5 ಅಡಿ ಎತ್ತರದ ಗಣೇಶ್ ಮೂರ್ತಿ ಮಾತ್ರ ಅವಕಾಶ; ಮೂರ್ತಿ ಪ್ರತಿಷ್ಠಾಪಿಸಲು ನಿಯಮ ಪಾಲಿಸಿದ್ರೆ ಮಾತ್ರ ಅನುಮತಿ, ಏನೆಲ್ಲಾ ನಿಯಮ??

0
337

ಕೆಲವೇ ದಿನಗಳಲ್ಲಿ ಗಣೇಶ್ ಚತುರ್ಥಿ ಸಮೀಪಿಸುತ್ತಿದ್ದು, ಈಗಾಗಲೇ ಹಲವು ತರಹದ ಮೂರ್ತಿಗಳ ತಯಾರಿಕೆ, ಮಾರಾಟಗಳು ನಡೆಯುತ್ತಿವೆ. ಇದು ದೇಶದೆಲ್ಲಡೆ ಒಂದು ರೀತಿಯ ಸಂಭ್ರಮವೆ ಆಗಿದೆ. ಆದರೆ ಇತ್ತೀಚಿಗೆ ಗಣೇಶ್ ಮೂರ್ತಿಗೆ ಸಂಬಂಧಪಟ್ಟಂತೆ ಹಲವು ನಿಯಮಗಳನ್ನು ಜಾರಿ ಮಾಡಿದ್ದು, ಈ ವರ್ಷದಿಂದ ಕಡ್ಡಾಯವಾಗಿ ನಿಯಮ ಪಾಲನೆ ಮಾಡಲೇಬೇಕು ಎಂದು ಈಗಾಗಲೇ ಆದೇಶ ಹೊರಡಿಸಿದೆ. ಅದರಂತೆ ಮೂರ್ತಿಯನ್ನು ಒಂದು ತಿಂಗಳು ಇರಿಸಲು ನಿರ್ಬಂಧಿಸಿದ್ದು. ಗರಿಷ್ಠ 5 ಅಡಿ ಎತ್ತರ ಸೀಮೀತಗೊಳಿಸುವುದು ಸೇರಿದಂತೆ ಹಲವು ನಿಯಮಗಳನ್ನು ಪಾಲಿಸಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ.

5 ಅಡಿ ಎತ್ತರದ ವರೆಗೆ ಅನುಮತಿ?

ಹೌದು ಗಣೇಶ್ ಮೂರ್ತಿಗಳನ್ನು ಪಿಓಪಿ- ಯಲ್ಲಿ ತಯಾರಿಸಿ ಸಾಕಷ್ಟು ಎತ್ತರದವರೆಗೆ ಇರಿಸಲಾಗಿತ್ತು. ಆದರೆ ಕಳೆದ ವರ್ಷದಿಂದ ಇದಕ್ಕೆ ನಿರ್ಬಂಧ ಹೇರಿದ್ದು. 5 ಅಡಿ ಎತ್ತರದ ಗಣಪತಿಯನ್ನು ಕೂರಿಸಬೇಕು ಎಂದು ಸೂಚಸಿದ್ದು, ”ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಬಣ್ಣ ರಹಿತ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಬೇಕು. ಬಳಿಕ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳಗಳಲ್ಲಿಯೇ ವಿಸರ್ಜಿಸಬೇಕು. ವಿಸರ್ಜನೆ ವೇಳೆ ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣಗಳನ್ನು ಪ್ರತ್ಯೇಕಿಸಬೇಕು ಎಂದು ಸೂಚಿಸಿದೆ.

ತಿಂಗಳವರೆಗೆ ಕೂರಿಸಲು ಅನುಮತಿ ಇಲ್ಲ?

ನಗರದಲ್ಲಿ ತಿಂಗಳವರೆಗೆ ಮೂರ್ತಿಯನ್ನು ಕೂರಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ, ಎನ್ನುವ ಆರೋಪಗಳು ಕೇಳಿಬರುತ್ತಿದ್ದವು, ಹಬ್ಬದ ದಿನ ಮಾತ್ರ ಸೌಂಡ್ ಗಲಾಟೆ ಮಾಡಿದರೆ ಅದಕ್ಕೆ ಯಾವುದೇ ದೂರು ಇರುವುದಿಲ್ಲ ಆದರೆ ತಿಂಗಳವರೆಗೆ ಇರಿಸಿ ಪ್ರತಿನಿತ್ಯವೂ ತೊಂದರೆ ಮಾಡುತ್ತಾರೆ. ಅದಕ್ಕಾಗಿ ಯಾವುದೇ ಕಾರಣಕ್ಕೂ ಮೂರ್ತಿಗಳನ್ನು ಒಂದು ತಿಂಗಳ ಕಾಲ ಕೂರಿಸುವುದಕ್ಕೆ ಅವಕಾಶ ನೀಡಬಾರದು. ಒಂದು ಪ್ರದೇಶದಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳನ್ನು ವಿಲೇವಾರಿ ಮಾಡಲು ನಿರ್ದಿಷ್ಟವಾದ ಜಲಮೂಲಗಳನ್ನು ನಿಗದಿಪಡಿಸಬೇಕು. ಹಾಗೆಯೇ ಈ ಕುರಿತು ಜನರಿಗೆ ಮಾಹಿತಿ ನೀಡಲು ಪ್ರಕಟಣೆ ಹೊರಡಿಸಬೇಕು,” ಎಂದು ಅವರು ಮಂಡಳಿ ಸಭೆಯಲ್ಲಿ ಸೂಚಿಸಿದ್ದಾರೆ.

ಮೂರ್ತಿ ಕೂರಿಸಲು ಅನುಮತಿ ಕಡ್ಡಾಯ?

ಗಣೇಶ್ ಮೂರ್ತಿ ಕೂರಿಸುವ ಮಂಡಳಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸುವಾಗ ಪ್ರತಿ ಗಣೇಶ ಸಮಿತಿಯು ಕಡ್ಡಾಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ (ಇತರೆಡೆ ಸ್ಥಳೀಯ ನಗರಾಡಳಿತ) ಹಾಗೂ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆದಿರಬೇಕು. ಈ ನಡುವೆ ಯಾವುದೇ ಅಹಿತಕರ ಘಟನೆಗಳು ನಡೆದರು ಅದಕ್ಕೆ ಸಂಘ, ಸಂಸ್ಥೆಗಳೇ ಕಾರಣವಾಗುತ್ತೇವೆ ಎಂದು ಹೇಳಿದೆ.

ಗುರುತಿಸಿದ ಸ್ಥಳದಲ್ಲಿ ಮಾತ್ರ ವಿಸರ್ಜನೆ?

ನಗರದಲ್ಲಿ ಪ್ರತಿ ವಾರ್ಡ್‌ಗಳಲ್ಲಿ ಕೆರೆ, ಕಲ್ಯಾಣಿಗಳನ್ನು ಗುರುತಿಸಿ ಅಲ್ಲಿಯೇ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಬೇಕು. ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ವಿಸರ್ಜಿಸದೆ ಉಳಿದಿರುವ ಪಿಒಪಿ ಅಥವಾ ಬಣ್ಣದ ಮೂರ್ತಿಗಳನ್ನು ಪರಿಶೀಲಿಸಿ ವಶಕ್ಕೆ ಪಡೆಯಬೇಕು. ಈ ವಸ್ತುಗಳನ್ನು ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿ ಒಂದೇ ಕಡೆ ಭೂಭರ್ತಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಂಡಳಿ ತಿಳಿಸಿದೆ. ಈ ಹಿಂದೆ ಮಂಡಳಿಯು ಹಸಿರು ನ್ಯಾಯ ಮಂಡಳಿಯ ನಿರ್ದೇಶನದಂತೆ ಪಿಒಪಿ ಮೂರ್ತಿ ವಿಸರ್ಜಿಸಿದ ಜಲಮೂಲಗಳ ಮಾದರಿಯನ್ನು ಪರೀಕ್ಷಿಸಿತ್ತು. ಅದರಲ್ಲಿ ಮೂರ್ತಿಗಳ ವಿಸರ್ಜನೆಯಿಂದಾಗಿ ಜಲಮಾಲಿನ್ಯವಾಗುತ್ತಿದೆ ಎಂಬ ಅಂಶ ದೃಢಪಟ್ಟಿತ್ತು. ಪಿಒಪಿ ಮೂರ್ತಿಯಿಂದ ಜಲಮೂಲಗಳು ಮಾಲಿನ್ಯಗೊಂಡು ಸಾರ್ವಜನಿಕರ ಆರೋಗ್ಯ ಹಾಳಾಗುವುದರಿಂದ ಇದನ್ನು ತಡೆಯಲು ಪ್ರತಿ ಸ್ಥಳೀಯ ಸಂಸ್ಥೆಗೆ ನಿರ್ದೇಶನ ನೀಡಲಾಗಿತ್ತು. ಈ ಬಾರಿಯೂ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮಂಡಳಿ ತಿಳಿಸಿದೆ.