ಗ್ಯಾಸ್ ಸಿಲಿಂಡರ್ ಎಕ್ಸ್ಪೈರಿ ದಿನಾಂಕವನ್ನು ಗುರುತಿಸುವುದು ಹೇಗೆ?

0
3885

ಅಡುಗೆ ತಯಾರಿಸಲು ಒಂದು ಕಾಲದಲ್ಲಿ ಕಟ್ಟಿಗೆ ಒಲೆಗಳನ್ನು ಉಪಯೋಗಿಸುತ್ತಿದ್ದರು…. ಈಗ ಕಾಲ ಬದಲಾಗಿದೆ. ಕುಗ್ರಾಮಗಳಲ್ಲೂ ಸಹ ಬಹಳ ಸುಲಭವಾಗಿ ಅಡುಗೆ ಅನಿಲ ಸಿಲಿಂಡರ್ ಗಳನ್ನು ಉಪಯೋಗಿಸಿ ಅಡುಗೆ ಮಾಡುವುದನ್ನು ನಮ್ಮ ಗ್ರಾಮೀಣ ಪ್ರಜೆಗಳು ಕಲಿತುಕೊಂಡಿದ್ದಾರೆ. ನಾವು ಉಪಯೋಗಿಸುವ ಬಹಳಷ್ಟು ವಸ್ತುಗಳಿಗೆ ಎಕ್ಸ್ಪೈರಿ ದಿನಾಂಕ ವಿರುವ ಹಾಗೆಯೇ ಗ್ಯಾಸ್ ಸಿಲಿಂಡರ್ ಗಳಿಗೂ ಸಹ ಎಕ್ಸ್ಪೈರಿ ದಿನಾಂಕ ಇರುತ್ತದೆ. ಈ ವಿಷಯ ಬಹಳಷ್ಟು ಜನರಿಗೆ ತಿಳಿದಿಲ್ಲ. ಹಾಗಾದರೆ, ಗ್ಯಾಸ್ ಸಿಲಿಂಡರ್ ಎಕ್ಸ್ಪೈರಿ ದಿನಾಂಕವನ್ನು ಗುರುತಿಸುವುದು ಹೇಗೆಂದು ತಿಳಿಯೋಣ ಬನ್ನಿ…

ಚಿತ್ರದಲ್ಲಿ ತೋರಿಸಿರುವ ಹಾಗೆ ಅಡುಗೆ ಅನಿಲ ಸಿಲಿಂಡರ್ ಮೇಲೆ A,B,C,D ಮತ್ತು ಅವುಗಳ ಸಂಯುಕ್ತಗಳೊಂದಿಗೆ ಕೊನೆಯಲ್ಲಿ ಯಾವುದಾರೊಂದು ಸಂಖ್ಯೆ ಇರುವ ಹಾಗೆ ಗುರುತಿರುತ್ತದೆ. ಆದರೆ,ಆ ಗುರುತುಗಳಲ್ಲಿ ಇರುವ A,B,C,D ಗಳು ತಿಂಗಳುಗಳನ್ನು ಸೂಚಿಸುತ್ತವೆ. ಉದಾ: A ಅಂದರೆ ಜನವರಿಯಿಂದ ಮಾರ್ಚ್ ವರೆಗೆ ಎಂದರ್ಥ. ಅದೇ ರೀತಿ B ಅಂದರೆ ಏಪ್ರಿಲ್ ನಿಂದ ಜೂನ್ ವರೆಗೆ, C ಅಂದರೆ ಜುಲೈ ಯಿಂದ ಸೆಪ್ಟೆಂಬರ್ ವರೆಗೆ, D ಅಂದರೆ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಎಂದು ತಿಳಿಯಬೇಕು. ಈರೀತಿ ಸಿಲಿಂಡರ್ ಮೇಲಿರುವ ಅಕ್ಷರಗಳನ್ನು ಆಯಾ ತಿಂಗಳುಗಳಿಗೆ ಸಮೀಕರಿಸಿ ಓದಿಕೊಳ್ಳಬೇಕು.

ಆದರೆ, ಈ ಅಕ್ಷರಗಳ ಪಕ್ಕದಲ್ಲಿರುವ ಸಂಖ್ಯೆಗಳು ಮಾತ್ರ ವರುಷವನ್ನು ಸೂಚಿಸುತ್ತದೆ. ಉದಾ ;B. 25 ಎಂದರೆ, ಆ ಸಿಲಿಂಡರನ್ನು ಜೂನ್ 2025 ವರೆಗೂ ಉಪಯೋಗಿಸ ಬಹುದೆಂದು ಅರ್ಥ. ಅಲ್ಲಿಯ ವರೆಗೂ ಆ ಸಿಲಿಂಡರನ್ನು ಯಾವುದೇ ಹೆದರಿಕೆಯಿಲ್ಲದೆ ಉಪಯೋಗಿಸಬಹುದು. ಆ ದಿನಾಂಕ ಮುಗಿದನಂತರ ಅದನ್ನು ಉಪಯೋಗಿಸಬಾರದು. ಒಂದು ವೇಳೆ ಹಾಗೆ ಮಾಡಿದರೆ, ಅಧಿಕ ಪ್ರಮಾಣದಲ್ಲಿರುವ ಒತ್ತಡದಿಂದ ಆ ಸಿಲಿಂಡರ್ ಒಡೆದುಹೋಗುವ ಅವಕಾಶವಿರುತ್ತದೆ. ಆದುದರಿಂದ ಇನ್ನು ಮುಂದೆ ನೀವು ಗ್ಯಾಸ್ ಸಿಲಿಂಡರನ್ನು ಕೊಂಡುಕೊಳ್ಳುವಾಗ ಅದರ ದಿನಾಂಕವನ್ನೊಮ್ಮೆ ಗಮನಿಸುವುದನ್ನು ಮರೆಯಬೇಡಿ.

ಇದನ್ನ ಆದಷ್ಟು ನಿಮ್ಮ ಫ್ರೆಂಡ್ಸ್ ಜೊತೆ ಹಂಚಿಕೊಳ್ಳಿ