ಒಂದೇ ತಟ್ಟೆಯಲ್ಲಿ 50 ವರ್ಷಗಳಿಂದ ಊಟ ಮಾಡ್ತೀರೋ ಅಣ್ಣ-ತಮ್ಮನ ಪ್ರೀತಿ ವಾತ್ಸಲ್ಯ ಹೇಗಿದೆ ನೋಡಿ..

0
1854

ಹಿಂದಿನ ಕಾಲದಲ್ಲಿ ಇತ್ತು ಅಣ್ಣ-ತಮ್ಮಂದಿರು ರಾಮ ಲಕ್ಷ್ಮಣರಂತೆ ಇರುವ ಸನ್ನಿವೇಶಗಳು, ಇಗೆನಿದ್ರು ಸಹೋದರರು ಅಂದ್ರೆ ವಿರೋಧಿಗಳೇ ಎನ್ನುವ ರೀತಿಯಲ್ಲಿ ಸಮಾಜ ನಡೆದುಕೊಳ್ಳುತ್ತಿದೆ. ಅದರಲ್ಲಿ ಆಸ್ತಿಗೆ ಸಂಬಂಧಪಟ್ಟ ವಿಷಯದಲ್ಲಿ ಅಂತು ಅಣ್ಣ-ತಮ್ಮಂದಿರ ನಡುವೆ ಹೊಡೆದಾಟಗಳು, ಕೊಲೆಗಳು ಪೊಲೀಸ್ ಕೇಸ್ ಅದು ಇದು ಅಂತ ನೂರಾರು ಘಟನೆಗಳು ನಡೆಯುತ್ತಾನೆ ಇವೆ. ಮೊದಲು ತಂದೆ-ತಾಯಿಗಳು ಇರುವ ವರೆಗೆ ಒಂದು ಲೆಕ್ಕದಲ್ಲಿ ಕೂಡಿ ಬಾಳುತ್ತಾರೆ ನಂತರ ಮದುವೆಯಾಗಿ ಹೆಂಡತಿ ಹಾಡುಗಳು ಕೇಳಿಸಲು ಶುರುವಾದರೆ ಮುಗಿಯಿತು ಅಂದಿನಿಂದ ಸ್ವಂತ ಸಹೋದರ ತನ್ನ ಜೀವನದ ದೊಡ್ಡ ವೈರಿ ಎನ್ನುವ ಹಚ್ಚೆಯನ್ನು ಮನಸ್ಸಿನಲ್ಲಿ ಬರೆದುಕೊಳ್ಳುವ ಸಮಾಜ ಹುಟ್ಟಿಕೊಂಡಿದೆ. ಇಂತಹ ಕಾಲದಲ್ಲಿ ಇಲ್ಲೋಬರು ಸಹೋದರರು 50 ವರ್ಷದಿಂದ ಒಂದೇ ತಟ್ಟೆಯಲ್ಲಿ ಜೊತೆಯಾಗಿ ಊಟ ಮಾಡಿಕೊಂಡು ಬರುತ್ತಿದ್ದಾರೆ.

Also read: ವಿಚಿತ್ರ ಪ್ರೇಮ ಕತೆ; ಮದುವೆಯಾದ ಒಂದೇ ವಾರದಲ್ಲಿ ಮದುವೆ ಮಾಡಿಸಿದ ಪುರೋಹಿತನ ಜೊತೆಯಲ್ಲೇ ನವವಿವಾಹಿತೆ ಪರಾರಿ..

ಹೌದು ಅಣ್ಣ-ತಮ್ಮ ಸ್ನೇಹಿತರಂತೆ ಜೊತೆಯಾಗಿ ಬಾಳುವರು ಸಾವಿರಕ್ಕೆ ಒಬ್ಬರು ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೆಲ್ಲವನ್ನು ಹೇಳುವ ಜನರು ಬರಿ ಸಿನಿಮಾದಲ್ಲಿ, ಇಲ್ಲ ಕತೆಗಳನ್ನು ಓದಿ ಹೇಳುತ್ತಿರುವುದಲ್ಲ ಪ್ರತಿನಿತ್ಯವೂ ಸಮಾಜದಲ್ಲಿ ಸುತ್ತಲು ನಡೆಯಿವ ನಿಜ ಘಟನೆಗಳನ್ನು ನೋಡಿ ಮಾತನಾಡುತ್ತಿದ್ದಾರೆ. ಇಂತಹ ಮನಸ್ಥಿತಿ ಇರುವ ಸಹೋದರರಿಗೆ ಮಾದರಿಯಾಗುವಂತೆ ಸೋದರರಿಬ್ಬರು ಕಳೆದ 50 ವರ್ಷಗಳಿಂದ ಒಂದೇ ತಟ್ಟೆಯಲ್ಲಿ ಜೊತೆಯಾಗಿ ಊಟ ಮಾಡಿಕೊಂಡು ಬರುತ್ತಿದ್ದಾರೆ. ಮೊದಲಿಗೆ ಐದು ಜನ ಸೋದರರು ಜೊತೆಯಾಗಿಯೇ ಊಟ ಮಾಡುತ್ತಿದ್ದರು. ಐವರಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಪ್ರತಿನಿತ್ಯ ಜೊತೆಯಾಗಿ ಊಟ ಮಾಡುತ್ತಿದ್ದಾರೆ.

ಯಾರು ಮಾದರಿಯ ಸೋದರರು?

ಮುಂಬೈ ನಗರದಲ್ಲಿರುವ ವ್ಯಾಪಾರಿಗಳಾದ 70 ವರ್ಷದ ಪ್ರಕಾಶ್ ಚಂದ್ 66 ವರ್ಷದ ಪುಷ್ಪರಾಜ್ ಚಂದ್ ಸೋದರರಿಬ್ಬರು ಜೊತೆಯಾಗಿ ಊಟ ಮಾಡಿಕೊಂಡು ಬರುವ ಪದ್ಧತಿಯನ್ನು ಇಂದಿಗೂ ಜೀವಂತವಾಗಿರಿಸುವ ಮೂಲಕ ಸೋದರ ವಾತ್ಸಲ್ಯಕ್ಕೆ ತಾಜಾ ಉದಾಹರಣೆಯಾಗಿದ್ದಾರೆ. ಅದರಂತೆ ಸಂಬಂಧಗಳಿಗೆ ಜೀವ ತುಂಬುವ ಕೆಲಸವನ್ನು ಮಾಡುತ್ತಾ ಬರುತ್ತಿದ್ದಾರೆ. ಇವರು ಮೂಲತಃ ರಾಜಸ್ಥಾನದ ಬಿಸಲಾಪುರದ ನಿವಾಸಿಯಾದ ರಾಮ್‍ಲಾಲ್ ಜೈನ್ 1962ರಲ್ಲಿ ವ್ಯಾಪಾರ ನಿಮಿತ್ತ ಮುಂಬೈ ನಗರಕ್ಕೆ ಆಗಮಿಸಿದ್ದರು. ಸಣ್ಣ-ಪುಟ್ಟ ಕೆಲಸದ ಜೊತೆಗೆ ತಮ್ಮದೇ ಸ್ವಂತ ಟ್ರಾನ್ಸ್ ಪೋರ್ಟ್ ಸಂಸ್ಥೆ ಆರಂಭಿಸಿದ್ದರು.

Also read: ಪತ್ನಿ ಮೇಲೆ ಅನುಮಾನಗೊಂಡ ಟೆಕ್ಕಿ ಮನೆಯಲ್ಲಿ ಬರೋಬರಿ 22 ಗುಪ್ತ ಕ್ಯಾಮೆರಾ ಇಟ್ಟಾಗ ತಿಳಿಯಿತು ಪತ್ನಿಯ ಅಸಲಿ ಹೊಡೆತ..

ಇವರ ಒಳ್ಳೆತನದಿಂದ ವ್ಯವಹಾರದಲ್ಲಿ ಬೆಳವಣಿಗೆ ಆಗುತ್ತಿದ್ದಂತೆ ಸೋದರರಿಬ್ಬರನ್ನು ಮುಂಬೈಗೆ ಕರೆಸಿಕೊಳ್ಳುತ್ತಾರೆ. ಹಾಗೆ ರಾಮ್‍ಲಾಲ್ ತಮ್ಮ ಕೊನೆಯ ಸೋದರರನ್ನು ಕರೆಸಿಕೊಳ್ಳುತ್ತಾರೆ. ಹೀಗೆ ಸೋದರರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಅಂದಿನಿಂದ ಐವರು ಸದಸ್ಯರು ಪ್ರತಿನಿತ್ಯ ಜೊತೆಯಾಗಿ ಒಂದೇ ತಟ್ಟೆಯಲ್ಲಿ ಊಟ ಮಾಡೋದನ್ನು ರೂಡಿಸಿಕೊಳ್ಳುತ್ತಾರೆ. ಮೂವರು ಸೋದರರು ಸಾವನ್ನಪ್ಪಿದ ಬಳಿಕವೂ ಪ್ರಕಾಶ್ ಮತ್ತು ಪುಷ್ಪರಾಜ್ ಊಟದ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಈ ಸಹೋದರರಿಬ್ಬರ ಪ್ರೀತಿಯನ್ನು ಕುರಿತು ಮಾತನಾಡಿದ ಸಹೋದರರು ಮಧ್ಯಾಹ್ನದ ಊಟವನ್ನು ಪ್ರಕಾಶ್ ಚಂದ್ ಮನೆಯಲ್ಲಿ, ರಾತ್ರಿ ಪುಷ್ಪರಾಜ್ ಚಂದ್ ನಿವಾಸದಲ್ಲಿ ಊಟ ಮಾಡುತ್ತೇವೆ. ಕೆಲಸದ ನಿಮಿತ್ತ ಇಬ್ಬರಲ್ಲಿ ಒಬ್ಬರು ಬರೋದು ತಡವಾದ್ರೆ ಒಬ್ಬರಿಗೊಬ್ಬರು ಕಾದು ಕೊನೆಗೆ ಜೊತೆಯಾಗಿಯೇ ಆಹಾರ ಸೇವಿಸುತ್ತೇವೆ ಎಂದು ಹೇಳಿದ್ದಾರೆ. ಅದರಲ್ಲಿ ಪುಷ್ಪರಾಜ್ ಕಳೆದ 9 ವರ್ಷಗಳಿಂದ ವಾರದಲ್ಲಿ ಕೆಲವು ದಿನ ಉಪವಾಸ ಕೈಗೊಳ್ಳುತ್ತಾರೆ. ಉಪವಾಸದ ಮರುದಿನ ಸೋದರ ಬರೋವರೆಗೂ ಊಟ ಮಾಡಲ್ಲ ಎಂದು ಇಬ್ಬರು ಮನೆಯವರು ತಿಳಿಸಿದ್ದಾರೆ.