ಇಂದಿನಿಂದ ಜಿಯೋ ಬ್ರಾಡ್‍ಬ್ಯಾಂಡ್ ದರ್ಬಾರ್; ಏನೆಲ್ಲಾ ಆಪರ್? ಅಪ್ಲೈ ಮಾಡೋದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.!

0
563

ಈಗಾಗಲೇ ಮೊಬೈಲ್ ಸಿಮ್-ಗಳಲ್ಲಿ ಕ್ರಾಂತಿ ಮೂಡಿಸಿರುವ jio ಇಂದಿನಿಂದ ಮತ್ತೊಂದು ಹೊಸ ಕ್ರಾಂತಿಗೆ ಚಾಲನೆ ನೀಡಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಮಾರುಕಟ್ಟೆಯಲ್ಲಿ ಸಂಚಲನ ಹುಟ್ಟಿಸಿದೆ ಜಿಯೋ ಫೈಬರ್ ಎಂಟ್ರಿ ಕೊಟ್ಟಿದೆ. ಇದರಿಂದ ಅಗ್ಗದ ದರದಲ್ಲಿ ಮನೆ ಮನೆಗೂ ಎಂಟ್ರಿ ಕೊಡಲಿದೆ. ಮೊದಲ ಹಂತದ ಬ್ರಾಡ್‌ಬ್ಯಾಂಡ್ ಸೇವೆ ಸುಮಾರು 1600 ಪಟ್ಟಣ/ನಗರ ಪ್ರದೇಶಗಳಲ್ಲಿ ಶುರುವಾಗಲಿದೆ. ಈ ಹೊಸ ಸೇವೆ ಇಂದಿನಿಂದ ಕಾರ್ಯಾರಂಭಿಸಲಿದೆ. ಜೊತೆಗೆ, ಉಚಿತ ಲ್ಯಾಂಡ್‌ಲೈನ್ ಹೋಮ್ ಫೋನ್ ಸೌಲಭ್ಯ, ಉಚಿತ ಜಿಯೋ ಟಿವಿ ಮತ್ತು ಜಿಯೋ ಸಿನೆಮಾ ಸೇವೆ, ಜಿಯೋ ಸೆಟ್‌ಟಾಪ್ ಬಾಕ್ಸ್ ಸೇವೆಗಳನ್ನು ಒದಗಿಸುವ ಬಗ್ಗೆ ಜಿಯೋ ಪ್ರಕಟಿಸಿದೆ.


Also read: ಸ್ಮಾರ್ಟ್‌ಫೋನ್‌ ಬಳಕೆದಾರರೇ ಎಚ್ಚರ; ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ವೈರಸ್ ದಾಳಿ, ನಿಮ್ಮ ಮೊಬೈಲ್ -ನಲ್ಲಿ ಈ ವೈರಸ್ ಇದಿಯಾ ಚೆಕ್ ಮಾಡಿ..

ಏನಿದು jio ಕ್ರಾಂತಿ?

ಹೌದು ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ”ಎಲ್ಲಾ ಜಿಯೋಫೈಬರ್ ಗ್ರಾಹಕರಿಗೆ ಪೂರಕವಾಗಿ ಉಚಿತ ಸೆಟ್‌ಟಾಪ್ ಬಾಕ್ಸ್ ನೀಡುತ್ತದೆ” ಎಂದು ಮೂಲಗಳು ತಿಳಿಸಿವೆ. ಟೆಲಿಕಾಂ ಆಪರೇಟರ್ ಜಿಯೋ ತನ್ನ ಪ್ರತಿ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ಉಚಿತ ಸೆಟ್ ಟಾಪ್ ಬಾಕ್ಸ್ ನೀಡಿ, ಮನೆ ಮನೆಯ ಕೇಬಲ್ ಟಿವಿ ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಮೂಲದ ದೇಶದಲ್ಲಿ ಮತ್ತೊಮ್ಮೆ ಕಿಚ್ಚು ಹಚ್ಚಿಸಲು ಅಂಬಾನಿ ರೆಡಿಯಾಗಿದ್ದಾರೆ. ಅಮೆರಿಕದಲ್ಲಿ ಸಾಧಾರಾಣ ಡೇಟಾ ಸ್ಪೀಡ್ 90 ಎಂಬಿಪಿಎಸ್(ಮೆಗಾ ಬೈಟ್ಸ್ ಪರ್ ಸೆಕೆಂಡ್) ಇದ್ದರೆ, ಜಿಯೋದ ಕಡಿಮೆ ಸ್ಪೀಡ್ 100 ಎಂಬಿಪಿಎಸ್ ಇರಲಿದೆ. ಮುಂದೆ 1 ಜಿಬಿಪಿಎಸ್(ಗಿಗಾ ಬೈಟ್ಸ್ ಪರ್ ಸೆಕೆಂಡ್) ವೇಗದಲ್ಲಿ ಸೇವೆ ನೀಡಲಾಗುವುದು ಎಂದು ಮುಕೇಶ್ ಅಂಬಾನಿ ವಿವರಿಸಿದರು.


Also read: ರಾಜ್ಯದಲ್ಲಿ ಹೆಚ್ಚಾದ ರೋಬೋಟ್-ಗಳ ದರ್ಬಾರ್; ಸಿಲಿಕಾನ್ ಸಿಟಿಯ ಶಾಲೆಯೊಂದರಲ್ಲಿ ರೋಬೋಟ್‌ ಟೀಚರ್‌.!

ಬೆಲೆ ಎಷ್ಟು? ವಿಶೇಷತೆ ಏನು?

ತಿಂಗಳಿಗೆ 700 ರೂ. ಕನಿಷ್ಟ ಪ್ಯಾಕ್ ಇರಲಿದ್ದು 10 ಸಾವಿರ ರೂ. ಗರಿಷ್ಟ ಪ್ಯಾಕ್ ಇರಲಿದೆ. ದೇಶದ ಒಳಗಡೆಯ ಕರೆಗೆ ಸಂಪೂರ್ಣ ಉಚಿತವಾಗಿದ್ದು, ವಿದೇಶದ ಕರೆಗಳೂ ಕಡಿಮೆ ದರದಲ್ಲಿ ಇರಲಿದೆ. ಅದರಲ್ಲೂ ಅಮೆರಿಕ ಮತ್ತು ಕೆನಡಾ ದೇಶಗಳಿಗೆ ತಿಂಗಳಿಗೆ 500 ರೂ. ಪಾವತಿಸಿದ್ರೆ ಅನ್‍ಲಿಮಿಟೆಡ್ ಕರೆ ಮಾಡಬಹುದು. ಇತ್ತೀಚಿನ ವರದಿ ಪ್ರಕಾರ, ಜಿಯೋಫೈಬರ್ ಗ್ರಾಹಕರು ಚಲನಚಿತ್ರಗಳು ಮತ್ತು ಪ್ರಮುಖ ಮನರಂಜನಾ ಮೊಬೈಲ್ ಅಪ್ಲಿಕೇಶನ್‌ಗಳ ಇತರ ವೀಡಿಯೊ ವಿಷಯಗಳಿಗೆ ಉಚಿತ ಪ್ರವೇಶವನ್ನು ಹೊಂದಿರುತ್ತಾರೆ.ಅವರ ಚಂದಾದಾರಿಕೆ ಶುಲ್ಕವನ್ನು ಮಾಸಿಕ ಬ್ರಾಡ್‌ಬ್ಯಾಂಡ್ ಸಂಪರ್ಕ ದರಗಳಲ್ಲಿ ಒಟ್ಟುಗೂಡಿಸಲಾಗುತ್ತದೆ ಮತ್ತು ಯಾವುದೇ ಪ್ರತ್ಯೇಕ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಇದರಿಂದ ಕೇಬಲ್ ಟಿವಿ ಗ್ರಾಹಕರ ಕಣ್ಣು ಜಿಯೋ ಫೈಬರ್‌ನತ್ತ ವಾಲುವ ಸಾಧ್ಯತೆ ಹೆಚ್ಚಾಗಿದೆ.


Also read: ವಾಹನ ಚಲಾಯಿಸುವ ಮುನ್ನ ಈ ಮಾಹಿತಿ ನೋಡಿ; ರೂಲ್ಸ್ ಉಲ್ಲಂಘನೆ ಮಾಡಿದ ಬೈಕಿಗೆ 24 ಆಟೋಗೆ 32 ಸಾವಿರ ರೂ. ದಂಡ ಬಿತ್ತು.!

2016ರಲ್ಲಿ ಜಿಯೋ ತನ್ನ ಮೊಬೈಲ್ ಸೇವೆಗೆ ಎಂಟ್ರಿ ಕೊಟ್ಟಾಗ ಮೂರು ತಿಂಗಳು ವೆಲಕಂ ಆಫರ್ ಬಿಡುಗಡೆ ಮಾಡಿತ್ತು. ಮೂರು ತಿಂಗಳು ಉಚಿತವಾಗಿ ಡೇಟಾ ನೀಡುವ ಆಫರ್ ಭರ್ಜರಿ ಯಶಸ್ವಿ ಕಂಡಿತ್ತು. ಈಗ ಇದೇ ರೀತಿಯ ಉಚಿತ ಆಫರ್ ಬಿಡುಗಡೆ ಮಾಡಿದೆ. ಒಂದು ವರ್ಷದ ವಾರ್ಷಿಕ ಪ್ಲಾನ್ ಖರೀದಿ ಮಾಡಿದವರಿಗೆ ಉಚಿತವಾಗಿ 4ಕೆ ಎಲ್‍ಇಡಿ ಟಿವಿ ಮತ್ತು 4ಕೆ ಸೆಟ್ ಟಾಪ್ ಬಾಕ್ಸ್ ನೀಡಲಿದೆ. ಗ್ರಾಹಕರನ್ನು ಸೆಳೆಯಲು ಜಿಯೋ ಮತ್ತೊಂದು ಆಫರ್ ಬಿಡುಗಡೆ ಮಾಡಿದ್ದು ಇನ್ನು ಮುಂದೆ ಬಿಡುಗಡೆಯಾದ ದಿನವೇ ಮನೆಯಲ್ಲಿ ಕುಳಿತು ಚಿತ್ರವನ್ನು ವೀಕ್ಷಿಸಬಹುದು. 2020ರ ಮಧ್ಯಂತರಲ್ಲಿ ಇದು ಜಾರಿಯಾಗಲಿದೆ, ಇದಕ್ಕೆ ‘ಜಿಯೋ ಫಸ್ಟ್ ಡೇ ಫಸ್ಟ್ ಶೋ‘ ಹೆಸರನ್ನು ಇರಿಸಿದೆ. ಅದಕ್ಕಾಗಿ ಜಿಯೋ ಕಂಪನಿ ವೆಬ್‌ಸೈಟ್ ಅಥವಾ ಮೈ ಜಿಯೋ ಆ್ಯಪ್ ಮೂಲಕ ಜಿಯೋ ಫೈಬರ್ ಸೇವೆಗೆ ಅರ್ಜಿ ಸಲ್ಲಿಸಬಹುದು.