ಮಿಣಿ ಮಿಣಿ ಪೌಡರ್, ಕೆಪಿಸಿಸಿ ಹುದ್ದೆಗೆ ಸಂಬಂಧಪಟ್ಟಂತೆ ಹರಡಿದ ಸುದ್ದಿಗೆ ಸ್ಪಷ್ಟತೆ ನೀಡಿದ ಡಿ.ಕೆ. ಶಿವಕುಮಾರ್.!

0
223

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗುವುದು ಪಕ್ಕಾ ಎನ್ನಲಾಗಿತ್ತು, ಆದರೆ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಘೋಷಣೆಗೆ ವಿಳಂಬವಾಗುತ್ತಿದೆ ಇದಕ್ಕೆ ಪಕ್ಷದಲ್ಲಿ ಹಲವರು ಅಡ್ಡಲಾಗಿದ್ದಾರೆ ಎನ್ನಲಾಗಿತ್ತು, ಅದಕ್ಕಾಗಿಯೇ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿ ಸೋನಿಯಾಗಾಂಧಿ ಅವರನ್ನು ಬೇಟಿ ಮಾಡಲು ತೆರಳಿ ನಿರಾಶೆಯಿಂದ ಹಿಂದಿರುಗಿದ್ದಾರೆ ಎನ್ನಲಾಗಿತ್ತು. ಈ ಎಲ್ಲ ಚರ್ಚೆಗೆ ಡಿಕೆಶಿ ಅವರು ಸ್ಪಷ್ಟತೆ ನೀಡಿದ್ದು, ನಾನು ಕೆಪಿಸಿಸಿ ಹುದ್ದೆ ಆಕಾಂಕ್ಷಿಯೇ ಇಲ್ಲದಿರುವಾಗ ನನಗೆ ಬೇರೆಯವರು ಅಡ್ಡಗಾಲು ಹಾಕುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ್ದಾರೆ.

ಹೌದು ಯಾದಗಿರಿಯ ಗೋನಾಳ ದೇವಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿಕೆಶಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಹುದ್ದೆಗೆ ನಾನು ಅರ್ಜಿಯನ್ನೇ ಹಾಕಿಲ್ಲ. ಹೀಗಿರಬೇಕಾದರೆ ಕೆಪಿಸಿಸಿ ಗಾದಿಗೆ ಲಾಬಿ ಮಾಡುವ ಪ್ರಶ್ನೆಯೇ ಇಲ್ಲ, ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೂ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೂ ಸಂಬಂಧವೇ ಇಲ್ಲ. ಅವರು ಯಾವಾಗ ಬೇಕಾದ್ರೂ ಸಂಪುಟ ವಿಸ್ತರಣೆ ಮಾಡಲಿ, ಯಾರನ್ನು ಬೇಕಾದ್ರೂ ಸಿಎಂ ಇಲ್ಲವೆ ಡಿಸಿಎಂ ಮಾಡಲಿ. ಅವರ ಸಂಪುಟ ವಿಸ್ತರಣೆಗೂ ನಮ್ಮ ಪಕ್ಷಕ್ಕೂ ಏನೂ ಸಂಬಂಧವಿಲ್ಲ. ಕೆಪಿಸಿಸಿ ಅಧ್ಯಕ್ಷರ ಹುದ್ದೆ ಖಾಲಿಯೇ ಇಲ್ಲದಿರುವಾಗ, ಹೊಸ ಅಧ್ಯಕ್ಷರ ಆಯ್ಕೆಯ ವಿಳಂಬದ ಪ್ರಶ್ನೆಯೇ ಇಲ್ಲ.

ಸದ್ಯ ದಿನೇಶ್ ಗುಂಡೂರಾವ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಹಾಗೆಯೇ ಸಿದ್ಧರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದು, ಅವರಿಬ್ಬರ ಕೆಳಗೆ ನಾವೆಲ್ಲ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಸಿದ್ದರಾಮಯ್ಯರನ್ನು ನಮ್ಮ ವರಿಷ್ಠರು ನೇಮಿಸಿದ್ದಾರೆ.‌ ಅವರೇ ನಮ್ಮ ನಾಯಕರು, ಅವರ ಕೈ ಕೆಳಗೆ ನಾವು ಕೆಲಸ ಮಾಡುತ್ತೇವೆ ಎಂದರು. ದೇವಾಲಯದ ಬೇಟಿ ಬಗ್ಗೆ ಮಾತನಾಡಿದ ಅವರು ಮನಸ್ಸಿದ್ದಲ್ಲಿ ಮಾರ್ಗವಿದೆ. ಹಾಗೆ ಭಕ್ತಿಯಿದ್ದಲ್ಲಿ ಭಗವಂತ ಇದ್ದಾನೆ.‌ ಹೀಗಾಗಿ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ, ದರ್ಶನ ಪಡೆಯುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಮಿಣಿಮಿಣಿ ಪೌಡರ್ ವಿಚಾರ ಅಪಹಾಸ್ಯ ಮಾಡುವುದು ಸರಿಯಲ್ಲ;

ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿಕೆ ಮಿಣಿ ಮಿಣಿ ಪೌಡರ್ ಬಗ್ಗೆ ಮಾತನಾಡಿ. ಮಿಣಿ ಮಿಣಿಯ ಬಗ್ಗೆ ನನಗೆ ಗೊತ್ತಿಲ್ಲ. ಕುಮಾರಸ್ವಾಮಿಯವರು ನಮ್ಮ ರಾಜ್ಯ ಮಾಜಿ ಮುಖ್ಯಮಂತ್ರಿ. ನಮ್ಮ ಪಕ್ಕದ ಕ್ಷೇತ್ರದವರು. ಅವರ ಕೈ ಕೆಳಗೆ ಕೆಲಸ ಮಾಡಿರೋರು. ಬಿಜೆಪಿ ನಾಯಕರು ಕೆಲವು ಮಾತುಗಳನ್ನಾಡುತ್ತಿದ್ದಾರೆ. ಮಂತ್ರಿಗಳು, ಶಾಸಕರು ಮಾತನಾಡಿದ ಮಾತುಗಳನ್ನು ಹೇಳುತ್ತಿಲ್ಲ. ಕುಮಾರಸ್ವಾಮಿ ಮಿಣಿಮಿಣಿ ಪೌಡರ್ ವಿಚಾರ ಅಪಹಾಸ್ಯ ಮಾಡುವುದು ಸರಿಯಲ್ಲ, ದೇಶಕ್ಕೆ ಸಮಾಜಕ್ಕೆ ಅನುದಾನ, ಅಭಿವೃದ್ಧಿ, ಯುವಕರು, ದ್ವೇಷ ಸಾಧನೆ, ಕೇಸು ಇವುಗಳ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಮಿಣಿ ಮಿಣಿ ಅಂದ್ರೆ ತಪ್ಪಾಗಿ ಬಿಡುತ್ತಾ ಎಂದು ಪ್ರಶ್ನಿಸಿದರು. ಅಲ್ಲದೆ ನನ್ನ ಮುಖನೂ ಮಿಣಿ ಮಿಣಿ ಅಂತಿದೆಪ್ಪಾ. ನಿಮ್ಮ ಮುಖನೂ ಮಿಣಿ ಮಿಣಿ ಅಂತಿದೆ. ಅದಕ್ಕೆ ಏನು ಮಾಡೋಕೆ ಆಗುತ್ತೆ. ಅದೊಂದು ವಿಷಯನಾ ಎಂದು ಮರು ಪ್ರಶ್ನೆ ಹಾಕಿದರು.

Also read: ಗ್ರಾಮೀಣ ಕನ್ನಡದಲ್ಲಿ ಹೊಳೆಯುವ ವಸ್ತುವಿಗೆ ಮಿಣಿಮಿಣಿ ಎನ್ನಲಾಗುತ್ತದೆ. ಮಿಣಿ ಮಿಣಿ ಪೌಡರ್’ ಟ್ರೋಲ್-ಗೆ ಎಚ್‌ಡಿಕೆ ಪ್ರತಿಕ್ರಿಯೆ.!