿದ್ದು ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿದ ಯುವಕರು ಡೆಲಿವರಿ ಬಾಯ್ 20 ನಿಮಿಷ ತಡವಾಗಿ ಬಂದಿದಕ್ಕೆ ಪ್ರಜ್ಞೆ ಹೋಗುವವಾಗೆ ಹಲ್ಲೆ ಮಾಡಿದ್ದಾರೆ.


Also read: NEET ಪರೀಕ್ಷೆ ಮಿಸ್ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; ರಾಜ್ಯಸರ್ಕಾರದ ಮನವಿಗೆ ಮಾನವ ಸಂಪನ್ಮೂಲ ಸಚಿವಾಲಯ ಶೀಘ್ರ ನಿರ್ಧಾರಕ್ಕೆ ಭರವಸೆ..

ಹೌದು ನಗರದ ಡೊಮ್ಲರ್ ಲೇಔಟ್-ನಲ್ಲಿ ಈ ಕೃತ್ಯ ನಡೆಸಲಾಗಿದೆ. ಫುಡ್ ಡೆಲಿವರಿ ಮಾಡುವ 28 ವರ್ಷದ ತಿಲಕ್ ಕುಮಾರ್, ಈ ಹಲ್ಲೆಗೆ ಒಳಗಾದ ಯುವಕನಾಗಿದ್ದಾನೆ. ಇವನ ಮೇಲೆ ಹಲ್ಲೆ ಮಾಡಿದ ಯುವಕರು ಡೊಮ್ಲರ್ ಲೇಔಟ್ ನಲ್ಲಿ ವಾಸಿಸುತ್ತಿದ್ದು, ಕೃಷ್ಣ, ಅಪ್ಪು ಸೇರಿ ಮೂವರು ಯುವಕರು ಹಲ್ಲೆಯಲ್ಲಿ ಆರೋಪಿಗಳಾಗಿದ್ದಾರೆ. ಇವರು 6:45 ಕ್ಕೆ ಫುಡ್ ಆರ್ಡರ್ ಮಾಡಿ ಅಗರ್ವಾಲ್ ಆಸ್ಪತ್ರೆಯ ಬಳಿ ವಿಳಾಸವನ್ನು ಕೊಟ್ಟಿದ್ದಾರೆ. ಟ್ರಾಫಿಕ್ ನಿಂದ ಡೆಲಿವರಿ ಬಾಯ್ ತಿಲಕ್ ಕುಮಾರ್ ತಡವಾಗಿ ಹೋಗಿದ್ದಾನೆ. ಆಗ ಊಟ ತೆಗೆದುಕೊಳ್ಳಲು ಕೃಷ್ಣ ಎನ್ನುವ ಯುವಕ ನಿರಾಕರಿಸಿದ್ದಾನೆ ಆಗ ತಿಲಕ್ ತಿಲಕ್ ಅವರು ವಿಳಂಭದ ಬಗ್ಗೆ ಕ್ಷೆಮೆ ಕೇಳಿ ಊಟವನ್ನು ಕೊಡಲು ಹೋಗಿದ್ದಾರೆ.


Also read: ಚುನಾವಣೆಯ ನಂತರ ಮಂಡ್ಯದಲ್ಲಿ ನಡೆದ ಸಮೀಕ್ಷೆಯ ವರದಿ; ಸುಮಾರು 80 ಸಾವಿರ ಅಂತರದಲ್ಲಿ ಸುಲಮತಾ ಗೆಲುವು ಸಾಧ್ಯತೆ, ಈ ಸಮೀಕ್ಷೆಯೇ ನಿಜವಾಗುತ್ತಾ??

ಬಲವಂತವಾಗಿ ನಮಗೆ ಊಟ ನೀಡುತ್ತಿಯಾ ಎಂದ ಈ ಮೂರು ಆರೋಪಿಗಳು ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಎಷ್ಟೇ ತಪ್ಪಿಸಿಕೊಳಲ್ಲು ಪ್ರಯತ್ನ ಪಟ್ಟರು ಬಿಡದ ಆರೋಪಿಗಳು ಹಿಗ್ಗಾಮುಗ್ಗಾ ಹೊಡೆಯುತ್ತ ಬೆನ್ನಿಗೆ ಹೊಟ್ಟೆಯ ಭಾಗಕ್ಕೆ ಒದಿದ್ದಾರೆ. ಅಷ್ಟೇ ಅಲ್ಲದೆ ಕೆಟ್ಟ ಶಬ್ದಗಳಿಂದ ಬೈದಿದ್ದಾರೆ. ನಂತರ ಆಹಾರವನ್ನು ಕಸಿದುಕೊಂಡು ಕೈ ಬೆರಳನ್ನು ಮುರಿದಿದ್ದಾರೆ. ಹಲ್ಲೆಯಿಂದ ಪ್ರಜ್ಞೆ ತಪ್ಪಿದ ತಿಲಕ್-ನನ್ನು ರೋಡ್ ಬದಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ನಂತರ ರಸ್ತೆಯಲ್ಲಿ ಹೋಗುವ ಜನರು ಆಸ್ಪತ್ರೆಗೆ ದಾಖಲಿಸಿದ್ದಾರೆ.


Also read: ಚೌಕಿದಾರ್ ಚೋರ್ ಹೇಳಿಕೆಗೆ ಸುಪ್ರೀಂ ಕ್ಷಮೆ ಕೇಳಿದರು ಮತ್ತೆ ಮೋದಿಗೆ ಚೋರ್ ಹೇ ಅನ್ನೋದು ಬಿಡಲ್ಲ; ಎಂದ ರಾಹುಲ್ ಮತ್ತೆ ವಿವಾದಕ್ಕೆ ಗುರಿಯಾಗ್ತಾರ??

ಅವರು ಚೇತರಿಸಿಕೊಂಡ ನಂತರ ಕಂಪನಿಗೆ ವಿಷಯ ತಿಳಿಸಿದ ತಿಲಕ್ ಘಟನೆಗೆ ಬಗ್ಗೆ ಹೇಳಿದ್ದಾಗ ಹಲ್ಲೆ ನಡೆಸಿದ ಯುವಕ ಮೇಲೆ ದೂರು ನೀಡಲಾಗಿದೆ. ಹಲ್ಲೆ ನಡೆಸಿದವರನ್ನು ಬಂಧಿಸಿದ ಪೊಲೀಸ-ರು ವಿಚಾರಣೆ ನಡೆಸಿದ ಪೊಲೀಸರು ಈ ಮೂವರು ಡೊಮ್ಲರ್ ಲೇಔಟ್-ನಲ್ಲಿ ವಾಸಿಸುತ್ತಿದ್ದು ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸ್ವಿಗಿ, ಮತ್ತು ಝೊಮಟೋ ಕಂಪನಿಗಳು ತಮ್ಮ ಡೆಲಿವರಿ ಬಾಯ್ಸ್-ಗಳಿಗೆ ಮೆಡಿಕಲ್ ವಿಮೆಯನ್ನು ನೀಡುತ್ತಾರೆ ಅದರಂತೆ ತಿಲಕ್ ಅವರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಇಂತಹ ಘಟನೆಗಳು ನಗರದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ಮಾನವಿತೆಗೆ ಬೆಲೆ ಇಲ್ಲದಂತಾಗಿದೆ.