ಗಾಳಿ ಆಂಜನೇಯ ಸ್ವಾಮಿಯ ಮಹಿಮೆ ತಿಳಿದರೆ ನೀವು ಅಲ್ಲಿಗೊಮ್ಮೆ ಭೇಟಿ ಕೊಡುವುದು ಖಚಿತ..

0
2690

ಗಾಳಿ ಆಂಜನೇಯಸ್ವಾಮಿ ಎಂದರೆ ಬೆಂಗಳೂರಿಗರಿಗೆ ಅಷ್ಟೇ ಅಲ್ಲ ದೇಶದ ನಾನಾ ಮೂಲೆಗಳಲ್ಲಿರೊ ಭಕ್ತರಿಗೂ ಪರಿಚಿತ.. ಯಾರಿಗಾದರೂ ಮಾನಸಿಕ ತೊಂದರೆ ಇದ್ದಲ್ಲಿ, ಗಾಳಿ ಚೇಷ್ಟೆಗಳು ಇದ್ದಲ್ಲಿ ಅಥವಾ ಯಾವುದೇ ರೀತಿಯ ದೃಷ್ಟಿ ಆಗಿದ್ದಲ್ಲಿ ಗಾಳಿ ಆಂಜನೇಯನ ಮೊರೆ ಹೋಗುವುದು ಸರ್ವೇ ಸಾಮಾನ್ಯ.. ಈ ಸ್ವಾಮಿ ಅವೆಲ್ಲವನ್ನು ದೂರಾಗಿಸೊ ಒಂದು ಶಕ್ತಿಯೇ ಸರಿ..

ಇದು ಇರುವುದಾದರೂ ಎಲ್ಲಿ?

ಇದು ಬೇರೆಲ್ಲೂ ಅಲ್ಲ ನಮ್ಮ ರಾಜಧಾನಿ ಬೆಂಗಳೂರಿನಲ್ಲೆ ಇರುವುದು.. ಬೆಂಗಳೂರು ಮೈಸೂರು ರಸ್ತೆಯಲ್ಲಿ ಈ ದೇವಾಲಯವಿದೆ..
ಆಂಜನೇಯ ವಾಯುವಿನ ಮಗನಾದ್ದರಿಂದ ಇಲ್ಲಿ ಇವನಿಗೆ ಗಾಳಿ ಆಂಜನೇಯ ಎಂದು ಹೆಸರು.. ಅಂಜನಾದೇವಿಯ ಮಗನಾದ ಆಂಜನೇಯನನ್ನು ಇಲ್ಲಿ ಶಕ್ತಿಯ ದೇವತೆ ಎಂದು ಪೂಜಿಸುವರು..

ದೇವಸ್ಥಾನ ನಿರ್ಮಾಣ:

ಈ ದೇವಸ್ಥಾನವನ್ನು ಮೂಲತಃ ಚನ್ನಪಟ್ಟಣದವರಾದ ವ್ಯಾಸರಾಯರು ಕ್ರಿ.ಶ. 1425 ರಲ್ಲಿ ಕಟ್ಟಿಸಿದರೆಂದು ಹೇಳುತ್ತಾರೆ.. ಈ ದೇವಸ್ಥಾನದಲ್ಲಿ ಎತ್ತರವಾದ ಗೋಪುರವೊಂದು ಇದೆ.. ಈ ಗೋಪುರದಲ್ಲಿ ದೇವತೆಗಳು ಹಾಗು ಮುದ್ರೆಗಳನ್ನು ಚಿತ್ರಿಸಿದ್ದಾರೆ.. ಇದು ಒಂದು ವಿಶಾಲವಾದ ಗುಡಿಯಾಗಿದೆ.. ಆಂಜನೇಯನ ಗುಡಿ ಎಂದ ಮೇಲೆ ಅಲ್ಲಿ ರಾಮನ ಪೂಜೆ ಆಗಲೇ ಬೇಕು.. ಇಲ್ಲೂ ಕೂಡ ಸೀತಾ ಲಕ್ಷ್ಮಣ ಸಹಿತನಾದ ಕಲ್ಯಾಣರಾಮನ ಪೂಜೆ ನಡೆಯುತ್ತದೆ.. ಹಾಗೆಯೇ ಇಲ್ಲಿ ನವಗ್ರಹ ಗುಡಿಯು ಇದೆ.. 120 ವರ್ಷದಿಂದ ಪ್ರತಿ ವರ್ಷ ಎರಡು ಬಾರಿ ಬ್ರಹ್ಮೋತ್ಸವ ನಡೆಯುತ್ತದೆ..

ದೇವಸ್ಥಾನದ ಇತಿಹಾಸ:

ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಹಳ್ಳಿಗಳಿದ್ದವು, ಬೆಂಗಳೂರು ನಗರ ನಿರ್ಮಾಣಕ್ಕೂ ಮುನ್ನ ಇಲ್ಲಿ ದೇವಾಲಯವಿತ್ತು ಎಂಬುದನ್ನು ಅಲ್ಲಿನ ಸ್ಥಳೀಯರು ಹೇಳುತ್ತಾರೆ.. ಈ ಸ್ಥಳವನ್ನು ಬ್ಯಾಟರಾಯನಪುರ ಎಂದು ಕರೆಯುತ್ತಾರೆ ಈ ಹೆಸರು ಬರಲು ಇಲ್ಲಿರುವ ರುಕ್ಮಿಣಿ, ಸತ್ಯಭಾಮಾ ಸಮೇತನಾದ ವೇಣುಗೋಪಾಲಸ್ವಾಮಿ ಕಾರಣವಂತೆ..

ದೇವಾಲಯದ ಗರ್ಭಗುಡಿಯಲ್ಲಿ ಒಂದು ಕೈಯನ್ನು ಮೇಲೆತ್ತಿ ಅಭಯ ನೀಡುತ್ತಿರುವ ಮತ್ತು ಮತ್ತೊಂದು ಕೈಯಲ್ಲಿ ಗದೆ ಹಿಡಿದ ಎದುರು ಮುಖದ ಆಂಜನೇಯ ಕಾಣಸಿಗುತ್ತದೆ.

ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಮಕ್ಕಳು ಚಂಡಿ ಹಿಡಿದರೆ ದೇವಸ್ಥಾನಕ್ಕೆ ಭೇಟಿ ನೀಡಿ ತಾಯತ ಹಾಕಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಗೊಂದಲ ಹಾಗೂ ತೊಂದರೆಗಳು ಇಲ್ಲವಾಗುತ್ತದೆ.. ಈ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಗಾಳಿ ಹಿಡಿಯುವುದು ಅಂದರೆ ಭೂತ ಪಿಶಾಚಿಗಳ ಮುಷ್ಟಿಗೆ ಒಳಪಡುವುದರಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ..

ನಮ್ಮ ಮನೆ ಅಥವಾ ವಾಹನಗಳ ಮೇಲೆ ಬೀಳುವ ದೃಷ್ಟಿಯನ್ನು ಗಾಳಿ ಆಂಜನೇಯ ಸ್ವಾಮಿ ದೂರ ಮಾಡುತ್ತಾನೆಂಬ ನಂಬಿಕೆಯಿಂದಲೇ ದಿನ ನಿತ್ಯ ಇಲ್ಲಿನ ಜನ ನೂರಾರು ಸಂಖ್ಯೆಯಲ್ಲಿ ಬಂದು ಪೂಜೆ ಮಾಡಿಸುತ್ತಾರೆ. ಇಲ್ಲಿ ಕೊಡುವ ತಾಯತ ತುಂಬಾ ಶಕ್ತಿಯುತವಾದದ್ದು ಎಂದು ಹೇಳುತ್ತಾರೆ.. ಕಷ್ಟ ಪರಿಹಾರಕ್ಕಾಗಿ ಇಲ್ಲಿ ಹರಕೆ ಕಟ್ಟಿಕೊಳ್ಳುವುದು ಉಂಟು..

ಈ ದೇವಸ್ಥಾನಕ್ಕೆ ಹೋಗುವುದಾದರೂ ಹೇಗೆ??
ಇದು ಇರುವುದು ಮೈಸೂರು ರಸ್ತೆ ಬಾಪೂಜಿ ನಗರ ಅಥವಾ ಬ್ಯಾಟರಾಯನಪುರ.. ಬೆಂಗಳೂರಿನಲ್ಲಿ..
ಬೆಂಗಳೂರಿನ ಮೆಜಸ್ಟಿಕ್ ನಿಂದ ಇಲ್ಲಿಗಿರುವ ದೂರ ಕೇವಲ 6.5 ಕಿ.ಮೀ..

ಬೆಂಗಳೂರಿಗರಾಗಿದ್ದರೆ ಹೋಗಿ ಒಮ್ಮೆ ಭೇಟಿ ಕೊಡಿ.. ಶುಭವಾಗಲಿ