ನಮ್ಮ ರಾಜ್ಯಸರ್ಕಾರ ಹಿಂದೂ ವಿರೋಧಿನಾ..?ಗಣೇಶನ ಹಬ್ಬಕೆ ಯಾಕೆ ಇಷ್ಟೊಂದು ನಿರ್ಬಂಧನಗಳು..!

0
1030

ಹೌದು ನಮ್ಮ ರಾಜ್ಯಸರ್ಕಾರ ಯಾಕೋ ಇತ್ತೀಚಿನ ದಿನಗಳಲ್ಲಿ ತುಂಬ ವಿಭಿನ್ನವಾಗಿ ವರ್ತಿಸುತ್ತಿದ್ದೆ. ಒಂದು ಧರ್ಮಕ್ಕೆ ಒಂದು ನ್ಯಾಯ ಮತ್ತೊಂದು ವರ್ಗಕ್ಕೆ ಮತ್ತೊಂದು ನ್ಯಾಯ ಎಂಬಂತೆ ವರ್ತನೆ ಮಾಡುತಿದ್ದೆ. ಇದಕ್ಕೆ ಇಲ್ಲಿದೆ ನೋಡಿ ನಮ್ಮ ರಾಜ್ಯಸರಕಾರ ಏನು ಮಾಡಿದೆ ಅನ್ನೋದಕ್ಕೆ.

ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಗಣೇಶನ ಹಬ್ಬ ಅಂದ್ರೆ ತುಂಬ ಸಡಗರ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಇಂತಹ ಸಮಯದಲ್ಲಿ ಗಣೇಶನ ಹಬ್ಬ ಮಾಡುವ ಅಲ್ಲಿ ಡಿಜೆ ಮತ್ತು ಅದ್ದೂರಿ ಮೆರವಣಿಗೆ ಇರಲೇಬೇಕು ಇಲ್ಲ ಅಂದ್ರೆ ಅದು ಹಬ್ಬದ ಹಾಗೆ ಕಾಣಿಸುವುದಿಲ್ಲ. ಆದ್ರೆ ನಮ್ಮ ರಾಜ್ಯ ಸರ್ಕಾರ ಗಣೇಶನ ಹಬ್ಬಕೆ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದೆ.

ಡಿಜೆ ಹಾಕುವಂತಿಲ್ಲ ,ಮತ್ತು ಗಣೇಶನ ಮೆರವಣಿಗೆ ಮಾಡಬೇಕು ಅಂದ್ರೆ ೧೦ ಲಕ್ಷ ಬಾಂಡ್ ನೀಡಬೇಕು .
ಮತ್ತೆ ತುಂಬ ಜನಗಳನ್ನು ಸೇರಿಸುವಾಗಿಲ್ಲ ,ದೊಡದಾಗಿ ಶಾಮಿಯಾನ ಹಾಕುವಾಗಿಲ್ಲ ಮತ್ತು ಇನ್ನು ಮುಖ್ಯವಾಗಿ ಪ್ರಾರ್ಥನಾ ಮಂದಿರ (ಚರ್ಚ್ ,ಮಸೀದಿ ) ಇರುವ ರಸ್ತೆಗಳಲ್ಲಿ ಮೆರವಣಿಗೆ ಹೋಗಬಾರದು ಅನ್ನೋ ನಿಯಮಗಳನ್ನು ಹೊರಡಿಸಲಾಗಿದೆ.

ಈ ರೀತಿಯಾಗಿ ರಾಜ್ಯಸರ್ಕಾರ ಹೊರಡಿಸಿರುವ ನಿಯಮಗಳಿಂದ ಗಣೇಶನ ಹಬ್ಬಕ್ಕೆ ತುಂಬ ತೊಂದ್ರೆ ನೀಡಲಾಗಿದೆ ಅನ್ನೋದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಮತ್ತು ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಶಾಮಿಯಾನ ಒಕ್ಕೂಟ ಸಮಿತಿ ಒಂದು ನಿರ್ಧಾರಕ್ಕೆ ಬಂದಿದೆ. ಆಗಸ್ಟ್ ೧೫ ರಂದು ಯಾವುದೇ ದ್ವನಿ ವರ್ಧಕ ಮತ್ತು ಶಾಮಿಯಾನವನ್ನು ಹಾಕುವುದಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇನ್ನು ಚಿತ್ರದುರ್ಗದಲ್ಲಿ ಪ್ರತಿಭಟನೆ ಮಾಡಿ ಶಾಮಿಯಾನ ಸಂಘದ ಸದಸ್ಯರು ಮಾತನಾಡಿ ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಆಗಸ್ಟ್ ೧೨ಕ್ಕೆ ಚಿತ್ರದುರ್ಗದಲ್ಲಿ ನಡೆಯಲಿರುವ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಶಾಮಿಯಾನ ಮತ್ತು ದ್ವನಿ ವರ್ಧಕಗಳನ್ನು ಹಾಕುವುದಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.