ಸುಂದರವಾದ ಹಾಗು ಶೈನಿ ಕೂದಲು ನಿಮ್ಮದಾಗಬೇಕೆ ಹಾಗಾದರೆ ಈ ಆಹಾರವನ್ನು ಇಂದಿನಿಂದಲೇ ಸೇವಿಸಿ…

0
1298

ಸುಂದರವಾದ ಕೂದಲು ಯಾರಿಗೆತಾನೆ ಬೇಡ ಹೇಳಿ, ಕೂದಲು ಒಬ್ಬ ಮನುಷ್ಯನ ವಿಶ್ವಾಸವನ್ನು ಹೆಚ್ಚಿಸುತ್ತದೆ. ಆದರೆ ಹೆಚ್ಚುತ್ತಿರುವ ಪ್ರಧೂಷಣೆ, ಒತ್ತಡ ಮತ್ತು ಆಹಾರದಲ್ಲಿನ ಪೌಷ್ಟಿಕಾಂಶಗಳ ಕೊರತೆಯಿಂದ ಕೂದಲು ಉದುರುವಿಕೆ ಮತ್ತು ಇತರೆ ಸಮಸ್ಯೆ ಉಂಟಾಗುತ್ತಿದೆ. ಅದಕ್ಕೆ ಕೂದಲು ಬೆಳೆಯಲು ಈ ಕೆಳಗೆ ತಿಳಿಸಿದ ಆಹಾರವನ್ನು ಸೇವಿಸಿ ರಿಲ್ಯಾಸ್ ಆಗಿರಿ.

1. ಮೊಟ್ಟೆ :

ಮೊಟ್ಟೆಯಲ್ಲಿರುವ ಪ್ರೋಟಿನ್ ಅಂಶವು ಕೂದಲು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೊಟ್ಟೆಯು ಒಂದು ಅತ್ಯಂತ ಹೆಚ್ಚು ಪ್ರೋಟಿನ್ ಹೊಂದಿರುವ ಆಹಾರವಾಗಿದೆ.

2. ಬಸಳೆ ಹಾಗೂ ಇತರೆ ಹಸಿರು ಸೊಪ್ಪುಗಳು :

ಹಸಿರು ಸೊಪ್ಪುಗಳು ಆರೋಗ್ಯಕ್ಕೆ ತುಂಬ ಒಳ್ಳೆಯದು, ಇವುಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶವನ್ನು ಹೊಂದಿರುವುದರಿಂದ ಕೂದಲು ಸೊಂಪಾಗಿ ಬೆಳೆಯಲು ಸಹಕಾರಿಯಾಗುತ್ತವೆ.

3. ದ್ವಿದಳ ಧಾನ್ಯ:

ದ್ವಿದಳ ಧಾನ್ಯಗಳಲ್ಲಿರುವ ಪ್ರೋಟೀನುಗಳು, ಫೋಲಿಕ್ ಆಮ್ಲ ಕೂದಲ ಬುಡಕ್ಕೆ ಅಗತ್ಯವಾದ ಆಮ್ಲಜನಕವನ್ನು ಒದಗಿಸುವ ಮೂಲಕ ಕೂದಲ ದೃಢತೆ ಮತ್ತು ಕಾಂತಿಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಕುಂಬಳಕಾಯಿ ಬೀಜಗಳು ಕೂದಲಿಗೆ ಉತ್ತಮ ಆಹಾರ. ಇದರಲ್ಲಿ ವಿಟಮಿನ್ಗಳು B1, B2, B3, ಮತ್ತು B4 ಅನ್ನು ಒಳಗೊಂಡಿರುತ್ತವೆ, ಇವು ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ.

4. ಸಿಟ್ರಸ್ ಹಣ್ಣುಗಳು :


ಸಿಟ್ರಸ್ ಅಂಶವನ್ನು ಹೊಂದಿರುವ ಕಿತ್ತಳೆ, ನಿಂಬೆ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ವಿಟಮಿನ್ ಸಿ ದೊರೆಯುವಂತೆ ಮಾಡುತ್ತದೆ. ನಿತ್ಯದ ಆಹಾರದಲ್ಲಿ ಇವುಗಳ ಬಳಕೆ ಕೂದಲು ಬೆಳೆಯಲು ಅನುಕೂಲಕರವಾಗಿದೆ.

5. ಚಿಕನ್ :

ಚಿಕನ್-ನಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನು ಇದ್ದು ಸುಲಭವಾಗಿ ತುಂಡಾಗುವ ಕೂದಲಿಗೆ ವಿಶೇಷ ಆರೈಕೆ ನೀಡಿ ಕೂದಲುಗಳು ಸಾಫ್ಟ್ ಆಗುವಂತೆ ಮಾಡುತ್ತವೆ. ತಲೆಯ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳಿರುವ ಕಾರಣ ಕೋಳಿಮಾಂಸ ಉತ್ತಮ ಆಹಾರವಾಗಿದೆ.

6. ಒಮೆಗಾ-3 ಯುಕ್ತ ಬೀಜಗಳು :

ಒಮೆಗಾ-3 ಅಂಶವನ್ನು ಹೊಂದಿರುವ ಆಹಾರಗಳು ಕೂದಲ ಸೊಂಪಾಗಿ, ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ. ಅದರಲ್ಲಿ ವಾಲ್ನಟ್, ಮೀನು, ಬೀಜಗಳಿಂದ ದೊರೆಯುತ್ತದೆ.

7. ಗೆಜ್ಜರಿ :

ಹೆಚ್ಚಿನ ವಿಟಮಿನ್ ಅಂಶ ಹೊಂದಿರುವ ಕ್ಯಾರೇಟ್ ಕೂಡ ಕೂದಲ ಬೆಳವಣಿಗೆಯಲ್ಲಿ ಸಹಕಾರಿ. ಗೆಜ್ಜರಿಯಲ್ಲಿರುವ ಅಗತ್ಯ ವಿಟಮಿನ್ಗಳು ಕೂದಲು ಸೊಂಪಾಗಿ ಬೆಳೆಯಲು ಸಹಕಾರಿಯಾಗುತ್ತವೆ.